ಚಂದ್ರವಳ್ಳಿ ನ್ಯೂಸ್, ಚಿಕ್ಕನಾಯಕನಹಳ್ಳಿ:
ತಾಲ್ಲೂಕಿನ ಎಲ್ಲಾ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ ಗಾಂಧೀಜಯಂತಿ ಅಂಗವಾಗಿ “ಸ್ವಚ್ಛತಾ ಹೀ ಸೇವಾ” ಪಾಕ್ಷಿಕ-2025 (ಸ್ವಚ್ಛತೆಯೇ ಸೇವೆ) ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಕ ಅಧಿಕಾರಿ ಡಿ.ದೊಡ್ಡಸಿದ್ದಯ್ಯ ತಿಳಿಸಿದ್ದಾರೆ.
“ಸ್ವಚ್ಛತಾ ಹೀ ಸೇವಾ” ಅಭಿಯಾನವನ್ನು 17 ನೇ ಸೆಪ್ಟೆಂಬರ್ ರಿಂದ 02 ಅಕ್ಟೋಬರ್ ರವರೆಗೆ “ಸ್ವಚ್ಚೋತ್ಸವ” ಎಂಬ ಘೋಷಾವಾಕ್ಯದೊಂದಿಗೆ ಎಲ್ಲಾ ಕಲ್ಯಾಣಿಗಳು , ನೀರಿನ ತೊಟ್ಟಿಗಳು, ಎಲ್ಲಾ ಶಾಲೆ ಮತ್ತು ಅಂಗನವಾಡಿಗಳು, ಸಂತೆ ಅಂಗಡಿ ಮಳಿಗೆಗಳ ಆವರಣ, ಆಸ್ಪತ್ರೆಗಳು, ದೇವಾಲಯಗಳು, ಚರಂಡಿಗಳು,ಗ್ರಾಮೀಣ ರಸ್ತೆಗಳು, ರಾಜ್ಯ ಹೆದ್ದಾರಿಗಳು
ಇತ್ಯಾದಿ ಸಾರ್ಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲು ತಾಲ್ಲೂಕಿ ಎಲ್ಲಾ ಗ್ರಾಮ ಪಂಚಾಯಿತಿಗಳು ಶ್ರಮಿಸುವ ಮೂಲಕ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ಪ್ರತೀ ವರ್ಷ ಅಕ್ಟೋಬರ್ 02 ರಂದು ಸ್ವಚ್ಛ ಭಾರತ ದಿನ ಆಚರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

