ಕುಂಭಮೇಳ ಕಾಲ್ತುಳಿದಲ್ಲಿ ಮೃತಪಟ್ಟವರಿಗೆ 25 ಲಕ್ಷ ಪರಿಹಾರ ನೀಡಿದ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಉತ್ತರ ಪ್ರದೇಶದ ನಮ್ಮ ಬಿಜೆಪಿ ಸರ್ಕಾರ ಕುಂಭಮೇಳದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಘಟಿಸಿದ ಕಾಲ್ತುಳಿತದಲ್ಲಿ ಅಮೂಲ್ಯ ಜೀವಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ
25 ಲಕ್ಷ ರೂ. ಪರಿಹಾರ ವಿತರಿಸುವ ಮೂಲಕ ತನ್ನ ಮಾನವೀಯ ಬದ್ಧತೆ ಮೆರೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.

ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಶ್ರೀಯೋಗಿ ಆದಿತ್ಯ ನಾಥ ಅವರಿಗೆ ಕೃತಜ್ಞತೆಗಳನ್ನು ಅವರು ಸಮರ್ಪಿಸಿದ್ದಾರೆ. ತನ್ನ ರಾಜ್ಯ ಅಥವಾ ಹೊರಗಿನ ರಾಜ್ಯದ ಯವರು ಎನ್ನುವುದನ್ನು ಲೆಕ್ಕಿಸದೇ ಕುಂಭಮೇಳದಲ್ಲಿ ಭಾಗವಹಿಸಿದವರೆಲ್ಲರೂ ಈ ದೇಶದ ಸತ್ಪ್ರಜೆಗಳು ಎಂದು ಪರಿಗಣಿಸಿ ತನ್ನ ಪರಿಹಾರ ಘೋಷಿಸಲಾಗಿದೆ.

ಆದರೆ ಕರ್ನಾಟಕ ಸರ್ಕಾರ ಇವರೆವಿಗೂ ಇಂತಹ ಮಾನವೀಯ ನೆರವಿಗೆ ಮುಂದಾಗದಿರುವುದು ಬೇಸರದ ಸಂಗತಿ. ಧರ್ಮಗಳ ನಡುವೆ ಕಂದಕ ನಿರ್ಮಾಣ ಮಾಡುವ ಬಜೆಟ್ ಮಂಡಿಸಿ ಮುಸ್ಲಿಂ ಓಲೈಕೆಗಾಗಿ ಯೋಜನೆಗಳನ್ನು ಪ್ರಕಟಿಸಿರುವ  ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಸನಾತನ ಹಿಂದೂ ಧರ್ಮದ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ದುರ್ಮರಣಕ್ಕೀಡಾದವರ ಬಗ್ಗೆ ಕನಿಕರ ಮೂಡದಿರುವುದು ಅವರ ಧರ್ಮ ಭೇದದ ಮನಸ್ಥಿತಿ ಪ್ರತಿಬಿಂಬಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.

ಈಗಲಾದರೂ ಮುಖ್ಯಮಂತ್ರಿಗಳು ಕುಂಭಮೇಳದಲ್ಲಿ ಜೀವ ಕಳೆದುಕೊಂಡ ಕುಟುಂಬಗಳಿಗೆ ರಾಜ್ಯ ಸರ್ಕಾರದ ಪರಿಹಾರ ಘೋಷಿಸಿ ತನ್ನ ಬದ್ಧತೆ ಪ್ರದರ್ಶಿಸಲಿ ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

 

- Advertisement -  - Advertisement - 
Share This Article
error: Content is protected !!
";