ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
GIM ಒಡಂಬಡಿಕೆ ಫಲಶ್ರುತಿ :ಕಾರ್ಲ್ಸ್ ಬರ್ಗ್ 350 ಕೋಟಿ ಹೂಡಿಕೆಗೆ ಬದ್ಧತೆ ಪುನರುಚ್ಚಾರ ಮಾಡಿದರು ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಹೇಳಿದರು.
ಡೆನ್ಮಾರ್ಕ್ ಮೂಲದ #Carlsberg ಪಾನೀಯ ಕಂಪೆನಿಯಾಗಿದ್ದು, ಶುದ್ಧ ಉತ್ಪಾದನಾ ತಂತ್ರಜ್ಞಾನ ಮತ್ತು ನೈಸರ್ಗಿಕ ಸಂಪತ್ತಿನ ಬಳಕೆಗೆ ಪ್ರಸಿದ್ಧವಾಗಿದೆ. ಹಲವಾರು ದೇಶಗಳಲ್ಲಿ ತನ್ನ ಉತ್ಪನ್ನಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿರುವ ಈ ಕಂಪನಿ, ಭಾರತದತ್ತ ವಿಶೇಷ ಗಮನ ಹರಿಸಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಕಾರ್ಲ್ಸ್ ಬರ್ಗ್ ಗ್ರೂಪ್ CEO ಜೇಕಬ್ ಆರೂಪ್-ಆಂಡರ್ಸನ್ ಹಾಗೂ ಅವರ ತಂಡವನ್ನು ಭೇಟಿಯಾಗಿ, ಜಾಗತಿಕ ಹೂಡಿಕೆದಾರರ ಸಮಾವೇಶದ (#GIM2025) ಸಂದರ್ಭದಲ್ಲಿ ಸಹಿ ಮಾಡಲಾದ ಒಡಂಬಡಿಕೆಯಡಿಯಲ್ಲಿ ನಡೆಯುತ್ತಿರುವ 350 ಕೋಟಿ ಹೂಡಿಕೆಯ ಪ್ರಗತಿಯ ಬಗ್ಗೆ ಮಾತುಕತೆ ನಡೆಸಿದೆವು ಎಂದು ಹೇಳಿದರು.
ಕಾರ್ಲ್ಸ್ಬರ್ಗ್ ತಂಡವು ತಮ್ಮ ಜಾಗತಿಕ ವ್ಯಾಪಾರ, ಭಾರತದಲ್ಲಿನ ಹಾಜರಾತಿ ಹಾಗೂ ಪ್ರಸ್ತುತ ಹೂಡಿಕೆ ಕುರಿತು ವಿವರವಾಗಿ ಮಾಹಿತಿ ಹಂಚಿಕೊಂಡರು. ಭಾರತವು ತಮಗೆ ಪ್ರಮುಖ ಬೆಳವಣಿಗೆ ಮಾರುಕಟ್ಟೆ ಎಂದು ಪುನರುಚ್ಚರಿಸಿದರು ಮತ್ತು ದೀರ್ಘಕಾಲಿಕ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದರು.
ರಾಜ್ಯದಲ್ಲಿ ಉದ್ಯಮ ನಡೆಸುವಿಕೆಯನ್ನು ಇನ್ನಷ್ಟು ಸುಲಭಗೊಳಿಸಲು ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದೆಂಬ ವಿಶ್ವಾಸವನ್ನು ಸಚಿವ ಎಂ.ಬಿ ಪಾಟೀಲ್ ವ್ಯಕ್ತಪಡಿಸಿದರು.