![](https://www.chandravallinews.com/wp-content/uploads/2023/12/KPSC1541967308.jpg)
i
ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿಯ ಪರಿಷ್ಕೃತ ಕೀ ಉತ್ತರ ಪ್ರಕಟ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಲಾದ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕರು 242 (ಉ.ಮೂ.ವೃಂದ) ಹುದ್ದೆಗಳು ಹಾಗೂ ಸಹಕಾರ ಇಲಾಖೆಯ ಸಹಕಾರ ಸಂಘಗಳ ನಿಬಂಧಕರ ಕಚೇರಿಯಲ್ಲಿನ ಸಹಕಾರ ಸಂಘಗಳ ನಿರೀಕ್ಷಕರ 47 (ಉ.ಮೂ.ವೃಂದ) ಹುದ್ದೆಗಳಿಗೆ ದಿನಾಂಕ: 5-11-2023 ರಂದು ನಡೆಸಿದ ಸಾಮಾನ್ಯ ಜ್ಞಾನ ಪತ್ರಿಕೆ-01 (ವಿಷಯ ಸಂಕೇತ – 559) ಮತ್ತು ಪತ್ರಿಕೆ-2 (ವಿಷಯ ಸಂಕೇತ – 560)ರ ಪರಿಷ್ಕೃತ ಕೀ- ಉತ್ತರಗಳನ್ನು ಆಯೋಗದ ಅಂತರ್ಜಾಲದಲ್ಲಿ http://kpsc.kar.nic.in/KeyAnswers ರಡಿ ಪ್ರಕಟಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.