![](https://www.chandravallinews.com/wp-content/uploads/2024/06/WhatsApp-Image-2024-06-27-at-6.36.37-AM-1024x772.jpeg)
i
ಜುಲೈ 1ರಂದು ನಾಗರೀಕರಿಗೆ ಬಂದೂಕು ತರಬೇತಿ ಶಿಬಿರ
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಜುಲೈ 1ರಂದು ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ 10 ನೇ ತಂಡದ ನಾಗರೀಕ ಬಂದೂಕು ತರಬೇತಿ ಶಿಬಿರವನ್ನು ನಡೆಸಲಾಗುತ್ತದೆ ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.
ಆಸಕ್ತ ನಾಗರೀಕರು ಈ ಬಂದೂಕು ತರಬೇತಿಯನ್ನು ಪಡೆಯಲು ಇಚ್ಚಿಸಿದಲ್ಲಿ, ಸದರಿ ತಬೇತಿಗೆ ಸಂಬಂಧಿಸಿದ ಅರ್ಜಿಗಳನ್ನು ಠಾಣೆಯಲ್ಲಿಯೇ ವಿತರಿಸಲಾಗುತ್ತದೆ.
ಸಾರ್ವಜನಿಕರು ಸ್ವತಹ ಬಂದೂಕು ಲೈಸೆನ್ಸ್ ಪಡೆಯಲು ಹಾಗೂ ಬಂದೂಕು ಪರವಾನಗಿ ನವೀಕರಣ ಮಾಡಿಸಿಕೊಳ್ಳಲು ಇಚ್ಛಿಸುವವರು ಈ ತರಬೇತಿಯನ್ನು ಪಡೆದು ಸದುಪಯೋಗ ಪಡಿಸಿಕೊಳ್ಳಲು ಪೊಲೀಸ್ ಇಲಾಖೆ ಕೋರಿದೆ.
ನಿಬಂಧನೆಗಳು:-
- ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು.
- ಅಭ್ಯರ್ಥಿಯು 21 ವರ್ಷಕ್ಕಿಂತ ಮೇಲ್ಪಟ್ಟು, ಆರೋಗ್ಯವಂತರಾಗಿರಬೇಕು.
- ಅಭ್ಯರ್ಥಿಗಳು ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿರಬಾರದು.
- ನಿಷೇಧಿತ ಶಸ್ತ್ರಾಸ್ತ್ರದೊಂದಿಗೆ ತರಬೇತಿ ನೀಡಲಾಗುವುದು.
ಅರ್ಜಿ ಜೊತೆಗೆ ಸಲ್ಲಿಸಬೇಕಾದ ದಾಖಲೆಗಳು:
- ಅರ್ಜಿಯೊಂದಿಗೆ ಅಭ್ಯರ್ಥಿಗಳ 03 ಭಾವಚಿತ್ರಗಳನ್ನು ಕಡ್ಡಾಯವಾಗಿ ಒದಗಿಸುವುದು, ಅದರಲ್ಲಿ ಒಂದು ಭಾವಚಿತ್ರವನ್ನು ಅರ್ಜಿಗೆ ಅಂಟಿಸುವುದು, ಹಾಗೂ ಅದರ ಮೇಲೆ ತಮ್ಮ ವ್ಯಾಪ್ತಿಗೆ ಒಳಪಟ್ಟಿರುವ ಪೊಲೀಸ್ ಠಾಣೆಯಿಂದ ದೃಡೀಕರಿಸುವುದು. ಉಳಿದ ಎರಡು ಭಾವಚಿತ್ರಗಳನ್ನು ಅರ್ಜಿಯ ಜೊತೆಗೆ ಲಗತ್ತಿಸುವುದು.
- ಪೂರ್ವಾಪರ ವಿಚಾರಣೆ ಮಾಡಿದ ನಂತರ ಠಾಣಾಧಿಕಾರಿಗಳು ಅರ್ಜಿಯನ್ನು ದೃಡೀಕರಿಸುತ್ತಾರೆ.
- ಠಾಣಾಧಿಕಾರಿಗಳಿಂದ ಸಿಸಿಐಎಸ್ ದೃಡೀಕರಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ.
- ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯವಾಗಿದೆ.
- ಆಧಾರ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ನೀಡುವುದು.
ಈ ಮೇಲ್ಕಂಡ ನಿಯಮಿತ ಷರತ್ತುಗಳು/ನಿಯಮಗಳನ್ನು ಪಾಲಿಸದಿದ್ದಲ್ಲಿ, ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಆಯಾ ಠಾಣೆಗಳಿಂದ ಸ್ವೀಕರಿಸಲು ಮತ್ತು ದಿನಾಂಕ:29/06/2024 ರೊಳಗೆ ಮಾಹಿತಿಯನ್ನು ಕಡ್ಡಾಯವಾಗಿ ಈ ಕಚೇರಿಗೆ ಸಲ್ಲಿಸಲು ಕೋರಲಾಗಿದೆ.
ತರಬೇತಿಯನ್ನು ದಿನಾಂಕ:01/07/2024 ರಿಂದ 07/07/2024 ರವರೆಗೆ ಆಯೋಜಿಸಲಾಗುವುದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.