ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಕೆಂಚಲಿಂಗೇಶ್ವರ ದೇವಸ್ಥಾನ ನೂತನ ಅಭಿವೃದ್ಧಿಗೆ 25 ಲಕ್ಷ ರೂ ಅನುದಾನ ನೀಡುವುದಾಗಿ ಎಂದು ಸಚಿವ ಡಿ. ಸುಧಾಕರ್ ಹೇಳಿದರು. ತಾಲೂಕಿನ ಹರತಿ ಕೋಟೆ ಗ್ರಾಮದ ಹುಲೇನೂರ ಬೆಡಗಿನ ಆರಾಧ್ಯ ದೈವ ಶ್ರೀ ಕೆಂಚಲಿಂಗೇಶ್ವರ ಸ್ವಾಮಿ ದೇವರ ದಸರ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ಷೇತ್ರದ ಇತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾದ ಹರ್ತಿಕೋಟೆ ಗ್ರಾಮದಲ್ಲಿ ವಿಶೇಷವಾಗಿ ಸಾಕಷ್ಟು ಸಮುದಾಯಗಳ ದೇವರ ಕಟ್ಟೆ ಮನೆ ಇಲ್ಲಿದ್ದು ದಸರಾ ಮಹೋತ್ಸವವನ್ನು ಈ ಗ್ರಾಮದಲ್ಲಿ ತುಂಬಾ ವಿಶೇಷವಾಗಿ ಪ್ರತಿ ವರ್ಷ ಎಲ್ಲರು ಸೌಹಾರ್ದಯುತವಾಗಿ ಆಚರಣೆ ಮಾಡುತ್ತಿರುವುದನ್ನು ನಾವು ನೀವೆಲ್ಲ ಕಾಣಬಹುದು.
ಹಾಗೆಯೇ ಸಮುದಾಯದ ಜನರು ಶೈಕ್ಷಣಿಕವಾಗಿ ಇನ್ನೂ ಹೆಚ್ಚಿನ ಪ್ರಗತಿ ಕಾಣಬೇಕು ಎಂದಾದರೆ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದರು.
ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು ಮಾತನಾ ಡಿ, ಸರ್ಕಾರ ಜಾತಿ ಗಣತಿ ಸಮೀಕ್ಷೆ ಆರಂಭಿಸಿದ್ದು ಎಲ್ಲರೂ ಗಣತಿದಾರರಿಗೆ ಸಹಕರಿಸಿ ಕಡ್ಡಾಯವಾಗಿ ಜಾತಿ ನೊಂದಾಣೆ ಮಾಡಿಸಬೇಕು ಎಂದರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಮಹಂತೇಶ್ ಮಾತನಾಡಿ, ಜಾತಿ ಮತ್ತು ಉಪಜಾತಿ ಕಾಲಂನಲ್ಲಿ ಕುರುಬ ಎಂದು ಬರೆಸಿ, ಕುಲ ಕಸುಬು ಕುರಿ ಮೇಕೆ ಸಾಕಾಣಿಕೆ, ಉಣ್ಣೆ ಕಂಬಳಿ ನೇಯ್ಗೆ ಎಂದು ಬರೆಸಬೇಕು ಎಂದರು.
ಇದೇ ವೇಳೆ ಗೊರವಯ್ಯಗಳಿಂದ ದೋಣಿ ಸೇವಾ ಪೂಜೆ ನಡೆಸಲಾಯಿತು ಹಾಗೂ ಅನ್ನ ದಾಸೋಹಕ್ಕೆ ದೇಣಿಗೆ ನೀಡಿದ ಭಕ್ತರಿಗೆ ಸಮಿತಿಯಿಂದ ಸನ್ಮಾನಿಸಲಾಯಿತು.
ವೇದಿಕೆ ಮೇಲೆ ಸಮಿತಿ ಅಧ್ಯಕ್ಷ ಕೊಂಡ್ಲಹಳ್ಳಿ ಗುರುಲಿಂಗಪ್ಪ, ಕಾರ್ಯದರ್ಶಿ ಮದ್ದಿಹಳ್ಳಿ ಮಹಾಲಿಂಗಪ್ಪ, ಮಾಜಿ ಸೈನಿಕ ರೇಣುಕಾ ಪ್ರಸಾದ್, ತೆಂಗು ನಾರಿನ ಮಹಾಮಂಡಳದ ರಾಜ್ಯ ಅಧ್ಯಕ್ಷ ಗೋಡೆ ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗವೇಣಿ ಹನುಮಂತರಾಯ,
ಸಮುದಾಯದ ಮುಖಂಡ ಪ್ರೇಮದಾಸ್, ಕೆಂಚಲಿಂಗಪ್ಪ ಹಾಗೂ ದೇವಸ್ಥಾನ ಸಮಿತಿ ಉಪಾಧ್ಯಕ್ಷ ರಮೇಶ್ ಹಾಗೂ ಎಲ್ಲಾ ನಿರ್ದೇಶಕರು, ಗೌಡ, ಯಜಮಾನ, ಪೂಜಾರು ಹಾಗೂ ದೇವಸ್ಥಾನದ ಎಲ್ಲಾ ಕೈವಾಡದವರು ಭಕ್ತರು ಇದ್ದರು.

