ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ 26ನೇ ವರ್ಷದ ವಾರ್ಷಿಕೋತ್ಸವ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ
ಮೆದೇಹಳ್ಳಿ ರಸ್ತೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ 26ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಗುರುಪೂರ್ಣಮಿ ಜು.10 ರಂದು ಗುರುವಾರ ವಾರ್ಷಿಕೋತ್ಸವದ ಅಂಗವಾಗಿ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ವಿಶೇಷ ಅಭಿಷೇಕ ಮತ್ತು ಅಲಂಕಾರ  ಮಾಡಲಾಗುವುದು .

ಬೆಳಿಗ್ಗೆ 10.30 ಕ್ಕೆ ಶ್ರೀ ಲಕ್ಷ್ಮಿ ನಾರಾಯಣ ಹೃದಯಾ ಹೋಮ 12:30 ಗಂಟೆಗೆ ಪೂರ್ಣವತಿ  ನೆರವೇರುವುದು. ಈ ಪೂರ್ಣಾವತಿಗೆ  ಭಕ್ತಾದಿಗಳು ಸೀರೆ, ಕುಪ್ಪಸಹಣ್ಣುಗಳು, ದವಸ ಧಾನ್ಯಗಳು ತುಪ್ಪ ಹಾಗೂ ಇನ್ನಿತರೆ ಪೂಜಾ ಸಾಮಗ್ರಿಗಳನ್ನು ಪೂರ್ಣಾವತಿಗೆ ಸಲ್ಲಿಸಬಹುದು.

- Advertisement - 

ಮಧ್ಯಾಹ್ನ 1:00 ಗೆ  ಅನ್ನ ಸಂತರ್ಪಣೆ ಕಾರ್ಯಕ್ರಮವು ನೆರವೇರಿಸುವುದು ಈ ಪೂಜೆಯ ಸೇವಾ ಕರ್ತರು ಮಲ್ಲಿಕಾರ್ಜುನ ಸ್ವಾಮಿ ಮತ್ತು ಮಕ್ಕಳು ಮಹೇಶ್ ಮೋಟರ್ಸ್ ಹಾಗೂ ದೇವಸ್ಥಾನದ ಶಾಮಿಯಾನ ಮತ್ತು ವಿದ್ಯುತ್ ದೀಪ ಅಲಂಕಾರ ಸೇವಾಕರ್ತರು ಹನುಮಂತರೆಡ್ಡಿ ಮತ್ತು ಮಕ್ಕಳು ಮಾರುತಿ ಶಾಮಿಯಾನ.

 ಅಯ್ಯಪ್ಪ ಸೇವಾ ಟ್ರಸ್ಟ್ ಅಧ್ಯಕ್ಷ  ಶರಣ್ ಕುಮಾರ್ ಇದರ ಅಧ್ಯಕ್ಷತೆ ವಹಿಸುವರು.  ಹೂ ಕಾರ್ಯದರ್ಶಿಯಾದ ಎಂಪಿ ವೆಂಕಟೇಶ್ ಉಪಾಧ್ಯಕ್ಷರಾದ ಮಲ್ಲಿಕಾರ್ಜುನರು  ಹಾಗೂ ನಿರ್ದೇಶಕರು ಉಪಸ್ಥಿತರಿರುವರು. ಈ ಎಲ್ಲಾ ಪೂಜಾ ಕಾರ್ಯಕ್ರಮಕ್ಕೆ ಚಿತ್ರದುರ್ಗದ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಗಿದೆ. 

- Advertisement - 

 

 

Share This Article
error: Content is protected !!
";