i
ತರಬೇತಿಗೆ ಅರ್ಜಿ ಆಹ್ವಾನ
ಚಂದ್ರವಳ್ಳಿ ನ್ಯೂಸ್, ತುಮಕೂರು:
ಸಾರ್ವಜನಿಕ ಗ್ರಂಥಾಲಯ ಇಲಾಖೆಯಡಿ ನಡೆಯುತ್ತಿರುವ ಗ್ರಂಥಾಲಯ ವಿಜ್ಞಾನ ತರಬೇತಿ ಶಾಲೆಯಲ್ಲಿ ೬ ತಿಂಗಳ ತರಬೇತಿ ನೀಡಲು ಪಿಯುಸಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಆಹ್ವಾನಿಸಲಾಗಿದೆ.ಹಾಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯ ಇಲಾಖೆಯ ’ಡಿ’ ದರ್ಜೆಯ ಗ್ರಂಥಾಲಯ ಸಹವರ್ತಿಗಳು ಸಂಬಂಧಪಟ್ಟ ಉಪನಿರ್ದೇಶಕರು/ಮುಖ್ಯ ಗ್ರಂಥಾಲಯಾಧಿಕಾರಿಗಳು, ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರು ಸಂಬಂಧಪಟ್ಟ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇತರೆ ಸಂಸ್ಥೆಯಿಂದ ಬರುವ ಅಭ್ಯರ್ಥಿಗಳು ತಮ್ಮ ಸಂಸ್ಥೆಯ ಮುಖ್ಯಸ್ಥರ ಮುಖಾಂತರ ಅರ್ಜಿ ಸಲ್ಲಿಸಬಹುದು. ಆಸಕ್ತರು ತಮ್ಮ ಭರ್ತಿ ಮಾಡಿದ ಅರ್ಜಿಯೊಂದಿಗೆ ಪಿ.ಯು.ಸಿ ಅಂಕಪಟ್ಟಿ, ಕನ್ನಡ ಮಾಧ್ಯಮ/ಗ್ರಾಮೀಣ/ಮಹಿಳೆ/ಮಾಜಿ ಸೈನಿಕ/ ೩೭೧ ಎ, ಜಾತಿ ಪ್ರಮಾಣಪತ್ರ, ಸೇವೆಗೆ ಸೇರಿದ ದಿನಾಂಕ, ವೇತನ ಪ್ರಮಾಣಪತ್ರ, ನಡವಳಿಕೆ ಪ್ರಮಾಣ ಪತ್ರದ ದೃಡೀಕೃತ ನಕಲು ಪ್ರತಿಗಳನ್ನು ಲಗತ್ತಿಸಬೇಕು. ಪಿ.ಯು.ಸಿ ಪರೀಕ್ಷೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳು ಕನಿಷ್ಟ ಶೇಕಡ ೪೦ರಷ್ಟು ಹಾಗೂ ಎಸ್.ಸಿ/ಎಸ್.ಟಿ. ಅಭ್ಯರ್ಥಿಗಳು ಶೇ. ೩೫ರಷ್ಟು ಅಂಕ ಪಡೆದಿರಬೇಕು. ಅರ್ಜಿ ಸಲ್ಲಿಸಲು ಜುಲೈ ೧೯ ಕಡೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಛೇರಿ, ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಉದ್ಯಾನವನ, ಬೆಂಗಳೂರು-೫೬೦೦೦೧(ದೂ.ವಾ.ಸಂ. ೦೮೦-೨೨೨೧೨೧೨೮); ಉಪನಿರ್ದೇಶಕರ ಕಛೇರಿ, ನಗರ ಕೇಂದ್ರ ಗ್ರಂಥಾಲಯ, ಡಿ.ಸಿ.ಕಛೇರಿಯ ಆವರಣ, ಧಾರವಾಡ-೫೮೦೦೦೧(ದೂ.ವಾ.ಸಂ. ೦೮೩೬-೨೪೪೨೪೬೫); ಉಪನಿರ್ದೇಶಕರ ಕಛೇರಿ, ನಗರ ಕೇಂದ್ರ ಗ್ರಂಥಾಲಯ, ಬಾವುಟಗಡ್ಡೆ, ಮಂಗಳೂರು-೫೭೫೦೦೩(ದೂ.ವಾ.ಸಂ: ೦೮೨೪-೨೪೨೫೮೭೩); ಉಪನಿರ್ದೇಶಕರ ಕಛೇರಿ, ನಗರ ಕೇಂದ್ರ ಗ್ರಂಥಾಲಯ, ಎಂ.ವಿ.ಎಚ್.ಎಸ್ ಶಾಲೆ ಆವರಣ, ಸೂಪರ್ ಮಾರ್ಕೆಟ್, ಜಗತ್ ವೃತ್ತ, ಕಲಬುರಗಿ- ೫೮೫೧೦೧(ದೂ.ವಾ. ಸಂ: ೦೮೪೭೨-೨೨೧೫೪೩) ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.