ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ “ಕರ್ನಾಟಕ ಕಲಾಶ್ರೀ” ಪ್ರಶಸ್ತಿಗೆ 2025-26ನೇ ಸಾಲಿನ ಪುರಸ್ಕøತರನ್ನು ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಶುಭ ಧನಂಜಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಸಂಗೀತ ಮತ್ತು ನೃತ್ಯ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಹಿರಿಯ ಕಲಾವಿದರನ್ನು ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಪ್ರಶಸ್ತಿ ಪುರಸ್ಕೃತರ ವಿವರಗಳು:
ಗೌರವ ಪ್ರಶಸ್ತಿಗೆ ಗಮಕ ಪ್ರಕಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಧೂರ ಮೋಹನ ಕಲ್ಲೂರಾಯ, ಕಥಾ ಕೀರ್ತನದಲ್ಲಿ ಹಾಸನದ ಲೋಕೇಶ್ ದಾಸ್ ಆಯ್ಕೆಯಾಗಿದ್ದಾರೆ.
ವಾರ್ಷಿಕ ಪ್ರಶಸ್ತಿ:
ಕರ್ನಾಟಕ ಸಂಗೀತ: ಶ್ರೀ ವಿದ್ವಾನ್ ಎಂ. ವೆಂಕಟರಾಯ್ (ಡೋಲ್) – ಬೆಂಗಳೂರು ಗ್ರಾಮಾಂತರ, ಎ.ವಿ. ವಿಶ್ವನಾಥ (ಹಾರ್ಮೋನೀಯಂ) – ಕೋಲಾರ, ಡಾ. ಹಂಸಿನಿ ನಾಗೇಂದ್ರ (ಗಾಯನ) – ಮೈಸೂರು, ನಾಗೇಶ ಎ. ಬಪ್ಪನಾಡು (ನಾದಸ್ವರ) – ದಕ್ಷಿಣ ಕನ್ನಡ ಇವರು ಆಯ್ಕೆಯಾಗಿದ್ದಾರೆ.
ಹಿಂದೂಸ್ತಾನಿ ಸಂಗೀತ:
ಮೃತ್ಯುಂಜಯ ಶೆಟ್ಟರ್ (ಗಾಯನ) – ಧಾರವಾಡ, ರವೀಂದ್ರ ಸೊರಗಾವಿ (ಗಾಯನ) – ಬಾಗಲಕೋಟೆ ಪಂಚಾಕ್ಷರಿ ಅಣ್ಣಿಗೇರಿ (ಹಾರ್ಮೋನೀಯಂ) – ಗದಗ, ವಿಠಲ್ ಸಿದ್ದಪ್ಪ ಪೂಜಾರಿ (ತಬಲ) – ಬೀದರ ಇವರು ಆಯ್ಕೆಯಾಗಿದ್ದಾರೆ.
ನೃತ್ಯ: ಜಿಲಾನಿ ಭಾಷೆ (ಕೂಚಿಪುಡಿ) – ಬಳ್ಳಾರಿ, ಶಿವಪ್ರಕಾಶ (ಭರತನಾಟ್ಯ) – ಚಿತ್ರದುರ್ಗ, ಶ್ರೀಮತಿ ನಾಗರತ್ನ ಹಡಗಲಿ (ಭರತನಾಟ್ಯ) – ಧಾರವಾಡ ಇವದು ಆಯ್ಕೆಯಾಗಿದ್ದಾರೆ.
ಇತರ ಕಲಾ ಪ್ರಕಾರಗಳು:
ಸುಗಮ ಸಂಗೀತ: ಶ್ರೀಧರ್ ಅಯ್ಯರ್ – ಕೋಲಾರ,
ಕಥಾಕೀರ್ತನ (ತಬಲ): ಪಿ. ರಾಮಯ್ಯ – ಬೆಂಗಳೂರು, ಗಮಕ (ವಾಚನ): ವಿಶ್ವನಾಥ ಕುಲಕರ್ಣಿ – ಧಾರವಾಡ, ವಾದ್ಯ ತಯಾರಿಕೆ: ಕೃಷ್ಣ ಮೂರ್ತಿ – ಬೆಂಗಳೂರು, ಸಂಘ ಸಂಸ್ಥೆ: ಶ್ರೀ ಕೊಟ್ಟೂರೇಶ್ವರ ಸಂಗೀತ ವಿದ್ಯಾಲಯ ಕಲ್ಮಠ, ಗಂಗಾವತಿ – ಕೊಪ್ಪಳ ಇವರು ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಆಯೋಜಿಸಲಾಗುವುದು.
ಗೌರವ ಪ್ರಶಸ್ತಿ ಪುರಸ್ಕೃತರಿಗೆ 50,000 ನಗದು, ವಾರ್ಷಿಕ ಪ್ರಶಸ್ತಿಗೆ 25,000 ನಗದು ಸೇರಿದಂತೆ ಪ್ರಶಸ್ತಿ ವಿಗ್ರಹ, ಪ್ರಶಸ್ತಿ ಪತ್ರ, ಶಾಲು, ಹಾರ ಹಾಗೂ ಫಲ-ತಾಂಬೂಲಗಳನ್ನು ಒಳಗೊಂಡ “ಕರ್ನಾಟಕ ಕಲಾಶ್ರೀ ಪ್ರಶಸ್ತಿಯೊಂದಿಗೆ ಗೌರವಿಸಲಾಗುವುದು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಎನ್. ನರೇಂದ್ರಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

