![](https://www.chandravallinews.com/wp-content/uploads/2024/06/WhatsApp-Image-2022-11-18-at-1.52.02-PM.jpeg)
i
ಜು.೧ರಿಂದ ಗ್ರಾ.ಪಂ.ಗಳಲ್ಲಿ ಜನನ, ಮರಣ ನೋಂದಣಿ
ಚಂದ್ರವಳ್ಳಿ ನ್ಯೂಸ್, ತುಮಕೂರು:
ಗ್ರಾಮೀಣ ಪ್ರದೇಶದಲ್ಲಿ ನಾಗರಿಕ ನೋಂದಣಿ ಪದ್ಧತಿಯನ್ನು ಬಲಪಡಿಸಲು ಹಾಗೂ ಘಟಿಸುವ ಶೇ.೧೦೦ರಷ್ಟು ಜನನ, ಮರಣ ನೋಂದಣಿ ದಾಖಲಿಸಲು ಸರ್ಕಾರವು ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಗಳಿಗೆ ಹೊಸ ಜವಾಬ್ದಾರಿ ನೀಡಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಜುಲೈ ೧ರಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಜನನ ಅಥವಾ ಮರಣ ಘಟನೆ ಸಂಭವಿಸಿದ ೩೦ ದಿನಗಳ ಒಳಗಾಗಿ ನೋಂದಣಿ ಮಾಡಿ ಪ್ರಮಾಣಪತ್ರ ವಿತರಿಸುವ ಕಾರ್ಯವನ್ನು ಆರಂಭ ಮಾಡಲಾಗುವುದು. ಪಂಚಾಯತಿಯ ಪ್ರತಿಯೊಬ್ಬ ಕಾರ್ಯದರ್ಶಿಯು ನಿಗಧಿತ ಅವಧಿಯೊಳಗಾಗಿ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ವಿತರಿಸುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕೆಂದು ಜಿಲ್ಲಾ ಪಂಚಾಯತ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಭು ಸೂಚಿಸಿದ್ದಾರೆ. ಜನನ, ಮರಣ ಘಟನೆಗಳು ಸಂಭವಿಸಿದ ೩೦ ದಿನಗಳವರೆಗಿನ ಪ್ರಕರಣಗಳಲ್ಲಿ ನೋಂದಾಯಿಸಲು ಪಂಚಾಯಿತಿ ಕಾರ್ಯದರ್ಶಿ ಹಾಗೂ ೩೦ ದಿನಗಳಿಂದ ಒಂದು ವರ್ಷದವರೆಗಿನ ಪ್ರಕರಣಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳನ್ನು ಜನನ, ಮರಣ ನೋಂದಣಾಧಿಕಾರಿಗಳನ್ನಾಗಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.ಜನನ/ಮರಣ ನಡೆದ ೨೧ ದಿನಗಳ ಒಳಗಾಗಿ ನೋಂದಣಿ ಮಾಡಿ ಪ್ರಮಾಣಪತ್ರವನ್ನು ಉಚಿತವಾಗಿ, ೨೧ ದಿನಗಳಿಂದ ೩೦ ದಿನಗಳ ನಡುವೆ ನೋಂದಣಿ ಮಾಡಿದರೆ ೨ ರೂ. ವಿಳಂಬ ಶುಲ್ಕ, ೩೦ ದಿನಗಳಿಂದ ಒಂದು ವ?ದವರೆಗಿನ ಪ್ರಕರಣಗಳಲ್ಲಿ ೫ ರೂ. ಗಳ ಶುಲ್ಕ ಪಡೆದು ನೋಂದಣಿ ಮಾಡಬಹುದು.ಕರ್ನಾಟಕ ಜನನ, ಮರಣ ನೋಂದಣಿ ನಿಯಮಗಳ ಪ್ರಕಾರ ೧ ವ?ದ ಬಳಿಕ ನೋಂದಣಿ ಮಾಡಿದರೆ ಪ್ರಥರ್ಮ ದರ್ಜೆ ದಂಡಾಧಿಕಾರಿ ಅವರ ಆದೇಶದ ಜೊತೆಗೆ ೧೦ ರೂ. ವಿಳಂಬ ಶುಲ್ಕ ಪಡೆದು ನೋಂದಣಿ ಮಾಡಬೇಕು. ಹೆಚ್ಚಿನ ವಿವರಗಳಿಗೆ ಇ-ಮೇಲ್ ವಿಳಾಸ crbdkar@gmail.com ಅಥವಾ ಇ-ಜನ್ಮ ಸಹಾಯವಾಣಿ ಸಂಖ್ಯೆ : ೧೮೦೦-೪೨೫-೬೫೭೮ನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.