2025-26 ನೇ ಶೈಕ್ಷಣಿಕ ಸಾಲಿಗೆ ವಿವಿಧ ಸಂಯೋಜನೆಗಾಗಿ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬೆಂಗಳೂರು ನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಾದ ಬಸವನಗುಡಿ, ಚಾಮರಾಜಪೇಟೆ, ಹೆಬ್ಬಾಳ, ಬಿ.ಟಿ.ಎಂ. ಲೇಔಟ್, ಬ್ಯಾಟರಾಯನಪುರ,

ಚಿಕ್ಕಪೇಟೆ, ಗಾಂಧಿನಗರ, ಜಯನಗರ, ಮಲ್ಲೇಶ್ವರಂ, ರಾಜಾಜಿನಗರ, ಶಾಂತಿನಗರ, ಶಿವಾಜಿನಗರ ಮತ್ತು ಯಲಹಂಕ ವ್ಯಾಪ್ತಿಯಲ್ಲಿರುವ ಕಾಲೇಜುಗಳಿಂದ ಮತ್ತು ಶಿಕ್ಷಣ ಸಂಸ್ಥೆಗಳಿಂದ ವಿವಿಧ ರೀತಿಯ ಸಂಯೋಜನೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕಾಲೇಜುಗಳು ಮತ್ತು ಆಡಳಿತ ಮಂಡಳಿಗಳು ಸರ್ಕಾರದ ಯು.ಯು.ಸಿ.ಎಂ.ಎಸ್ ತಂತ್ರಾಂಶದ ವೆಬ್ಸೈಟ್ https://uucms.karnataka.gov.in/  ಮುಖಾಂತರ ಮಾತ್ರ ಸಂಯೋಜನಾ ಅರ್ಜಿಗಳನ್ನು ಸಲ್ಲಿಸತಕ್ಕದ್ದು.

ಅರ್ಜಿಗಳನ್ನು ದಂಡ ಶುಲ್ಕ ರಹಿತವಾಗಿ ನವೆಂಬರ್ 21 ರೊಳಗೆ ಸಲ್ಲಿಸಬೇಕು.   ರೂ. 12,500 ದಂಡ ಶುಲ್ಕದೊಂದಿಗೆ ನವೆಂಬರ್ 26 ರವರೆಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್ ಸೈಟ್ www.bcu.ac.in  ನೋಡಬಹುದು ಎಂದು ಪ್ರಕಟಣೆ ತಿಳಿಸಿದೆ.

 

 

- Advertisement -  - Advertisement -  - Advertisement - 
Share This Article
error: Content is protected !!
";