![](https://www.chandravallinews.com/wp-content/uploads/2024/07/WhatsApp-Image-2024-07-01-at-9.05.09-PM-1.jpeg)
i
ಫುಟ್ಬಾಲ್ ಲೀಗ್ ಪಂದ್ಯಾವಳಿ: ಜುಲೈ 2 ಕ್ಕೆ ಸೆಮಿಫೈನಲ್ಸ್, ಜುಲೈ 3 ಫೈನಲ್ಸ್
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಜಿಲ್ಲಾ ಫುಟ್ಬಾಲ್ ಸಂಸ್ಥೆಯು ಜೂನ್ 24 ರಿಂದ ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪುಟ್ಬಾಲ್ ಲೀಗ್ ಪಂದ್ಯಾವಳಿಯು ಈಗ ಸೆಮಿಫೈನಲ್ ಹಂತ ತಲುಪಿದೆ, ಜುಲೈ, 2 ರಂದು ಸೆಮಿ ಫೈನಲ್ಸ್ ಪಂದ್ಯಾವಳಿ ನಡೆಯಲಿವೆ. ಇದಾದ ನಂತರ ಜುಲೈ 3 ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಸದಸ್ಯ ವಿಜಯಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದುಮಾತನಾಡಿದ ಅವರು, ಜೂನ್ 24 ರಂದು ಈ ಪಂದ್ಯಾವಳಿಗೆ ಶಿವಮೊಗ್ಗ ನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪ ವಿದ್ಯುಕ್ತವಾಗಿ ಚಾಲನೆ ನೀಡುವ ಮೂಲಕ ಶುರುವಾಗಿದ್ದ ಪಂದ್ಯಾವಳಿ ಇದುವರೆಗೂ ಯಶಸ್ವಿ ಯಾಗಿ ನಡೆದು, ಈಗ ಸೆಮಿಫೈನಲ್ಸ್ ಹಂತಕ್ಕೆ ಕಾಲಿಟ್ಟಿದೆ ಎಂದರು.
ಫುಟ್ಬಾಲ್ ಲೀಗ್ ಪಂದ್ಯಾವಳಿಗೆ ಶಿವಮೊಗ್ಗ ನಗರದ ಎ ವಿಭಾಗದ ಒಟ್ಟು 9 ಫುಟ್ಬಾಲ್ ಕ್ಲಬ್ ಗಳು ಭಾಗಿಯಾಗಿವೆ. ಎಲ್ಲಾ ಕ್ಲಬ್ ನ ಆಟಗಾರರು ತುಂಬಾ ಒಳ್ಳೆಯ ಆಟ ಪ್ರದರ್ಶಿಸಿರುವುದು, ಜಿಲ್ಲೆಯ ಫುಟ್ಬಾಲ್ ಬೆಳವಣಿಗೆಗೆ ತುಂಬಾ ಆಶಾದಾಯಕ ಎನಿಸಿದೆ ಎಂದರು.
ಇದರ ಹಿಂದೆ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಎಲ್ಲಾ ಪಧಾದಿಕಾರಿಗಳ ಪರಿಶ್ರಮದ ಜತೆಗೆ ನೆಹರು ಕ್ರೀಡಾಂಗಣದ ಸಿಬ್ಬಂದಿ ಮತ್ತು ಇಲ್ಲಿ ನ ಹಿರಿಯ ಫುಟ್ಬಾಲ್ ಆಟಗಾರರ ಸಹಕಾರವೂ ಕಾರಣ. ಜುಲೈ 2 ರ ಮಂಗಳವಾರದಿಂದ ಸೆಮಿಫೈನಲ್ಸ್ ಶುರುವಾಗಲಿದ್ದು, ಇದಾದ ನಂತರ ಜುಲೈ 3 ರಂದು ಫೈನಲ್ ಪಂದ್ಯಾವಳಿ ನಡೆಯಲಿದ್ದು, ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ಫುಟ್ಬಾಲ್ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪಂದ್ಯ ವೀಕ್ಷಣೆ ಮಾಡಬೇಕೆಂದು ಕೋರಿದರು.