24 ತೀರ್ಥಂಕರರ ಮೂರ್ತಿ ಸ್ಥಾಪನೆ- ದೇವಿ ಪ್ರತಿಷ್ಠಾಪನೆ

News Desk

 ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ದಿಗಂಬರ ಜೈನ ಸಂಘದ ವತಿಯಿಂದ ಶಿವಮೊಗ್ಗದ ಬಸವೇಶ್ವರ ನಗರ ಬಡಾವಣೆಯ ಮಹಾವೀರ ನಗರದಲ್ಲಿರುವ ಭಗವಾನ್ ೧೦೦೮ ಶ್ರೀ ಆದಿನಾಥ ಸ್ವಾಮಿ ಜಿನ ಮಂದಿರದಲ್ಲಿ ಮೇ ೨೮ರಿಂದ ೩೦ರವರೆಗೆ ಮಾನಸ್ಥಂಭೋಪರಿ ೨೪ ತೀರ್ಥಂಕರರ ಪಂಚಕಲ್ಯಾಣ ಪೂರ್ವಕ ಪ್ರತಿ?ಪನಾ ಮಹೋತ್ಸವ, ನೂತನ ಶಿಲಾಮಯ ಗರ್ಭಗುಡಿಯಲ್ಲಿ ಮಹಾಮಾತೆ ಶ್ರೀ ಪದ್ಮಾವತಿ ದೇವಿ ಹಾಗೂ ಮಹಾಮಾತೆ ಶ್ರೀ ಜ್ವಾಲಾಮಾಲಿನೀ ದೇವಿ ಮತ್ತು ಕ್ಷೇತ್ರಪಾಲ ಪ್ರತಿ?ಪನೆ, ನಾಗ ಪ್ರತಿ? ಮುಂತಾದ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಲಿದೆ. ತನ್ನಿಮಿತ್ತ ಈ ಲೇಖನ. . .

- Advertisement - 

ಜೈನ ಧರ್ಮ ವಿಶ್ವದ ಅನಂತ ಸತ್ಯಗಳ ಮೇಲೆ ಆಧಾರಿತವಾದ ಧರ್ಮ. ಪಾರಂಪರಿಕ ನಂಬಿಕೆ ಅನುಸಾರ ಋ?ಭದೇವ ಈ ಸತ್ಯಗಳನ್ನು ಮೊದಲು ಅರಿತವರು. ಈ ಅರಿವು ಪಡೆದವರನ್ನು ತೀರ್ಥಂಕರರೆಂದು ಕರೆಯಲಾಗುತ್ತದೆ. ಋ?ಭದೇವನ ನಂತರ ಬಂದ ೨೩ ತೀರ್ಥಂಕರರಲ್ಲಿ ಕೊನೆಯವರು ವರ್ಧಮಾನ ಮಹಾವೀರ.

- Advertisement - 

ಅಹಿಂಸೋ ಪರಮೋ ಧರ್ಮ- ಅಹಿಂಸೆಯೇ ಮೂಲಮಂತ್ರವಾದ ಜೈನ ಧರ್ಮ ತ್ಯಾಗ ಪ್ರಧಾನವಾದ ಧರ್ಮ. ಈ ಧರ್ಮವು ಸರ್ವದಾ ತ್ಯಾಗ, ವೈರಾಗ್ಯ, ತಪಸ್ಸು ಇವುಗಳಿಗೆ ಮಹತ್ವ ನೀಡಿದೆ. ಗೃಹಸ್ಥರು ಈ ಧರ್ಮದ ಪ್ರಾಣ ಸ್ವರೂಪ. ಇವರು ಎಲ್ಲಾ ಬಂಧಗಳಿಂದ ಮುಕ್ತರಾದ ನಿರ್ಗ್ರಂಥಿ ಮುನಿಗಳ, ದಾರಿ ತೋರುವ ಸದಾಚಾರಿಗಳಾಗಿರುವ ಅರಹಂತರ ಪಾಲನೆ, ಪೋಷಣೆ ಮಾಡುತ್ತಾರೆ. ಜೈನ ಮಂದಿರಗಳ ಸೇವೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ.

ಶಿವಮೊಗ್ಗದ ಮಹಾವೀರ ನಗರದಲ್ಲಿರುವ ಭಗವಾನ್ ೧೦೦೮ ಶ್ರೀ ಆದಿನಾಥ ಸ್ವಾಮಿ ಜಿನ ಮಂದಿರ ಭಕ್ತಾಧಿಗಳ ತನು,ಮನ, ಧನದಿಂದಾಗಿ ಈ ಹಿಂದೆಯೇ ಭವ್ಯವಾಗಿ ನಿರ್ಮಾಣಗೊಂಡಿದ್ದು, ಮೇ ೨೮ರಿಂದ ೩೦ರವರೆಗೆ ಮೂರು ದಿನಗಳ ಕಾಲ ವೈಭವಪೂರ್ಣ ಮಾನಸ್ಥಂಭೋಪರಿ ೨೪ ತೀರ್ಥಂಕರರ ಪಂಚಕಲ್ಯಾಣ ಪೂರ್ವಕ ಪ್ರತಿ?ಪನೆ, ನೂತನ ಶಿಲಾಮಯ ಗರ್ಭಗುಡಿಯಲ್ಲಿ ಮಹಾಮಾತೆ ಶ್ರೀ ಪದ್ಮಾವತಿ ದೇವಿ ಹಾಗೂ ಮಹಾಮಾತೆ ಶ್ರೀ ಜ್ವಾಲಾಮಾಲಿನೀ ದೇವಿ ಮತ್ತು ಕ್ಷೇತ್ರಪಾಲ ಪ್ರತಿಷ್ಠಾಪನೆ, ನಾಗ ಪ್ರತಿಷ್ಠಾಪನೆ ಮುಂತಾದ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಲಿದೆ.

- Advertisement - 

ಪರಮಪೂಜ್ಯ ಚಾರಿತ್ರ್ಯ ಚಕ್ರವರ್ತಿ ಆಚಾರ್ಯ ಶ್ರೀ ೧೦೮ ಶಾಂತಿಸಾಗರ ಮಹಾರಾಜರ ಕೃಪಾಶೀರ್ವಾದದೊಂದಿಗೆ ಶ್ರೀಕ್ಷೇತ್ರ ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ, ಶ್ರೀ ಕ್ಷೇತ್ರಗಳ ಪ.ಪೂ. ಸ್ವಸ್ತಿಶ್ರೀಗಳಾದ ಕನಕಗಿರಿಯ ಭುವನಕೀರ್ತಿ ಭಟ್ಟಾರಕರು, ಅರಿಹಂತಗಿರಿಯ ಧವಲಕೀರ್ತಿಭಟ್ಟಾರಕರು, ಕಂಬದಹಳ್ಳಿಯ ಭಾನುಕೀರ್ತಿ ಭಟ್ಟಾರಕರು, ಡಾ. ದೇವೇಂದ್ರಕೀರ್ತಿ ಭಟ್ಟಾರಕರು, ಸೋಂದಾದ ಭಟ್ಟಾಕಲಂಕ ಭಟ್ಟಾರಕರು, ನ.ರಾ.ಪುರದ ಲಕ್ಷ್ಮೀಸೇನ ಭಟ್ಟಾರಕರು, ಶ್ರವಣಬೆಳಗೊಳದ ಚಾರುಕೀರ್ತಿ ಪಂಡಿತಾಚಾರ್ಯರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಪಾವನ ಸಾನಿಧ್ಯದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ.

ಗರ್ಭಾವತರಣ ಕಲ್ಯಾಣ: ಮೇ ೨೮ರಂದು ಬೆಳಿಗ್ಗೆ ೫ ಗಂಟೆಗೆ ಮಂಗಲವಾದ್ಯಘೋ?, ಸುಪ್ರಭಾತ, ಜಿನಮಂದಿರಕ್ಕೆ ಧರ್ಮಾಚಾರ್ಯರ ಆಹ್ವಾನ, ವಾಸ್ತುಶಾಂತಿ, ಇಂದ್ರಪ್ರತಿಷ್ಠೆ, ಕಂಕಣಬಂಧನ, ಧ್ವಜಾರೋಹಣ, ಭೇರಿ ತಾಡನ, ತೋರಣ ಮುಹೂರ್ತ, ಮೃತ್ತಿಕಾ ಸಂಗ್ರಹ, ಅಂಕುರಾರ್ಪಣೆ, ಯಾಗಮಂಟಪ ಉದ್ಘಾಟನೆ, ಜಿನಮಂದಿರಕ್ಕೆ ಅಗ್ರೋಧಕ ಮೆರವಣಿಗೆ, ಪಂಚಕಲ್ಯಾಣ ಮಂಟಪ ಉದ್ಘಾಟನೆ, ನಾಂದಿಮಂಗಲ ಕಳಸ ಸ್ಥಾಪನೆ, ಅಖಂಡ ದೀಪ ಪ್ರಜ್ವಲನೆ, ಜಿನವಾಣಿ ಸ್ಥಾಪನೆ, ಪಂಚಾಮೃತ ಅಭಿ?, ಶಾಂತಿಧಾರಾ, ಜಿನಮಂದಿರದಲ್ಲಿ ಧಾಮಸಂಪ್ರೋಕ್ಷಣೆ, ತ್ರಿಕುಂಡ ಹೋಮ, ಬೃಹತ್ ಯಾಗಮಂಡಲಾರಾಧನೆ, ಕಲಿಕುಂಡ ಆರಾಧನೆ, ವಜ್ರಪಂಜರ ಆರಾಧನೆ, ಜಲಯಾತ್ರಾ ಮಹೋತ್ಸವ, ಮಧ್ಯಾಹ್ನ ೨ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ೭ಕ್ಕೆ ಗರ್ಭಾವತರಣ ಕಲ್ಯಾಣ’ ?ಡಶ ಸ್ವಪ್ನದ ದೃಶ್ಯಾವಳಿ, ಶ್ರೀಗಳ ಆಶೀರ್ವಚನ, ಆರತಿ ನಡೆಯಲಿದೆ.

ಗರ್ಭಾವತರಣ ಕಲ್ಯಾಣದ ಸಾನಿಧ್ಯವನ್ನು ಹೊಂಬುಜದ ಡಾ|| ದೇವೇಂದ್ರಕೀರ್ತಿ ಭಟ್ಟಾರಕರು, ಸ್ವಾದಿಯ ಭಟ್ಟಾಕಲಂಕ ಭಟ್ಟಾರಕರು, ಕಂಬದಹಳ್ಳಿಯ ಭಾನುಕೀರ್ತಿ ಭಟ್ಟಾರಕರು, ನ.ರಾ.ಪುರದ  ಲಕ್ಷ್ಮೀಸೇನ ಭಟ್ಟಾರಕರು ವಹಿಸಲಿದ್ದು, ಶಿವಮೊಗ್ಗ ದಿಗಂಬರ ಜೈನ ಸಂಘದ ಅಧ್ಯಕ್ಷ ಜಯರಾಜ ಬಿ. ಪಾಂಡಿ ಅಧ್ಯಕ್ಷತೆವಹಿಸುವರು. ಅತಿಥಿಗಳಾಗಿ ವಡನಬೈಲ್‌ನ ಧರ್ಮದರ್ಶಿ ಡಾ|| ಹೆಚ್.ಎಂ. ವೀರರಾಜಯ್ಯ ಜೈನ್, ತೀರ್ಥಹಳ್ಳಿಯ ಖ್ಯಾತ ಆಯುರ್ವೇದ ವೈದ್ಯ ಡಾ. ಜೀವಂಧರ ಜೈನ್, ಚಕ್ಕೋಡು ವಿಜಯ ಕುಮಾರ್ ಆಗಮಿಸುವರು.

ಜನ್ಮ ಕಲ್ಯಾಣ, ರಾಜ್ಯಾಭಿಷೇಕ, ದೀಕ್ಷಾ ಕಲ್ಯಾಣ: ಮೇ ೨೯ರಂದು ಬೆಳಿಗ್ಗೆ ೫ ಗಂಟೆಗೆ ಸುಪ್ರಭಾತ, ಮಂಗಳವಾದ್ಯ ಘೋ?, ನಿತ್ಯವಿಧಿ, ಅಗ್ರೋಧsಕ ಮೆರವಣಿಗೆ, ಜಿನಮಂದಿರದಲ್ಲಿ ತ್ರಿಕುಂಡ ಹೋಮ, ಆಶ್ಲೇ?ಬಲಿ, ನಾಗಯಕ್ಷಾರಾಧನೆ, ನಿತ್ಯ ಅಭಿ?, ಶ್ರೀ ಕ್ಷೇತ್ರಪಾಲ ಆರಾಧsನೆ, ಶ್ರೀ ಕ್ಷೇತ್ರಪಾಲ ಪ್ರತಿ?, ನಾಗದೇವರ ಪ್ರತಿ?, ಶಾಂತಿಧಾರಾ, sಗವಾನ್ ಆದಿನಾಥ ತೀರ್ಥಂಕರರ ಜ ಕಲ್ಯಾಣ, ಜನ್ಮಾಭಿ?ಕದ ಭವ್ಯ ಮೆರವಣಿಗೆ, ಪಾಂಡುಕ ಶಿಲೋಪರಿ ಜನ್ಮಾಭಿ?, ಸಾಮೂಹಿಕ ವೃತೋಪದೇಶ.

ಮಧ್ಯಾಹ್ನ ೧೨ಕ್ಕೆ ನಾಮಕರಣ, ಬಾಲಲೀಲೋತ್ಸವ ೧ ಗಂಟೆಗೆ ರಾಜ್ಯಾಭಿ?ಕ (ಸಾಮ್ರಾಜ್ಯ ವೈಭವ) ಸಂಜೆ ೫ಕ್ಕೆ ದೀಕ್ಷಾಕಲ್ಯಾಣರಾತ್ರಿ ೭.೦೦ಕ್ಕೆ ಧರ್ಮಸಭೆ, ಶ್ರೀಗಳವರ ಆಶೀರ್ವಚನ, ಆರತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

ಧರ್ಮಸಭೆಯ ಸಾನಿಧ್ಯವನ್ನು ಹೊಂಬುಜದ ಡಾ.ದೇವೇಂದ್ರಕೀರ್ತಿ ಭಟ್ಟಾರಕರು, ಕನಕಗಿರಿಯ ಭುವನಕೀರ್ತಿ ಭಟ್ಟಾರಕರು, ಅರಿಹಂತಗಿರಿಯ ಧವಲಕೀರ್ತಿ ಭಟ್ಟಾರಕರು, ಸ್ವಾದಿಯ ಭಟ್ಟಾಕಲಂಕ ಭಟ್ಟಾರಕರು, ನ.ರಾ.ಪುರದ  ಲಕ್ಷ್ಮೀಸೇನ ಭಟ್ಟಾರಕರು ವಹಿಸಲಿದ್ದು, ಶಿವಮೊಗ್ಗ ದಿಗಂಬರ ಜೈನ ಸಂಘದ ಅಧ್ಯಕ್ಷ ಜಯರಾಜ ಬಿ. ಪಾಂಡಿ ಅಧ್ಯಕ್ಷತೆವಹಿಸುವರು.  

ಅತಿಥಿಗಳಾಗಿ ಮಹಾವೀರ ಹಾರ್ಡ್‌ವೇರ್ ಗ್ಲಾಸ್ ಅಂಡ್ ಪ್ಲೈವುಡ್ಸ್‌ನ ಮಾನ್‌ಮಲ್ ಜೈನ್, ಭಾರತೀಯ ಜೈನ್ ಮಿಲನ್, ವಲಯ-೮ರ ಉಪಾಧ್ಯಕ್ಷ ಕೆ. ಯಶೋಧರ ಹೆಗ್ಡೆ ಆಗಮಿಸುವರು.

ಮೋಕ್ಷ ಕಲ್ಯಾಣ: ಮೇ ೩೦ರಂದು ಬೆಳಿಗ್ಗೆ ೫ ಗಂಟೆಗೆ ಸುಪ್ರಭಾತ, ಮಂಗಳವಾದ್ಯಘೋ?, ನಿತ್ಯವಿಧಿ, ಅಗ್ರೋಧಕ ಮೆರವಣಿಗೆ, ಶ್ರವಣಬೆಳಗೊಳದ ಚಾರುಕೀರ್ತಿ ಪಂಡಿತಾಚಾರ್ಯವರ್ಯರ ಪುರಪ್ರವೇಶ, ಆಹಾರ ದಾನವಿದಿ, ಕೇವಲಜ್ಞಾನ ಕಲ್ಯಾಣ, ಭಕ್ತಾಮರ ಆರಾಧನೆ, ‘ಮೋಕ್ಷಕಲ್ಯಾಣಸಮವಸರಣ ಪೂಜೆ, ನಿರ್ವಾಣ ಕಲ್ಯಾಣ ಪೂಜೆ, ಏಕಕಾಲದಲ್ಲಿ ತೀರ್ಥಂಕರರ ಮಹಾಭಿ?, ಮಂತ್ರನ್ಯಾಸ ವಿಧಿ, ಶುಭ ಮುಹೂರ್ತದಲ್ಲಿ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ, ಶ್ರೀ ಜ್ವಾಲಾಮಾಲಿನಿ ಅಮ್ಮನವರ ಪ್ರತಿ?ಪನೆ, ಮಾನಸ್ತಂಬsದಲ್ಲಿ ೨೪ ತೀರ್ಥಂಕರರ ಮೂರ್ತಿ ಸ್ಥಾಪನೆ, ೫೦೪ ಕಲಶಗಳಿಂದ ಮಹಾಭಿ?ಕ ಪೂಜೆ, ಮಧ್ಯಾಹ್ನ ೨ ಗಂಟೆಗೆ ಧರ್ಮಸಭೆ’,  ಧರ್ಮಾಚಾರ್ಯರ ಪಾದಪೂಜೆ, ೪ಕ್ಕೆ ಧ್ವಜಾವರೋಹಣ, ಕಂಕಣ ವಿಸರ್ಜನೆ, ಅವಭೃತ ಸ್ನಾನ ನಡೆಯಲಿದೆ.

ಧರ್ಮಸಭೆಯ ಸಾನಿಧ್ಯವನ್ನು ಹೊಂಬುಜದ ಡಾ. ದೇವೇಂದ್ರಕೀರ್ತಿ ಭಟ್ಟಾರಕರು, ಕನಕಗಿರಿಯ ಭುವನಕೀರ್ತಿ ಭಟ್ಟಾರಕರು, ಅರಿಹಂತಗಿರಿಯ ಧವಳಕೀರ್ತಿ ಭಟ್ಟಾರಕರು, ಸ್ವಾದಿಯ ಭಟ್ಟಾಕಲಂಕ ಭಟ್ಟಾರಕರು, ನ.ರಾ.ಪುರದ ಲಕ್ಷ್ಮೀಸೇನ ಭಟ್ಟಾರಕರು, ಶ್ರವಣಬೆಳಗೊಳದ ಚಾರುಕೀರ್ತಿ ಪಂಡಿತಾಚಾರ್ಯವರ್ಯರು ವಹಿಸುವರು. ಶಿವಮೊಗ್ಗ ದಿಗಂಬರ ಜೈನ ಸಂಘದ ಅಧ್ಯಕ್ಷ ಜಯರಾಜ ಬಿ. ಪಾಂಡಿ ಅಧ್ಯಕ್ಷತೆವಹಿಸುವರು.  

ಅತಿಥಿಗಳಾಗಿ ಭದ್ರಾವತಿಯ ದಿಗಂಬರ ಜೈನ ಸಂಘದ ಅಧ್ಯಕ್ಷ  ಪಿ.ಸಿ.ಜೈನ್, ಸಾಗರದ ರಾಜಕುಮಾರ್ ಜೈನ್ ಆಗಮಿಸುವರು. ಧರ್ಮ ಬಂಧುಗಳು ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪುನೀತರಾಗಬಹುದಾಗಿದೆ.
ಲೇಖನ: ವರಲಕ್ಷ್ಮಿ ಬಿ., ಸದಸ್ಯರು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ.

Share This Article
error: Content is protected !!
";