ಸಾವಯವ ಕೃಷಿ/ ತೋಟಗಾರಿಕೆ ಉತ್ಪನ್ನಗಳಿಗೆ ಉತ್ತಮ ಬ್ರಾಂಡ್ ಹೆಸರು ಸೂಚಿಸಿದವರಿಗೆ 25 ಸಾವಿರ ಬಹುಮಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯದಲ್ಲಿ ಉತ್ಪಾದನೆಯಾಗುವ ಸಾವಯವ ಕೃಷಿ / ತೋಟಗಾರಿಕೆ ಉತ್ಪನ್ನಗಳಿಗೆ ತೋಟಗಾರಿಕೆ ಇಲಾಖೆಯ ವತಿಯಿಂದ ಬ್ರಾಂಡ್ ಅಭಿವೃದ್ಧಿಪಡಿಸಲಾಗುತ್ತಿದೆ. ಸೂಕ್ತ ಬ್ರಾಂಡ್ ಹೆಸರನ್ನು ಸೂಚಿಸಲು ಆಸಕ್ತ ರೈತರು / ಸಾರ್ವಜನಿಕರು / ವಿದ್ಯಾರ್ಥಿಗಳಿಂದ ಅಭಿವ್ಯಕ್ತಿಯನ್ನು ಆಹ್ವಾನಿಸಲಾಗಿದೆ.

 ಬ್ಯಾಂಡ್ ಹೆಸರನ್ನು ಸೂಚಿಸಲು ಇಚ್ಛಿಸುವವರು ನವೆಂಬರ್ 8 ಒಳಗಾಗಿ ಇಲಾಖೆಯ ಮೇಲ್ [email protected] ವಿಳಾಸಕ್ಕೆ ತಮ್ಮ ವಿವರಗಳೊಂದಿಗೆ ಬ್ರಾಂಡ್ ಹೆಸರನ್ನು ಕಳುಹಿಸಬಹುದಾಗಿದೆ.

ಆಯ್ಕೆಯಾದ ಅತ್ಯುತ್ತಮ ಐದು ಬ್ರಾಂಡ್ ಹೆಸರುಗಳನ್ನು ಸೂಚಿಸಿದವರಲ್ಲಿ ಪ್ರಥಮ ವಿಜೇತರಿಗೆ ರೂ.25,000/- ಗಳ ಬಹುಮಾನ ಹಾಗೂ ಉಳಿದ ನಾಲ್ಕು ವಿಜೇತರಿಗೆ ಮೆಚ್ಚುಗೆ ಪ್ರಮಾಣ ಪತ್ರವನ್ನು ನೀಡಲಾಗುವುದು.

ಬ್ರಾಂಡ್ ಹೆಸರು ಸೂಚಿಸಲು ಲಿಂಕ್: https://forms.gle/L2aEojWKpAf6Xf6Q9 ನ್ನು ಬಳಸಬಹುದಾಗಿದೆ ಎಂದು ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

- Advertisement -  - Advertisement -  - Advertisement - 
Share This Article
error: Content is protected !!
";