ರಾಷ್ಟ್ರೀಯ ಸರ್ವೇಕ್ಷಣ್- ಸಮೀಕ್ಷೆಗೆ 12 ಶಾಲೆಗಳಿಂದ 269 ವಿದ್ಯಾರ್ಥಿಗಳು ಭಾಗಿ

News Desk

ಚಂದ್ರವಳ್ಳಿ ನ್ಯೂಸ್, ಹೊಸದುರ್ಗ:
PARAKH-(Performance Assessment, Review and Analysis of knowledge) ರಾಷ್ಟ್ರೀಯ ಸರ್ವೇಕ್ಷಣ್-೨೦೨೪ ಸಮೀಕ್ಷೆಗೆ ತಾಲೂಕಿನ ೧೨ ಶಾಲೆಗಳು ಆಯ್ಕೆಯಾಗಿದ್ದು ಬುಧವಾರ NAC ನವದೆಹಲಿರವರ ಮಾರ್ಗಸೂಚಿಯನ್ವಯ ಕಾರ್ಯಕ್ಷಮತೆಯ ಮೌಲ್ಯಮಾಪನ,

ಸಮಗ್ರ ಅಭಿವೃದ್ಧಿಗಾಗಿ ಜ್ಞಾನದ ವಿಮರ್ಶೆ ಮತ್ತು ವಿಶ್ಲೇಷಣೆ ಕುರಿತು ಸಮೀಕ್ಷೆ  ನಡೆಸಲಾಯಿತು ಎಂದು ತಾಲೂಕು ನೋಡಲ್ ಅಧಿಕಾರಿ ಎಸ್.ಬಸವರಾಜು ತಿಳಿಸಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ) ಮತ್ತು ಎಸ್.ನಿಜಲಿಂಗಪ್ಪ ಇಂಟರ್ ನ್ಯಾಷನಲ್ ಶಾಲೆಗೆ ಭೇಟಿ ನೀಡಿ 

ರಾಷ್ಟ್ರೀಯ ಸರ್ವೇಕ್ಷಣ್-೨೦೨೪ ಸಮೀಕ್ಷೆ ವೀಕ್ಷಿಸಿ  ಮಾತನಾಡಿದ ಅವರು  ಹೊಸದುರ್ಗ ತಾಲೂಕಿನ ಆಯ್ದ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ೩, ೬ ಮತ್ತು ೯ ನೇ ತರಗತಿಯ ವಿದ್ಯಾರ್ಥಿಗಳಿಗೆ ಪರಕ್ ಸರ್ವೇಕ್ಷಣ್ ಸಮೀಕ್ಷೆ ನಡೆಸಲಾಯಿತು. ೧೨ ಶಾಲೆಯಿಂದ ೨೬೯ ವಿದ್ಯಾರ್ಥಿಗಳು ಸಮೀಕ್ಷೆ ಕಾರ್ಯದಲ್ಲಿ ಭಾಗಿಯಾದರು ಎಂದು ತಿಳಿಸಿದರು.

 

- Advertisement -  - Advertisement - 
Share This Article
error: Content is protected !!
";