ಚಂದ್ರವಳ್ಳಿ ನ್ಯೂಸ್, ಭೀಮಸಮುದ್ರ
ಸಮೀಪದ ಹಿರೇಗುಂಟನೂರು ಗ್ರಾಮದ ಶ್ರೀ ದುರ್ಗಾಂಬಿಕಾ ದೇವಿ ಐದು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಕೆಸಿ ವೀರೇಂದ್ರ ಪಪ್ಪಿ ಮಾತನಾಡಿ ಹಿರೇಗುಂಟನೂರು ಗ್ರಾಮಕ್ಕೆ 5 ಕೋಟಿ ಅನುದಾನ ಮಾಡಿದ್ದು ಕಾಮಗಾರಿಯು ಜಾಲ್ತಿಯಲ್ಲಿದ್ದು ಈ ಗ್ರಾಮಕ್ಕೆ ವಾಲ್ಮೀಕಿ ಅವಶ್ಯಕತೆ ಇದ್ದು ಮುಂದಿನ ದಿನಗಳಲ್ಲಿ ವಾಲ್ಮೀಕಿ ಭವನಕ್ಕೆ ಒಂದು ಕೋಟಿ ಅನುದಾನ ಬಿಡುಗಡೆ ಮಾಡುತ್ತೇನೆಂದು ತಿಳಿಸಿದರು.
ಬಿಜೆಪಿ ಮುಖಂಡರಾದ ಜಿಎಸ್ ಅನಿಲ್ ಕುಮಾರ್ ಮಾತನಾಡಿ ಐದು ವರ್ಷಕ್ಕೆ ಒಮ್ಮೆ ನಡೆಯುವ ದೇವಿ ಜಾತ್ರಾ ಮಹೋತ್ಸವ ಅದ್ದೂರಿಯಿಂದ ಗ್ರಾಮಸ್ಥರು ಏರ್ಪಡಿಸಿದ್ದು ಗ್ರಾಮಸ್ಥರಿಗೆ ಹಾಗೂ ಬಂದಂತ ಎಲ್ಲಾ ಭಕ್ತಾದಿಗಳಿಗೆ ದೇವಿ ಒಳ್ಳೆಯದನ್ನು ಮಾಡಲಿ ಎಂದು ಹೇಳಿದರು.
ಗ್ರಾಮ ಪಂಚಾಯತಿ ಸದಸ್ಯ ಎಸ್ ಮಂಜುನಾಥ್ ಮಾತನಾಡಿ ಶಾಸಕರು ಗ್ರಾಮಕ್ಕೆ ಅನುದಾನವನ್ನು ನೀಡಿದ್ದಾರೆ. ಯಾವ ಶಾಸಕರು ಮಾಡಿದ ಕೆಲಸವನ್ನು ವೀರೇಂದ್ರ ಪಪ್ಪಿ ಅವರು ಮಾಡುತ್ತಿದ್ದಾರೆ ಅವರಿಗೆ ಗ್ರಾಮಸ್ಥರು ಪರವಾಗಿ ಧನ್ಯವಾದ ತಿಳಿಸಿದರು.
ಜಿಟಿವಿ ಗಿಲ್ಲಿ ನಟ ಮಾತನಾಡಿ ಹಿರೇಗುಂಟನೂರು ಗ್ರಾಮಕ್ಕೆ ಬಂದಿರುವುದು ಬಾಳ ಸಂತೋಷವಾಗಿದೆ ಗ್ರಾಮ ಪಂಚಾಯತಿ ಸದಸ್ಯರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಹೇಳಿದ್ದರು.
ಕರ್ನಾಟಕದ ಜನತೆ ನನಗೆ ಹಳ್ಳಿ ಹಳ್ಳಿಯಲ್ಲೂ ನನ್ನನ್ನು ಕರೆಸಿ ಅಭಿಮಾನ ತೋರಿಸುತ್ತಿರುವುದು ಸಂತೋಷವಾಗಿದೆ ನಾನು ಹಳ್ಳಿಯ ಯಾವುದೋ ಒಂದು ಮೂಲೆಯಲ್ಲಿದ್ದ ಪ್ರತಿಭೆ ಇಂತಹ ಕಾರ್ಯಕ್ರಮಕ್ಕೆ ಕರೆಸಿ ನನ್ನನ್ನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿದ ಎಲ್ಲರಿಗೂ ನನ್ನ ಧನ್ಯವಾದಗಳು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಕೆಸಿ ವೀರೇಂದ್ರ ಪಪ್ಪಿ ರವರಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಟಿವಿಯ ಗಗನ ಆಸೆ ಚಟಾಕಿ ಹಾರಿಸಿದರು. ವೇದಿಕೆ ಮೇಲೆ ದ್ಯಾಮಲಂಬ ದೇವಸ್ಥಾನದ ಅಧ್ಯಕ್ಷ ಚಂದ್ರಣ್ಣ, ವಸಂತ್ ಹೋಟೆಲ್ ಮಾಲೀಕರ ಸಂಘದ ಸಂಘಟನಾ ಕಾರ್ಯದರ್ಶಿ ಜೆ ವಿ ಸಿದ್ದೇಶ್, ಎನ್ ರಮೇಶ್, ಕೆಡಿಪಿ ಸದಸ್ಯ ನಾಗರಾಜ್, ರಾಜಕುಮಾರ್, ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವದ ಸದಸ್ಯರುಗಳು ಗ್ರಾಮ ಪಂಚಾಯಿತಿಯ ಸದಸ್ಯರುಗಳು ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

