ಹಿರಿಯೂರು ಸ್ಥಾವರಕ್ಕೆ ಅದಿರು ಸಂಸ್ಕರಣೆ, ಸ್ಪಾಂಜ್ ಪೈಪ್ ಉತ್ಪಾದನೆಗಾಗಿ  3 ಸಾವಿರ ಕೋಟಿ ಹೂಡಿಕೆ

News Desk

ಹಿರಿಯೂರು ಸ್ಥಾವರಕ್ಕೆ ಅದಿರು ಸಂಸ್ಕರಣೆ, ಸ್ಪಾಂಜ್ ಪೈಪ್ ಉತ್ಪಾದನೆಗಾಗಿ  3 ಸಾವಿರ ಕೋಟಿ ಹೂಡಿಕೆ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿರಿಯೂರು ಸ್ಥಾವರ ಅಭಿವೃದ್ಧಿಗೆ 3,000 ಕೋಟಿ ಹೂಡಿಕೆ ಪ್ರಕಟಿಸಿದ ಕಿರ್ಲೋಸ್ಕರ್ ಫೆರಸ್! ಶೇ. 99 ಕನ್ನಡಿಗರಿಗೆ ಉದ್ಯೋಗ ಮೀಸಲು! ಇಟ್ಟಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೂಡಿಕೆ ಆಕರ್ಷಣೆ, ಉದ್ಯಮ ವಿಸ್ತರಣೆಯ ಗುರಿ ಇರಿಸಿಕೊಂಡು ಕೈಗಾರಿಕಾ ಇಲಾಖೆಯ ಉನ್ನತಮಟ್ಟದ ನಿಯೋಗದೊಂದಿಗೆ ಈ ದಿನ ಪುಣೆಯಲ್ಲಿ ರೋಡ್ ಶೋ ಹಮ್ಮಿಕೊಳ್ಳಲಾಗಿದೆ.

- Advertisement - 

ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರಿಸ್ ಪ್ರಮುಖರೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಸಂಸ್ಥೆಯು ಮುಂದಿನ 3 ವರ್ಷಗಳಲ್ಲಿ ಉಕ್ಕು ತಯಾರಿಕೆಯನ್ನು ವಿಸ್ತರಿಸಲು, ಕಬ್ಬಿಣದ ಅದಿರು ಸಂಸ್ಕರಣೆಯನ್ನು ಹೆಚ್ಚಿಸಲು ಮತ್ತು ಸ್ಪಾಂಜ್ ಪೈಪ್ ಉತ್ಪಾದನೆಗಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸ್ಥಾವರವನ್ನು ಅಭಿವೃದ್ಧಿಪಡಿಸಲು 3,000 ಕೋಟಿ ಹೂಡಿಕೆ ಮಾಡಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ತನ್ನ ಸಂಸ್ಥೆಯಲ್ಲಿ ಶೇ. 99 ರಷ್ಟು ಕನ್ನಡಿಗರಿಗೆ ಮೀಸಲಿಡುವುದಾಗಿ ತಿಳಿಸಿದ್ದು ಸಂತಸ ತರಿಸಿದೆ. ಕಳೆದ ಎರಡು ದಶಕಗಳಿಂದ ಸಂಸ್ಥೆ ತನ್ನ ಲಾಭದ ಶೇ. 2ರಷ್ಟು ಅಂಶವನ್ನು

- Advertisement - 

ಸಿಎಸ್ಆರ್ ಚಟುವಟಿಕೆಗಳಿಗೆ ಮೀಸಲಿಟ್ಟಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಆರೋಗ್ಯ ಮತ್ತು ಜನ ಕಲ್ಯಾಣದ ಕ್ಷೇತ್ರದಲ್ಲಿ ಹೆಚ್ಚಿನ ಒತ್ತು ನೀಡಲಿರುವುದು ಶ್ಲಾಘನೀಯ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

 

Share This Article
error: Content is protected !!
";