5 ಗ್ಯಾರಂಟಿಗಳು 3 ಕ್ಷೇತ್ರಗಳನ್ನು ಗೆಲ್ಲಿಸಿವೆ

News Desk

ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ರಾಜ್ಯದ ಸರ್ವ ಸಮುದಾಯದ ಜನರ ಹಿತಕ್ಕಾಗಿ ಕಾಂಗ್ರೆಸ್ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಅತಿ ಹೆಚ್ಚು ಜನ ಮನ್ನಣೆ ಪಡೆದುಕೊಂಡಿರುವ ಕಾರಣ ಉಪ ಚುನಾವಣೆಯಲ್ಲಿ ೩ ಸ್ಥಾನಗಳ ಭರ್ಜರಿ ಗೆಲುವಿಗೆ ದಿಕ್ಸೂಚಿಯಾಗಿದೆ ಎಂದು ಬ್ಲಾಕ್ ಕಾಂಗ್ರೇಸ್ ಸಮಿತಿ ತಾಲ್ಲೂಕು ಅಧಕ್ಷ ಟಿ.ಕೆ. ಕಲೀಂವುಲ್ಲಾ ತಿಳಿಸಿದ್ದಾರೆ. 

               ಇವರು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಬ್ಲಾಕ್ ಕಾಂಗ್ರೇಸ್ ವತಿಯಿಂದ  ರಾಜ್ಯದ ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೇಸ್ ಭರ್ಜರಿ ಗೆಲುವ ಸಾಧಿಸಿರುವ ಹಿನ್ನಲೆಯಲ್ಲಿ ಪಕ್ಷದ  ಕಾರ್ಯಕರ್ತರು ವಾದ್ಯಮೇಳಗಳೊಂದಿಗೆ ಅದ್ದೂರಿ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ ಸಿಹಿ ಹಂಚಿ  ವಿಜಯೋತ್ಸವದ ಆಚರಿಸಿದರು.

              ರಾಜ್ಯದಲ್ಲಿ ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವು ಅತ್ಯಧಿಕ ಸ್ಥಾನಗಳನ್ನು ಪಡೆಯಲು ಮುನ್ನುಡಿ ಬರೆದಂತಾಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ  ಪ್ರಗತಿಪರ ಚಿಂತನೆಗಳನ್ನು ರಾಜ್ಯದ ಜನ ಸ್ವೀಕಾರ ಮಾಡಿರುವ ಕಾರಣ ಅನ್ಯ ಪಕ್ಷಗಳ  ಯಾವ ಆಟಕ್ಕೂ ಮಣಿಯದೆ ಬೆಂಬಲ ಸೂಚಿಸಿರುವುದು ಅತ್ಯಂತ ವಿಶ್ವಾಸಾರ್ಹ ಸಂಗತಿ ಪಡಿಸಿದರು. 

              ಪಟ್ಟಣ ಪಂಚಾಯಿತಿ ನಾಮನಿರ್ದೇಶನ ಸದಸ್ಯ ಜಿ. ಪ್ರಕಾಶ ಮಾತನಾಡಿ  ರಾಜ್ಯದಲ್ಲಿ  ಮೂರು ಉಪಚುನಾವಣೆ ನಡೆದಿದ್ದು ಉಪಚುನಾವಣೆಯಲ್ಲಿ ಮೂರಕ್ಕೂ ಮೂರು ಕಾಂಗ್ರೆಸ್ ಪಕ್ಷದ  ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ರಾಜ್ಯದ ಮತದಾರರು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ದಕ್ಷ ಮತ್ತ ಜನಪರ ಆಡಳಿತವನ್ನು ಕೊಡುವಂತಹ ಪರಿಕಲ್ಪನೆಯನ್ನು ಹೊಂದಿದೆ. 

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅನೇಕ ಗ್ಯಾರಂಟಿಗಳನ್ನು ಕೊಟ್ಟು ದಲಿತರನ್ನು ಹಿಂದುಳಿದವರನ್ನು ಅಲ್ಪಸಂಖ್ಯಾತರನ್ನು ಸ್ವಾವಲಂಬಿಗಳನ್ನಾಗಿ  ಮಾಡುವ ಮುಖಾಂತರ ನಿರಂತರವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಾ ಬರುತ್ತಿದೆ. ಇನ್ನು ಮುಂದೆಯೂ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುತ್ತದೆ ಎಂದು ಕಾರ್ಯಕರ್ತರಿಗೆ ತಿಳಿಸಿದರು.

              ಈ ವಿಜಯೋತ್ಸವದಲ್ಲಿ ಭಾಗವಹಿಸಿದ ಪ.ಪಂ.ನ ಸದಸ್ಯ ಎಸ್.ಖಾದರ್, ಬ್ಲಾಕ್ ಕಾಂಗ್ರೇಸ್ ನ ಮಾಜಿ ಅಧ್ಯಕ್ಷ ಪಟೇಲ್ ಜಿ. ಪಾಪನಾಯಕ, ಜಿ.ಪಂ.ನ ಮಾಜಿ ಸದಸ್ಯ ಕೆ.ಜಗಲೂರಯ್ಯ, ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ವಿ.ಮಾರನಾಯಕ,ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ಎಸ್.ಜಯಣ್ಣಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಪ್ರೇಮಸುಧಾಮುಖಂಡರಾದ ಎಸ್.ಈ. ದೇವಯ್ಯ, ಐಯ್ಯಣ್ಣ, ಜಿ.ಪಿ.ಸುರೇಶ್, ಭಕ್ತಪ್ರಹ್ಲಾದ್, ತಮ್ಮಣ್ಣ, ಪಾಪಣ್ಣ, ಕರಿಬಸಪ್ಪ, ಕೊಂಡ್ಲಹಳ್ಳಿ ತಿಪ್ಪೇಸ್ವಾಮಿ, ಮಹಮದ್ ಇಕ್ಬಾಲ್ರಫಿಕ್ ಅಹಮದ್, ಟಿ.ಎಸ್.ಮೂರ್ತಿತಿಪ್ಪೇರುದ್ರ, ಸಿದ್ದಪ್ಪ, ಶಿವಲಿಂಗ, ಗೋಪಾಲ್ರುದ್ರಪ್ಪ, ನಾಗೇಶ್, ಮಂಜುನಾಥ, ಮರ್‍ಲಹಳ್ಳಿ ನಾಗರಾಜ ಹಾಗೂ ಹೆಚ್ಚಿನ ಕಾರ್ಯಕರ್ತರು ಭಾಗವಹಿಸಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";