ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ಹಿರಿಯ (2) ಹಾಗೂ ಕಿರಿಯ (4) ವಿಭಾಗದಲ್ಲಿನ ಫೆಲೋಷಿಪ್ ನೀಡಲು ಆರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹಿರಿಯರ ಫೆಲೋಷಿಪ್ಗೆ ವಯೋಮಿತಿ 35 ವರ್ಷ ಪೂರ್ಣಗೊಂಡಿರಬೇಕು. ಫೆಲೋಷಿಪ್ನ ಮೊತ್ತ ರೂ. 3 ಲಕ್ಷ, ಕಿರಿಯರ ಫೆಲೋಷಿಪ್ಗೆ ನಿಗದಿತ ಗರಿಷ್ಠ ವಯೋಮಿತಿ 35 ವರ್ಷ, ಫೆಲೋಷಿಪ್ನ ಮೊತ್ತ ರೂ. 2 ಲಕ್ಷವಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನಾಂಕವಾಗಿದೆ.
ಆಸಕ್ತರು ಫೆಲೋಷಿಪ್ನ ನಿಯಮಗಳು ಮತ್ತು ಅರ್ಜಿ ನಮೂನೆಯನ್ನು ಪ್ರಾಧಿಕಾರದ ಜಾಲತಾಣ www.kuvempubhashabharathi.kamataka.gov.in ನಿಂದ ಪಡೆಯಬಹುದಾಗಿದೆ. ಜಾಲತಾಣದಲ್ಲಿ ನೀಡಲಾದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಂಚೆ ಅಥವಾ ಕೊರಿಯರ್ ಮೂಲಕ ರಿಜಿಸ್ಟ್ರಾರ್, ಕುವೆಂಪು ಭಾಷಾ ಭಾರತಿ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು–560056 ವಿಳಾಸಕ್ಕೆ ಕಳುಹಿಸಿಕೊಡಬೇಕು.
ಅಪೂರ್ಣ ಅರ್ಜಿ ಹಾಗೂ ಕೊನೆಯ ದಿನಾಂಕದ ನಂತರ ಸಲ್ಲಿಕೆಯಾಗುವ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಾಧಿಕಾರದ ರಿಜಿಸ್ಟ್ರಾರ್ ಈಶ್ವರ್ ಕು. ಮಿರ್ಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.