ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಾಪರ್ ಸರ್ಕಾರದ ಬಾಕಿ ಲೆಕ್ಕ! ಸಾಕಷ್ಟಿದೆ. ಅಕ್ಕಿ ಸಾಗಿಸುವ ಲಾರಿ ಮಾಲೀಕರಿಗೆ ₹260 ಕೋಟಿ ಬಿಲ್ ಬಾಕಿ, ಹಾಲು ಉತ್ಪಾದಕರಿಗೆ 468 ಕೋಟಿ ರೂ. ಪ್ರೋತ್ಸಾಹಧನ ಬಾಕಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಸಾರಿಗೆ ನೌಕರರ ಹಿಂಬಾಕಿ ಪಾವತಿ ಸೇರಿದಂತೆ ಒಟ್ಟು 6,400 ಕೋಟಿಗೂ ಹೆಚ್ಚು ಬಾಕಿ, ಬಿಬಿಎಂಪಿ ಗುತ್ತಿಗೆದಾರಾರಿಗೆ 23 ತಿಂಗಳಿಂದ 2,150 ಕೋಟಿ ಬಿಲ್ ಬಾಕಿ ಇದ್ದು ರಸ್ತೆಗುಂಡಿ ಮುಚ್ಚಲು ದುಡ್ಡಿಲ್ಲ, ಸಾರಿಗೆ ನೌಕರರ ಸಂಬಳಕ್ಕೆ ದುಡ್ಡಿಲ್ಲ ಎಂದು ಅಶೋಕ್ ದೂರಿದ್ದಾರೆ.
ಆಂಬ್ಯುಲೆನ್ಸ್ ಚಾಲಕರ ಸಂಬಳಕ್ಕೆ ದುಡ್ಡಿಲ್ಲ, ಗ್ರಾ.ಪಂ.ಗಳಲ್ಲಿ ಕುಡಿಯುವ ನೀರಿಗೆ ದುಡ್ಡಿಲ್ಲ, ಎನ್ ಹೆಚ್ಎಂ ನೌಕರರ ಸಂಬಳಕ್ಕೆ ದುಡ್ಡಿಲ್ಲ, ಶಾಲಾ ಮಕ್ಕಳಿಗೆ ಮೊಟ್ಟೆ, ಸಮವಸ್ತ್ರ, ಶೂ, ಸಾಕ್ಸ್, ಕೊಡಲು ದುಡ್ಡಿಲ್ಲ. ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಪಾಪರ್ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದಕ್ಕೂ ದುಡ್ಡಿಲ್ಲ ಎಂದು ಅಶೋಕ್ ವಾಗ್ದಾಳಿ ಮಾಡಿದ್ದಾರೆ.