ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಉಳವಿ ಮಹಾಮನೆ ಪಾದಯಾತ್ರೆ ಸಮಿತಿ, ಉಳವಿ ಚನ್ನಬಸವೇಶ್ವರ ಮಹಾಮನೆ ದಾಸೋಹ ಸಮಿತಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಚಿತ್ರದುರ್ಗ ಘಟಕ ಇವರ ಸಹಯೋಗದಲ್ಲಿ ಅವಿರಳ ಜ್ಞಾನಿ ಚನ್ನಬಸವಣ್ಣನವರ ರಥೋತ್ಸವದ ಅಂಗವಾಗಿ
ಈ ತಿಂಗಳ ಅಥವಾ ಜನವರಿ 2026ರ ಮಾಹೆಯಲ್ಲಿ ಹೊಳಲ್ಕೆರೆ ಒಂಟಿ ಕಂಬದ ಮುರುಘಾಮಠದ ತಿಪ್ಪೇರುದ್ರ ಸ್ವಾಮಿಗಳ ನೇತೃತ್ವದಲ್ಲಿ ವಚನ ಸಂದೇಶ ಹಾಗೂ ಹಸಿರು ಜಾಗೃತಿಗಾಗಿ ಹೊಳಲ್ಕೆರೆಯಿಂದ ಉಳವಿವರೆಗೂ ಸುಮಾರು(300 ಕಿ.ಮೀ) ಪಾದಯಾತ್ರೆಯನ್ನು ಪ್ರಸಕ್ತ ಸಾಲಿನ ಮಾಹೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.
ಅದರ ಅಂಗವಾಗಿ ಪಾದಯಾತ್ರೆಯ, ಉದ್ದೇಶ ದಿನಾಂಕ, ಆರಂಭ, ಅಂತ್ಯ ಮತ್ತು ಎಲ್ಲೆಲ್ಲಿ ಪಾದಯಾತ್ರೆ ಹಾದು ಹೋಗುತ್ತದೆ ಎಂಬ ವಿವರ ತಿಳಿಸುವ ಸಲುವಾಗಿ ಡಿಸೆಂಬರ್-8ರಂದು ಸೋಮವಾರ ಸಂಜೆ 4 ಗಂಟೆಗೆ ಒಂಟಿ ಕಂಬದ ಮುರುಘಾಮಠದ ಪ್ರಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 8431120312 ಹಾಗು 9945873926 ಈ ನಂಬರ್ ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

