![](https://www.chandravallinews.com/wp-content/uploads/2024/06/job-1-5-1024x529.jpg)
i
ಸಮುದಾಯ ಸಂಪನ್ಮೂಲ ಹುದ್ದೆಗೆ ಅರ್ಜಿ ಆಹ್ವಾನ
ಚಂದ್ರವಳ್ಳಿ ನ್ಯೂಸ್, ತುಮಕೂರು:
ಮಹಾನಗರ ಪಾಲಿಕೆಯ ಡೇ-ನಲ್ಮ್ ಅಭಿಯಾನ ಅನುಷ್ಟಾನಕ್ಕಾಗಿ ೨ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳನ್ನು ಗೌರವಧನ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಸ್ವ-ಸಹಾಯ ಗುಂಪುಗಳಲ್ಲಿ ಸದಸ್ಯತ್ವ ಹೊಂದಿರುವ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಪ್ರಕಟಣೆ ಹೊರಡಿಸಿದ ೭ ದಿನಗಳೊಳಗಾಗಿ ಅರ್ಜಿ ನಮೂನೆ ಜೊತೆಗೆ ಅಗತ್ಯ ದಾಖಲಾತಿಗಳನ್ನು ಆಯುಕ್ತರು, ತುಮಕೂರು ಮಹಾನಗರಪಾಲಿಕೆ, ತುಮಕೂರು ಇವರಿಗೆ ಸಲ್ಲಿಸತಕ್ಕದ್ದು.ಅರ್ಜಿದಾರರು ೧೮ ರಿಂದ ೪೫ ವರ್ಷದ ವಯೋಮಾನದವರಾಗಿರಬೇಕು. ಕನಿಷ್ಟ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು. ಡೇ-ನಲ್ಮ್ ಪ್ರದೇಶ ಮಟ್ಟದ ಒಕ್ಕೂಟ/ ಸ್ವ-ಸಹಾಯ ಸಂಘದಲ್ಲಿ ಕನಿಷ್ಟ ೩ ವರ್ಷಗಳ ಅವಧಿಗೆ ಸದಸ್ಯರಾಗಿರಬೇಕು. ಕಂಪ್ಯೂಟರ್ ನಿರ್ವಹಣೆಯ ಜ್ಞಾನ ಹೊಂದಿರಬೇಕು. ಯಾವುದೇ ಸರ್ಕಾರಿ/ಸರ್ಕಾರೇತರ ಸಂಸ್ಥೆಗಳಲ್ಲಿ ಪೂರ್ಣಾವಧಿ ಅಥವಾ ತಾತ್ಕಾಲಿಕ ಉದ್ಯೋಗಸ್ಥರಾಗಿರಬಾರದು ಎಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.