ಕೋಟೆನಾಡಿನ ವಕೀಲರಿಂದ 3ನೇ ಬಾರಿಗೆ ಕುರುಕ್ಷೇತ್ರ ನಾಟಕ ಪ್ರದರ್ಶನ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ವಕೀಲರ ಸಂಘ ಮತ್ತು ವಕೀಲರ ಸಾಂಸ್ಕೃತಿಕ ಕಲಾ ಬಳಗದಿಂದ ಮೂರನೇ ಬಾರಿಗೆ ಕುರುಕ್ಷೇತ್ರ ಅರ್ಥಾತ್ ಧರ್ಮ ರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ಡಿಸೆಂಬರ್ ೦೬ ರಂದು ರಾತ್ರಿ ೮ ಗಂಟೆಗೆ ನ್ಯಾಯಾಲಯದ ಮುಂಬಾಗ ಪ್ರದರ್ಶನ ಮಾಡಲಿದ್ದು
, ನಾಟಕದ ಪ್ರಚಾರ  ಕರ ಪತ್ರಿಕೆಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರೋಣ ವಾಸುದೇವ್ ಅವರು ಕರ ಪತ್ರಗಳನ್ನು ಪ್ರದರ್ಶನ ಮಾಡುವ ಮೋಲಕ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ನ್ಯಾಯಾಧೀಶರು, ವಕೀಲರು ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳನ್ನು ಪ್ರದರ್ಶನ ಮಾಡುತ್ತಿರುವುದು ಉತ್ತಮ ಬೆಳವಣಿಗೆ ನಮ್ಮ ವಕೀಲರು ಅಭಿನಯ ಮಾಡುತ್ತಿದ್ದು, ಕಳೆದ ಎರಡು ಬಾರಿ ಅತ್ಯಂತ ಯಶಸ್ವಿಯಾಗಿ ಪ್ರದರ್ಶನ ಆಗಿರುವ ಬಗ್ಗೆ ಕೇಳಿದ್ದೆ ಎಂದರು.

- Advertisement - 

 ವಕೀಲರ ಕಲಾ ಪ್ರದರ್ಶನ ನಿಜಕ್ಕೂ ಶ್ಲಾಘನೀಯ. ಈ ನಾಟಕದಲ್ಲಿ ಯುದ್ದಕ್ಕಿಂತ ಸಂಧಾನ ಪರಿಕಲ್ಪನೆ ಕಾಣುತ್ತದೆ. ನಾಟಕದಲ್ಲಿ ಕಲಾವಿದರು ಇರುತ್ತಾರೆ ನಾಟಕದ ಸಾರಾಂಶ ನ್ಯಾಯ, ನೀತಿ, ರಾಜಿ ಸಂದಾನ  ಮಧ್ಯಸ್ಥಿಕೆ ಇರುತ್ತದೆ. ರಾಜಿ ಆಗದಿದ್ದರೇ ಅಂತಿಮವಾಗಿ  ಕುರುಕ್ಷೇತ್ರ ನಡೆಯುತ್ತದೆ. ಹಾಗಾಗಿ ನಾಟಕ ಕಕ್ಷಿಗಾರರಿಗೆ ಉತ್ತಮ ಮಾರ್ಗದರ್ಶನ ನೀಡುತ್ತದೆ ಎಂದರು. ಅದ್ದರಿಂದ ನ್ಯಾಯಾಲಯದ ಬಹುತೇಕ ಮೊಕದ್ದಮೆಯನ್ನು ರಾಜಿ  ಸಂದಾನದ ಮೂಲಕ ಇಥ್ಯರ್ತ ಮಾಡಿಕೊಳ್ಳುವುದು ಉತ್ತಮ ಎಂಬ ಸಂದೇಶವನ್ನು ಈ  ಕುರುಕ್ಷೇತ್ರ ನಾಟಕ ನೀಡುತ್ತದೆ ಎಂದು ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್.ಎಸ್. ಮಹೇಶ್ವರಪ್ಪ ಮಾತನಾಡಿ, ಕಲೆಯೆಂಬುದು ಹರಿಯುವ ನೀರು ಇದ್ದ ಹಾಗೆ ನಿಂತ ನೀರಲ್ಲ, ಹಾಗೆಯೇ  ಕಲೆ ಇಂದು ನಿನ್ನೆಯದಲ್ಲ ಇದಕ್ಕೆ ತನ್ನದೇ ಆದ ಇತಿಹಾಸವಿದೆ  ರಾಜಮಹಾರಾಜರ ಕಾಲದಲ್ಲಿ ಮನೋರಂಜನೆಗೆ ಅದ್ವಿತೀಯ ಸ್ಥಾನ ಮಾನ ಪಡೆದಿತ್ತು .ಇದಕ್ಕೆ ಮನಸೋಲದವರು ಬಹುತೇಕ ಯಾರು ಇಲ್ಲ ಎಂದರು.

- Advertisement - 

ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಹಾಗೂ ಕೃಷ್ಣ ಪಾತ್ರಧಾರಿ ಸಿ.ಶಿವು ಯಾದವ್ ಮಾತನಾಡಿ, ಹಳ್ಳಿಗಳಲ್ಲಿ ಸಹ ಹಬ್ಬ ಹರಿದಿನಗಳಲ್ಲಿ ಖುಷಿಗಾಗಿ, ಮನೋರಂಜನೆಗೆ ಹೆಚ್ಚು ಆದ್ಯತೆ ನೀಡಿ ಕಲೆಯನ್ನು ಉಳಿಸಿಕೊಂಡು ಬಂದಿರುವುದು ಇತಿಹಾಸದ ಪುಟಗಳಲ್ಲಿ ತಿಳಿದು ನೋಡಬಹುದು. ಕಲಾಮಾತೆಯನ್ನು ಪೂಜಿಸೋಣ, ಆರಾಧಿಸೋಣ. ಕಲೆ ಉಳಿಸಿ ಬೆಳೆಸೋಣ. ಈ ಮೂಲಕ ನಮ್ಮ ಚಿತ್ರದುರ್ಗ ಜಿಲ್ಲಾ ವಕೀಲರು ರಾಜ್ಯಾದ್ಯಂತ ಹೆಸರು ಮಾಡುವಂತಾಗಿದೆ. ನಮ್ಮ ಸಂಘದಿಂದ ಉತ್ತಮ ಸ್ಪಂದನೆ ಸಿಗುತ್ತಿದ್ದು ನಮಗೆ ಖುಷಿ ತಂದಿದೆ ಎಂದರು.

ಎಲ್ಲಾ ಕಲಾವಿದರು ಸುಮಾರು ದಿನಗಳಿಂದ ತಮ್ಮ ಕಚೇರಿ ಕೆಲಸ ಬಿಟ್ಟು  ನಾಟಕದ ತಾಲೀಮಿನಲ್ಲಿ ಭಾಗವಹಿಸಿದ್ದಾರೆ. ಕಲಾವಿದರಿಗೆ ನನ್ನ ಧನ್ಯವಾದಗಳು  ಜೊತೆಗೆ ಈ ದಿವಸ ನಮ್ಮ ಜಿಲ್ಲಾ ನ್ಯಾಯಾಧೀಶರು ಜೊತೆಗೆ ನ್ಯಾಯಾಲಯದ ನ್ಯಾಯಾಧೀಶರುಗಳು ಈ ನಾಟಕದ ಕರಪತ್ರಗಳನ್ನು ಬಿಡುಗಡೆ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಅದನ್ನು ಯಶಸ್ವಿಯಾಗಿ ನೆರವೇರಿಸಿ ಕೊಟ್ಟು ನಸಿಸಿ ಹೋಗುವ ಪೌರಾಣಿಕ ಮತ್ತು ಐತಿಹಾಸಿಕ ಕಲೆಗೆ ಪ್ರೋತ್ಸಾಹ ನೀಡಿದ ನ್ಯಾಯಾದೀಶರುಗಳಿಗೆ ಅಭಿನಂದನೆಗಳನ್ನು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಚಿತ್ರದುರ್ಗ ನ್ಯಾಯಾಲಯದ ನ್ಯಾಯಾಧೀಶರುಗಳು ಉಪಸ್ಥಿತರಿದ್ದರು. ಚಿತ್ರದುರ್ಗ ಜಿಲ್ಲಾ ವಕೀಲರ ಸಾಂಸ್ಕೃತಿಕ ಕಲಾ ಬಳಗದ ವ್ಯವಸ್ಥಾಪಕ ಪಿ.ಆರ್.ವೀರೇಶ್, ಸಂಯೋಜಕ ಬಿ.ಡಿ.ಬಸವರಾಜ್, ಸ್ಟೇಜ್ ಮ್ಯಾನೇಜರ್ ಬೀಸಹಳ್ಳಿ ಜಯಪ್ಪ ಮತ್ತು ಕುರುಕ್ಷೇತ್ರ ನಾಟಕದ ಪಾತ್ರಧಾರಿಗಳು ಉಪಸ್ಥಿತರಿದ್ದರು.

 

 

 

Share This Article
error: Content is protected !!
";