ಗೃಹಲಕ್ಷ್ಮಿ ಮಹಿಳಾ ಪಲಾನುಭವಿಗಳಿಗೆ ೨೭೬ ಕೋಟಿ ಪಾವತಿ-ವಿಶ್ವನಾಥ್ ರೆಡ್ಡಿ

News Desk
- Advertisement -  - Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ   ರಾಜ್ಯ ಸರ್ಕಾರ ಜನರ ಬದುಕಿನಲ್ಲಿ ಬದಲಾವಣೆ ತಂದಿವೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಎನ್. ವಿಶ್ವನಾಥ ರೆಡ್ಡಿ  ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದಅವರು  ಕಾಂಗ್ರೆಸ್ ಸರ್ಕಾರದ ಜನಪರ ಗ್ಯಾರಂಟಿ ಯೋಜನೆಗಳಾದ ಗೃಹ ಜ್ಯೋತಿ
ಅನ್ನಭಾಗ್ಯ, ಗೃಹ ಲಕ್ಷ್ಮೀ  ಶಕ್ತಿ ಯೋಜನೆ  ಹಾಗೂ ಯುವನಿಧಿ ಜನಸಾಮಾನ್ಯರಿಗೆ ನೆಮ್ಮದಿ, ಆರ್ಥಿಕ ಭದ್ರತೆ ಮತ್ತು ಆತ್ಮವಿಶ್ವಾಸ, ಮಹಿಳೆಯರಿಗೆ ಕುಟುಂಬದಲ್ಲಿ  ಆರ್ಥಿಕ ಒತ್ತಡವನ್ನು ಕಡಿಮೆ ಮಾಡಿದೆ.

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಗೃಹ ಲಕ್ಷ್ಮೀ ಯೋಜನೆಯಡಿ ೬೨,೮೩೮ ಮಹಿಳೆಯರು ಫಲಾನುಭವಿಗಳಿದ್ದು, ಈವರೆಗೆ ಯಾವುದೇ ಮಧ್ಯವರ್ತಿ ಗಳಿಲ್ಲದೆ ತಿಂಗಳಿಗೆ ಎರಡು ಸಾವಿರ ರೂ. ಅಂತೆ ೨೭೬ ಕೋಟಿ ರೂ. ನೇರವಾಗಿ ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ.

- Advertisement - 

ಬಂಡವಾಳಶಾಹಿಗಳು ಹಾಗು ಪ್ರತಿ ಪಕ್ಷಗಳು ಗ್ಯಾರಂಟಿಗಳನ್ನು ಯೋಜನೆಗಳನ್ನು ವಿರೋಧಿಸುವವರು, ಟೀಕಿಸುತ್ತಿದ್ದವರೇ ದೇಶದ ಇತರೆ ರಾಜ್ಯಗಳಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡುವ ಮೂಲಕ ನಮ್ಮ ಯೋಜನೆಯನ್ನು, ಕಾಪಿ ಮಾಡಿದ್ದಾರೆ. ಆ ಮೂಲಕ ಕಾಂಗ್ರೆಸ್ ಸರ್ಕಾರದ ಯೋಜನೆ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ.

ಈ ವರೆಗೆ ರಾಜ್ಯದಲ್ಲಿ  ನಾಲ್ಕು ಕೋಟಿಗೂ ಹೆಚ್ಚು  ಫಲಾನುಭವಿಗಳಾಗಿದ್ದಾರೆ. ರಾಜ್ಯದ ಕಟ್ಟಕಡೆಯ ಗ್ರಾಮದ ಪ್ರತಿಯೊಬ್ಬ ನಾಗರಿಕನಿಗೂ ಪ್ರಾಥಮಿಕ ಅವಶ್ಯಕತೆಗಳಾದ ಅನ್ನ, ಆರೋಗ್ಯ, ಶಿಕ್ಷಣ, ವಸತಿ ಮತ್ತು ಉದ್ಯೋಗದ ಭಾಗ್ಯ ಲಭಿಸಬೇಕು, ಬಡವ-ಬಲ್ಲಿದರೆಂಬ ಭೇದ ಇಲ್ಲದೆ ಎಲ್ಲರೂ ನಿರ್ಭಯವಾಗಿ ಘನತೆ ಮತ್ತು ಗೌರವದಿಂದ ಬದುಕುವ ವಾತಾವರಣವನ್ನು ನಿರ್ಮಾಣ ಮಾಡಬೇಕು. ಇದು ರಾಜ್ಯ ಸರ್ಕಾರದ ಆಶಯವಾಗಿದ್ದು   ಕರ್ನಾಟಕ ಮಾದರಿ ಆಡಳಿತದ ಮೂಲ ಆಶಯ ಈಡೇರಿಸಲು  ಅಧಿಕಾರಿಗಳು ಸಹಕಾರ ಅಗತ್ಯವಾಗಿದೆ.

- Advertisement - 

ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆಯಡಿ ೯೧,೦೯೩ ಫಲಾನುಭವಿಗಳಿದ್ದು, ೨೦೦ ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದ್ದು ೩,೨೨,೧೫,೦೦೦ ಕೋಟಿ ರೂ. ಬಳಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇಒ ಮಂಜುನಾಥ್, ಸಿಡಿಪಿಒ ವಿನೋದ್ ಕುಮಾರ್, ಕೆ ಎಸ್ ಆರ್ ಟಿ ಸಿ ಡಿಪೋ ವ್ಯವಸ್ಥಾಪಕ ವೆಂಕಟರಾಮ್, ಆಹಾರ ಇಲಾಖೆ ಶಿರಸ್ಥೆಧಾರ್ ಶ್ರೀಧರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಾಧಿಕಾರದ ಸದಸ್ಯರಾದ ಶಂಕರಪ್ಪ, ತಿಮ್ಮರಾಯ ಗೌಡ, ಶ್ರೀನಿವಾಸ್. ಸುದರ್ಶನ್. ನಂಜಪ್ಪ. ಮಹೇಶ್ವರಿ. ನಾಗರಾಜು, ರಹೀಂ ಜಾನ್. ನಾಗೇಶ್. ನಟರಾಜು ಹಾಜರಿದ್ದರು.

Share This Article
error: Content is protected !!
";