![](https://www.chandravallinews.com/wp-content/uploads/2024/06/WhatsApp-Image-2024-06-26-at-3.20.05-PM-1.jpeg)
i
3 ವರ್ಷದ ಹಿಂದಿನ ಫೋಟೋ ಈಗ ಅದು ವಿಶೇಷ ಸುದ್ದಿ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಕಳೆದೆರಡು ದಿನಗಳಿಂದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಆಗ್ತಿದೆ. ಪ್ರಜ್ವಲ್ ರೇವಣ್ಣ, ದರ್ಶನ್, ಸೂರಜ್ ರೇವಣ್ಣ, ಭವಾನಿ ರೇವಣ್ಣ ಈ ನಾಲ್ವರು ಒಟ್ಟಿಗೆ ಒಂದೇ ಫ್ರೇಮ್ನಲ್ಲಿರುವ ಅಪರೂಪದ ಚಿತ್ರವಿದು. ಈ ಹಳೆಯ ಫೋಟೋ ಸುಮಾರು ಮೂರು ವರ್ಷಗಳ ಹಿಂದೆಯೇ ತೆಗೆದಿದ್ದು, ಅಂದು ಈ ಫೋಟೋ ಸುದ್ದಿಯೇ ಇರಲಿಲ್ಲ. ಪತ್ರಿಕೆಗಳಲ್ಲಿ ಸಣ್ಣ ಪುಟದಲ್ಲಿ ಪ್ರಕಟಿಸಲಾಗಿತ್ತು. ಆದರೆ ಇಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಪ್ರತಿಯೊಬ್ಬರು ಈ ಫೋಟೋ ಹಂಚಿಕೊಳ್ಳುತ್ತಿದ್ದಾರೆ. ವಿಚಿತ್ರವೆಂದರೂ ಫೋಟೋದಲ್ಲಿ ಮೂವರೂ ಪ್ರತ್ಯೇಕ ಪ್ರಕರಣಗಳಲ್ಲಿ ಇತ್ತೀಚೆಗೆ ಒಬ್ಬರಿಂದೊಬ್ಬರಂತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ಹಾಸನ ಪೆನ್ಡ್ರೈವ್ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಪ್ರಜ್ವಲ್ ಸಹೋದರ ಸೂರಜ್ ರೇವಣ್ಣ ಅಸಹಜ ಪ್ರಕರಣದಲ್ಲಿ, ರೇಣುಕ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಈ ಮೂವರು ಪರಪ್ಪನ ಆಗ್ರಹಾರದ ಜೈಲು ಸೇರಿರುವುದು ವಿಚಿತ್ರಗಳಲ್ಲೊಂದು ಅನಿಸಲ್ಪಟ್ಟಿದೆ.? ಇನ್ನು ಭವಾನಿ ರೇವಣ್ಣ ಕೂಡ ಅಪಹರಣ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಹೀಗಾಗಿ ಭವಾನಿ ರೇವಣ್ಣ ಜೊತೆಗೆ ಈ ಮೂವರು ಪರಪ್ಪನ ಅಗ್ರಹಾರ ವಾಸಿಗಳು ಒಂದೇ ಪ್ರೇಮಿನಲ್ಲಿ ಕಾಣಿಸಿರುವುದರಿಂದ ಟ್ರೋಲಿಗರು ಚಿತ್ರವಿಚಿತ್ರ ಕಾಮೆಂಟ್ ಮಾಡುತ್ತಿದ್ದಾರೆ.
one frame Many Cases ಇಬ್ರು ಕಾರ್ ಬಗ್ಗೆ ಮಾತಾಡ್ದೋರು, ಒಬ್ರು ಇಂಜಿನ್ ಬಿಟ್ಟೋರು, ಒಬ್ರು ಡಿಕ್ಕಿ ಅಂತಾ ಬರೆದುಕೊಂಡಿದ್ದಾರೆ. ಇನ್ನೊಬ್ಬರು ಬರೆದುಕೊಂಡಿದ್ದಾರೆ. ಮೂವರು ಲೇಜೆಂಡ್ಸ್ ಒಂದೇ ಪ್ರೇಂಮಿನಲ್ಲಿ ಎಂದಿದ್ದಾರೆ. ಮತ್ತೊಬ್ಬಾತ, ‘ದಯವಿಟ್ಟು ಪರಪ್ಪನ ಅಗ್ರಹಾರದದಲ್ಲಿ ಪ್ರಜ್ವಲ್ ರೇವಣ್ಣರಿಂದ ಪವಿತ್ರಾ ಗೌಡರನ್ನ, ಸೂರಜ್ ರೇವಣ್ಣರಿಂದ ದರ್ಶನ್ರನ್ನ ಕಾಪಾಡಿ‘ ಅಂತಾ ಬರೆದುಕೊಂಡಿದ್ದಾರೆ.