ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಇಲಾಖೆ ಉಪ ನಿರ್ದೇಶಕರ ಮನೆ ಮೇಲೆ ದಾಳಿ 4 ಕೋಟಿ ಪತ್ತೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಭುವನೇಶ್ವರ (ಒಡಿಶಾ):
ಒಡಿಶಾದ ಗಣಿ ಇಲಾಖೆಯ ಉಪ ನಿರ್ದೇಶಕ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು ನಂತರ ಅವರ ಮನೆ ಮೇಲೆ ದಾಳಿ ನಡೆಸಿರುವ ಜಾಗೃತ ದಳ ಅಧಿಕಾರಿಗಳು 4 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣ ವಶಪಡಿಸಿಕೊಂಡಿದ್ದಾರೆ. ರಾಜ್ಯ ಜಾಗೃತ ದಳದ ಇತಿಹಾಸದಲ್ಲೇ ನಡೆದ ಅತಿದೊಡ್ಡ ನಗದು ಜಪ್ತಿ ಕಾರ್ಯಾಚರಣೆ ಎನ್ನಲಾಗಿದೆ.

ಏನಿದು ಪ್ರಕರಣ:
ಪರವಾನಗಿ ಪಡೆದ ಕಲ್ಲಿದ್ದಲು ವ್ಯಾಪಾರಿಯಿಂದ ಕಟಕ್ ವೃತ್ತದ ಗಣಿ ಉಪ ನಿರ್ದೇಶಕ ದೇವಬ್ರತ್ ಮೊಹಂತಿ ಮಂಗಳವಾರ ರಾತ್ರಿ
30 ಸಾವಿರ ಲಂಚ ಪಡೆಯುತ್ತಿದ್ದಾಗ ಜಾಗೃತ ದಳದ ಅಧಿಕಾರಿಗಳ ಕೈಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದರು. ಆರೋಪಿ ದೇವಬ್ರತ್ ಅವರನ್ನು ವಿಜಿಲೆನ್ಸ್ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.

- Advertisement - 

ಕಲ್ಲಿದ್ದಲು ಗಣಿಯನ್ನು ಸುಗಮವಾಗಿ ನಡೆಸಲು ಮತ್ತು ಅಕ್ರಮವಾಗಿ ಸಾಗಣೆಗೆ ಅಡ್ಡಿಪಡಿಸದಿರಲು ಅವರು ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ತಿಳಿದುಬಂದಿದೆ. ಕಂತೆ ಕಂತೆ ಹಣ:
ಗಣಿ ಅಧಿಕಾರಿಯ ಬಂಧನದ ಬಳಿಕ ಬುಧವಾರ ಮೊಹಂತಿ ಅವರಿಗೆ ಸೇರಿದ ಮೂರು ಪ್ರಮುಖ ಸ್ಥಳಗಳ ಮೇಲೆ ಏಕಕಾಲದಲ್ಲಿ ಜಾಗೃತ ದಳದ ಅಧಿಕಾರಿಗಳು ದಾಳಿ ನಡೆಸಿದರು.

ಭುವನೇಶ್ವರದ ಶ್ರೀವಿಹಾರ್ ನೇಚರ್ಸ್ ಅಪಾರ್ಟ್‌ಮೆಂಟ್‌ನ ಫ್ಲಾಟ್ ನಲ್ಲಿ ತಪಾಸಣೆ ನಡೆಸಿದಾಗ ಟ್ರಾಲಿ ಬ್ಯಾಗ್‌ಗಳು ಮತ್ತು ಕಪಾಟುಗಳಲ್ಲಿ ಬಚ್ಚಿಟ್ಟಿದ್ದ 4 ಕೋಟಿಗೂ ಅಧಿಕ ನಗದು ಪತ್ತೆಯಾಗಿದೆ. ಅಧಿಕಾರಿಗಳು ಸಿಕ್ಕ ಹಣ ಎಣಿಸಲು ಯಂತ್ರಗಳನ್ನು ಬಳಸುತ್ತಿದ್ದಾರೆ.

- Advertisement - 

ಅಧಿಕಾರಿಯ ಮನೆಯಲ್ಲಿ 4 ಕೋಟಿ ಪತ್ತೆಯಾಗಿದೆ. ಜೊತೆಗೆ, ಅವರ ಕಚೇರಿ ಡ್ರಾನಿಂದ 1.20 ಲಕ್ಷ ವಶಪಡಿಸಿಕೊಳ್ಳಲಾಗಿದೆ. ಇದಲ್ಲದೇ, ಅಧಿಕಾರಿಗೆ ಸೇರಿದ ಭುವನೇಶ್ವರದ ಬೆಟ್ಟಗಳ ಬಳಿ 2,400 ಚದರ ಅಡಿ ವಿಸ್ತೀರ್ಣದ ಎರಡು ಅಂತಸ್ತಿನ ಕಟ್ಟಡ ಹಾಗೂ ಸುನಲಂಕಾ ಗ್ರಾಮದಲ್ಲಿ 130 ಚದರ ಮೀಟರ್ ವಿಸ್ತೀರ್ಣದ ಬೃಹತ್ ಕಟ್ಟಡವನ್ನು ಜಾಗೃತ ದಳದ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಆದಾಯ ಮೀರಿದ ಆಸ್ತಿ​:
ಭುವನೇಶ್ವರ ವಿಜಿಲೆನ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು
, ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಮೇಲೆ ದೇವಬ್ರತ್ ಮೊಹಂತಿ ಮೇಲೆ ತನಿಖೆ ತೀವ್ರಗೊಳಿಸಲಾಗಿದೆ.

ದಾಳಿ ಪ್ರಕ್ರಿಯೆ ಇನ್ನೂ ಮುಂದುವರೆದಿದ್ದು, ಆಸ್ತಿಯ ಒಟ್ಟು ಮೌಲ್ಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಪರಿಶೀಲನೆ ಪೂರ್ಣಗೊಂಡ ಬಳಿಕ ಮೊಹಂತಿಯವರ ಸ್ಥಿರ ಮತ್ತು ಚರಾಸ್ತಿಗಳ ವಿವರವಾದ ಮೌಲ್ಯಮಾಪನ ನಡೆಸಲಾಗುವುದು ಎಂದು ಭುವನೇಶ್ವರ ವಿಜಿಲೆನ್ಸ್ ವಿಭಾಗದ ಎಸ್​ಪಿ ಸರೋಜ್ ಕುಮಾರ್ ಸಮಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

 

Share This Article
error: Content is protected !!
";