ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನರೇಂದ್ರ ಮೋದಿ ಸರ್ಕಾರ 2023 – 24ನೇ ಸಾಲಿನ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಅನುದಾನ ಘೋಷಣೆ ಮಾಡಿತ್ತು.
ಇದುವರೆಗೂ ಯೋಜನೆಗೆ ನಯಾಪೈಸೆ ಹಣವನ್ನೂ ಕೇಂದ್ರ ಬಿಡುಗಡೆ ಮಾಡಿಲ್ಲ ಎಂದು ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದೆ.
ರಾಜ್ಯಕ್ಕಾದ ಈ ಅನ್ಯಾಯವನ್ನು ಪ್ರಶ್ನಿಸಬೇಕಾದ ರಾಜ್ಯದಿಂದ ಆಯ್ಕೆಯಾದ ಕರ್ನಾಟಕ ಬಿಜೆಪಿ ಪಕ್ಷದ ಸಂಸದರು, ಕೇಂದ್ರ ಸಚಿವರು ಮೌನವಹಿಸಿರುವುದೇಕೆ? ಎಂದು ಕಾಂಗ್ರೆಸ್ ತರಾಟೆ ತೆಗೆದುಕೊಂಡಿದೆ.