ಶಾರ್ಟ್ ಸರ್ಕ್ಯೂಟ್ ಬೆಂಕಿ ಅವಘಡಕ್ಕೆ 40 ಎಕರೆ ಬೆಳೆ ಸಂಪೂರ್ಣ ಭಸ್ಮ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಾಸಲು ಹೋಬಳಿ ಅರೂಡಿ ಗ್ರಾಮದ ಹೊರವಲಯದಲ್ಲಿ ಟ್ರಾನ್ಸ್ ಫಾರ್ಮರ್ ನಲ್ಲಿ  ಉಂಟಾದ ಶಾರ್ಟ್‌ಸರ್ಕ್ಯೂಟ್‌ನಿಂದ   ಉಂಟಾದ ಬೆಂಕಿ ಕಿಡಿ ಜಮೀನಿಗೆ  ವ್ಯಾಪಿಸಿ
, ಸುಮಾರು 40 ಎಕರೆ ಜಮೀನನಲ್ಲಿ ಬೆಳೆಯಲಾಗಿದ್ದ, ಮಾವು, ಅಡಿಗೆ, ತೆಂಗು, ಜಮ್ಮು ನೇರಳೆ ಗಿಡಗಳು ಸಂಪುರ್ಣವಾಗಿ ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ .

ಬೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಅನೇಕ ಬಾರಿ ಅನಧಿಕೃತ ಸಂಪರ್ಕವನ್ನು ಕಡಿತಗೊಳಿಸದೆ ಯಿರುವುದರಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement - 

ನಾಗರಾಜು ಎನ್ನುವರ ಸುಮಾರು 48 ಎಕರೆ ಜಮೀನಲ್ಲಿ ಬೆಳೆಯಲಾಗಿದ್ದ 20 ಎಕರೆ ಮಾವು, ತೆಂಗು, ಅಡಿಕೆ, 28 ಎಕರೆ ಜಮ್ಮು ನೇರಳೆ ಮರಗಳು, ಅಡಿಕೆ ಗಿಡಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಅಲ್ಲದೆ 5 ಲಕ್ಷ ಮೌಲ್ಯದ ಹನಿ ನೀರಾವರಿ ಘಟಕಕ್ಕೆ ಅಳವಡಿಸಿದ್ದ ಪೈಪ್ ಲೈನ್ ಸುಟ್ಟು ಭಸ್ಮವಾಗಿದೆ.

ವ್ಯಾಪಕವಾಗಿ ಹರಡಿದ ಬೆಂಕಿಯನ್ನು ನಂದಿಸಲು ಅಗ್ನಿ ಶಾಮಕ ದಳಕ್ಕೆ ಎಷ್ಠು ಬಾರಿ ಕರೆ ಮಾಡಿದರು ಸಂಪರ್ಕ ದೊರಕದೆ, ಬೆಂಕಿಯ ನಂದಿಸಲು ಸಾಧ್ಯವಾಗಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

- Advertisement - 

 

 

Share This Article
error: Content is protected !!
";