ಉದ್ಯೋಗ ಕೊಡಿಸುವ ಆಮಿಷವೊಡ್ಡಿ 25.93 ಲಕ್ಷ ವಂಚಿಸಿದ ಭೂಪ

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಮಹಿಳೆಯೊಬ್ಬರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 25.93 ಲಕ್ಷ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮ್ಯಾಟ್ರಿಮೋನಿ ಜಾಲತಾಣದಲ್ಲಿ ಮಹಿಳೆಗೆ ಪರಿಚಿತನಾದ ವ್ಯಕ್ತಿಯೋರ್ವ ಆಕೆಯ ಸಹೋದರನಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ.

ತನ್ನ ಸಹೋದರನಿಗೆ ಕೆಲಸ ಸಿಗುತ್ತದೆ ಎಂದು ವಂಚಕನನ್ನು ನಂಬಿದ ಮಹಿಳೆ 25.93 ಲಕ್ಷ ಹಣವನ್ನು ಕೊಟ್ಟು ಕೈ ಸುಟ್ಟುಕೊಂಡಿರುವ ಘಟನೆ ದಾವಣಗೆರೆಯಲ್ಲಿ ಜರುಗಿದೆ.

- Advertisement - 

ಮಂಡ್ಯ ಜಿಲ್ಲೆಯ ವಂಚಕ ಮಧು ಉದ್ಯೋಗ ಕೊಡಿಸುವ ಭರವಸೆ ನೀಡಿ ಆಕೆಗೆ ವಂಚನೆ ಮಾಡಿದ್ದಾನೆ. ವಂಚನೆಗೊಳಗಾದ ಮಹಿಳೆ ದೂರಿನಲ್ಲಿ ಉಲ್ಲೇಖಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ವಂಚಕ ಮಧು ಮ್ಯಾಟ್ರಿಮೋನಿ ಜಾಲತಾಣದ ಮೂಲಕ ತನಗೆ ಪರಿಚಿತನಾಗಿದ್ದ. ನನ್ನ ಸಹೋದರನಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಮಧು ನಂಬಿಸಿದ್ದ.

- Advertisement - 

ಆಗ ನಾನು ಸೆ.14 ರಿಂದ ಅ.30ರ ವರೆಗೆ ನೂರಕ್ಕೂ ಹೆಚ್ಚು ಬಾರಿ ವಂಚಕನಿಗೆ ಹಣ ವರ್ಗಾವಣೆ ಮಾಡಿದ್ದೇನೆ ಎಂದು ಮಹಿಳೆ ದೂರು ನೀಡಿರುವ ಬಗ್ಗೆ ಸಿಇಎನ್‌ಠಾಣೆಯ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಪೊಲೀಸರು ಹುಡುಕಾಟ ಮಾಡಿದ್ದಾರೆ.

 

 

 

Share This Article
error: Content is protected !!
";