55 ರೌಡಿಗಳು ಗಡಿಪಾರು

News Desk

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :

ಗಣಪತಿ ಮತ್ತು ಈದ್ ಮೆರವಣಿಗೆ ಕುರಿತಂತೆ ಮೆರವಣಿಗೆ ಸಾಗುವ ಹಾದಿಯಲ್ಲಿ ೩೫೦ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. ಖಾಸಗಿ ಜನರಿಂದ ೫೦೦ ಸಿಸಿ ಟಿವಿ ಹಾಕಿಸಲಾಗಿದೆ. ಎಲ್ಲಾ ತಾಲೂಕಿನಲ್ಲೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಎಸ್ ಪಿ ಜಿ ಕೆ ಮಿಥುನ್ ಕುಮಾರ್ ಹೇಳಿದ್ದಾರೆ.

ಭದ್ರಾವತಿಯಲ್ಲಿ ೧೨೦, ಸಾಗರದಲ್ಲಿ ೭೦ ಹಾಗೂ ಶಿರಾಳಕೊಪ್ಪದಲ್ಲೂ ೨೫ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಜಿಲ್ಲೆಯಲ್ಲಿ ೧೩೦೦ ರೌಡಿಶೀಟರ್ ಇದ್ದಾರೆ. ೮೦ ಜನ ನ್ಯಾಯಾಂಗ ಬಂಧನದಲ್ಲಿದ್ದರೆ, ೫೩ ಜನರನ್ನು ಗಡಿಪಾರು ಮಾಡಲಾಗಿದೆ. ಇದರಲ್ಲಿ ೮ ಜನರನ್ನು ಗಣಪತಿ ಹಬ್ಬಕ್ಕಾಗಿ ಗಡಿಪಾರು ಮಾಡಲಾಗಿದೆ. ಉಳಿದವರಿಗೆ ಎಚ್ಚರಿಕೆ ನೀಡಲಾಗಿದೆ. ನಾಳೆ ಒಂದು ಆರ್ ಎಎಫ್ ತುಕಡಿ ಬರಲಿದೆ, ಹಬ್ಬಗಳ ಬಂದೋಬಸ್ತ್ ಗೆ ೧೫ ಕೆಎಸ್ಸಾರ್ಪಿ , ೮ ಡಿಎಆರ್ ತುಕಡಿ ಬರಲಿದೆ. ೧೦೦೦ ಹೋಮ್ ಗಾರ್ಡ್, ಹೆಚ್ಚುವರಿಯಾಗಿ ೧೫೦೦ ಜನರನ್ನು ನೇಮಿಸಿಕೊಳ್ಳಲಾಗಿದೆ.

ಕಳೆದ ವರ್ಷದಂತೆ ವಾಲಂಟಿಯರ್‍ಗಳು ಈ ಬರಿಯೂ ನೆರವಾಗಲಿದ್ದಾರೆ. ಜಿಲ್ಲೆಯಲ್ಲಿ ಸದ್ಯಕ್ಕೆ ೪೫೦ ಜನಕ್ಕೂ ಹೆಚ್ಚು ಜನ ವಾಲೆಂಟೈರ್‌ಗಳು ಮುಂದೆ ಬಂದಿದ್ದಾರೆ. ಈ ಸಂಖ್ಯೆ ಹೆಚ್ಚಾಗಲಿದೆ. ನ್ಯಾಯಾಲಯದ ಆದೇಶದಂತೆ ಡಿಜೆ ಬಳಕೆ ನಿಷೇಧಿಸಲಾಗಿದೆ ಎಂದರು.

 

 

- Advertisement -  - Advertisement -  - Advertisement - 
Share This Article
error: Content is protected !!
";