ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು – ಗಗನಚುಕ್ಕಿ (ಐರಾವತ ಬಸ್ ಪ್ರವಾಸ):
ಪ್ರವಾಸಿಗರು ಬೆಂಗಳೂರಿನಿಂದ ಹೊರಟು ಶಿವನಸಮುದ್ರದ ಗಗನಚುಕ್ಕಿ ಜಲಪಾತ, ತಲಕಾಡು, ಸೋಮನಾಥಪುರ ಮತ್ತು ಮುಡುಕುತೊರೆ ತಾಣಗಳನ್ನು ವೀಕ್ಷಿಸಬಹುದು. ಈ 340 ಕಿ.ಮೀ ಪ್ರಯಾಣದ ಪ್ಯಾಕೇಜ್‍ಗೆ ವಯಸ್ಕರಿಗೆ 750 ರೂ. ಹಾಗೂ ಮಕ್ಕಳಿಗೆ 600 ರೂ. ದರ ನಿಗದಿಪಡಿಸಲಾಗಿದೆ. ಈ ಪ್ರವಾಸವು ಜುಲೈ 05, 2025 ರಿಂದ ಲಭ್ಯವಿರಲಿದೆ.
ಬೆಂಗಳೂರು – ಗಗನಚುಕ್ಕಿ (ಐರಾವತ ಕ್ಲಬ್ ಕ್ಲಾಸ್):
ಇದೇ ಪ್ರವಾಸಿ ತಾಣಗಳಿಗೆ ಅಂದರೆ ಗಗನಚುಕ್ಕಿ, ತಲಕಾಡು ಮತ್ತು ಸೋಮನಾಥಪುರಕ್ಕೆ ಐರಾವತ ಕ್ಲಬ್ ಕ್ಲಾಸ್ ಬಸ್ ಮೂಲಕವೂ ಪ್ರಯಾಣಿಸಬಹುದು. ಜುಲೈ 20, 2024 ರಿಂದ ಈ ಸೇವೆ ಲಭ್ಯವಿದ್ದು, ಇದರ ದರ ವಯಸ್ಕರಿಗೆ 600 ರೂ. ಹಾಗೂ ಮಕ್ಕಳಿಗೆ 450 ರೂ. ಆಗಿರುತ್ತದೆ.
ಬೆಂಗಳೂರು – ಚಿತ್ರದುರ್ಗ ಪ್ರವಾಸ:
ಐತಿಹಾಸಿಕ ತಾಣಗಳ ವೀಕ್ಷಣೆಗಾಗಿ ಬೆಂಗಳೂರಿನಿಂದ ಹೊರಟು ವಾಣಿವಿಲಾಸ ಸಾಗರ, ಹಿರಿಯೂರು ಮತ್ತು ಚಿತ್ರದುರ್ಗದ ಕೋಟೆಯನ್ನು ವೀಕ್ಷಿಸುವ ಅವಕಾಶವಿದೆ. 270 ಕಿ.ಮೀ ದೂರದ ಈ ಪ್ರವಾಸವು ಜೂನ್ 28, 2025 ರಿಂದ ಪ್ರಾರಂಭವಾಗಲಿದ್ದು, ಐರಾವತ ಕ್ಲಬ್ ಕ್ಲಾಸ್ ಬಸ್‍ನಲ್ಲಿ ವಯಸ್ಕರಿಗೆ 600 ರೂ. ಹಾಗೂ ಮಕ್ಕಳಿಗೆ 450 ರೂ. ಪ್ರಯಾಣ ದರವಿರುತ್ತದೆ.
ಬೆಂಗಳೂರು – ಬೇಲೂರು/ಹಳೇಬೀಡು ಪ್ರವಾಸ:
ಶಿಲ್ಪಕಲೆಗಳ ವೀಕ್ಷಣೆಗಾಗಿ ಶ್ರವಣಬೆಳಗೊಳ, ಬೇಲೂರು ಮತ್ತು ಹಳೇಬೀಡು ತಾಣಗಳ ಪ್ಯಾಕೇಜ್ ಸಿದ್ಧಪಡಿಸಲಾಗಿದೆ. 350 ಕಿ.ಮೀ ವ್ಯಾಪ್ತಿಯ ಈ ಪ್ರವಾಸವು ಮೇ 31, 2025 ರಿಂದ ಲಭ್ಯವಿದ್ದು, ಐರಾವತ ಕ್ಲಬ್ ಕ್ಲಾಸ್ ಬಸ್ ಪ್ರಯಾಣಕ್ಕೆ ವಯಸ್ಕರಿಗೆ 670 ರೂ. ಮತ್ತು ಮಕ್ಕಳಿಗೆ 500 ರೂ. ದರ ನಿಗದಿಪಡಿಸಲಾಗಿದೆ.
ಆಸಕ್ತ ಪ್ರಯಾಣಿಕರು ನಿಗಮದ ಅಧಿಕೃತ ವೆಬ್‍ಸೈಟ್‍ಗಳಾದ www.ksrtc.in ಮತ್ತು www.ksrtc.karnataka.gov.in ಮೂಲಕ ಮುಂಗಡ ಟಿಕೆಟ್‍ಗಳನ್ನು ಕಾಯ್ದಿರಿಸಬಹುದು.
ಹೆಚ್ಚಿನ ಮಾಹಿತಿ ಮತ್ತು ವಿಚಾರಣೆಗಾಗಿ ದೂರವಾಣಿ ಸಂಖ್ಯೆ 080-26252625, ಮೊಬೈಲ್ ಸಂಖ್ಯೆ 7760990100 / 7760990560 / 7760990287 ಗಳನ್ನು ಸಂಪರ್ಕಿಸಬಹುದು.
ಸಾರ್ವಜನಿಕರು ಮತ್ತು ಪ್ರವಾಸಿಗರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಕೆ.ಎಸ್.ಆರ್.ಟಿ.ಸಿ ಬೆಂಗಳೂರು ಕೇಂದ್ರೀಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

