2ನೇ ಅಯ್ಯಪ್ಪ ಸ್ವಾಮಿ ಶಬರಿಮಲೆ ಆಗಿ ಮಾರ್ಪಟ್ಟ ಚಿತ್ರದುರ್ಗದ ಅಯ್ಯಪ್ಪಸ್ವಾಮಿ ದೇವಸ್ಥಾನ

News Desk
- Advertisement -  - Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮೆದೇಹಳ್ಳಿ ರಸ್ತೆಯ ಎರಡನೇ ಅಯ್ಯಪ್ಪ ಸ್ವಾಮಿ ಶಬರಿಮಲೆ ಎಂದು ಪ್ರಸಿದ್ಧಿ ಪಡೆದಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಇರುಮುಡಿ ಹೊತ್ತು ತಂದು  18 ಮೆಟ್ಟಿಲ ಹತ್ತಿ ಅಯ್ಯಪ್ಪ ಸ್ವಾಮಿ ದೇವರ ದರ್ಶನ ಮಾಡುತ್ತಿದ್ದಾರೆ.

ಚಿತ್ರದುರ್ಗದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಸಕಲ ಸೌಲಭ್ಯಗಳನ್ನು ಒದಗಿಸಲಾಗಿದೆ.

- Advertisement - 

ಈ ಸನ್ನಿಧಾನದಲ್ಲಿ ಈಶ್ವರ, ಆಂಜನೇಯ, ನವಗ್ರಹ, ನಾಗಬನ, ಗಣಪತಿ, ಸುಬ್ರಹ್ಮಣ್ಯ ದೇವರುಗಳು ಶ್ರೀ ವಿಷ್ಣು ದೇವಸ್ಥಾನ ಹಾಗೂ  ವಿಶಾಲವಾದ ಸ್ಥಾನದ ವ್ಯವಸ್ಥೆ ಇದೆ.

ಬಂದಿರುವ ಮಾಲಾಧಾರಿಗಳಿಗೆ ಪ್ರಸಾದ ವ್ಯವಸ್ಥೆ ಇದೆ. ರಾತ್ರಿ ಮಲಗಲು ವಿಶಾಲವಾದ ಪರಂಗಣವಿದೆ. ಈ ದೇವಸ್ಥಾನವು ಕರ್ನಾಟಕದಲ್ಲಿ ಸಾಕಷ್ಟು ಪ್ರಸಿದ್ಧಿ ಹೊಂದಿದ್ದು ಶಬರಿಮಲೆಗೆ ಹೋಗಲು ಆರ್ಥಿಕ ಹಾಗೂ ಸಮಯ ಇಲ್ಲದ ಭಕ್ತಾದಿಗಳಿಗೆ ಈ ಒಂದು ದೇವಸ್ಥಾನ ವರದಾನವಾಗಿದೆ .

- Advertisement - 

ರಾಯಚೂರು ಹಾಗೂ ಗುಲ್ಬರ್ಗ ಅಂತಹ ಸ್ಥಳಗಳಿಂದ ಹುಬ್ಬಳ್ಳಿ ಭಾಗದಿಂದಲೂ ಸುತ್ತಮುತ್ತಲಿನ ಮಾಲಾಧಾರಿ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.

ಅಯ್ಯಪ್ಪ ಸ್ವಾಮಿ ಭಕ್ತಾದಿಗಳಿಗೆ ಸಕಲ ಸೌಲಭ್ಯ ಒದಗಿಸುತ್ತಿರುವ ಚಿತ್ರದುರ್ಗ ಅಯ್ಯಪ್ಪ ಸ್ವಾಮಿ ಅನ್ನ ಪ್ರಸಾದದ ಅಧ್ಯಕ್ಷ ಶರಣ್ ಕುಮಾರ್, ಕಾರ್ಯದರ್ಶಿ ಎಂ ಪಿ ವೆಂಕಟೇಶ್, ಮಲ್ಲಿಕಾರ್ಜುನ್ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಸೌಲಭ್ಯ ಒದಗಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ 9448664865 ಸಂಪರ್ಕಿಸಲು ಕೋರಿದ್ದಾರೆ.

 

Share This Article
error: Content is protected !!
";