ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ಹೇಗಾದರೂ ಮಾಡಿ ಅಧಿಕಾರಕ್ಕೆ ಏರಬೇಕೆಂದು ಚುನಾವಣೆಗೂ ಮೊದಲು ಉಚಿತ ಗ್ಯಾರಂಟಿಗಳನ್ನು ಘೋಷಿಸಿದ್ದ ಕರ್ನಾಟಕ ಕಾಂಗ್ರೆಸ್, ಗ್ಯಾರಂಟಿ ಬಲದಿಂದ ಅಧಿಕಾರಕ್ಕೆ ಬಂದ ಬಳಿಕ ಷರತ್ತುಗಳ ಅನ್ವಯ ಎಂಬ ನಿಯಮದಡಿ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಚುನಾವಣಾ ಪೂರ್ವದಲ್ಲಿ ಗೃಹಜ್ಯೋತಿ ಹೆಸರಿನಲ್ಲಿ ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್‌ಎಂದುಘೋಷಿಸಿದ್ದ ಕಾಂಗ್ರೆಸ್‌ಅಧಿಕಾರಕ್ಕೆ ಬಳಿಕ, ಗ್ರಾಹಕರ ವಾರ್ಷಿಕ ಸರಾಸರಿ ವಿದ್ಯುತ್‌ಬಳಕೆ ಲೆಕ್ಕ ಹಾಕಿ ಅದನ್ನೇ ಉಚಿತ ವಿದ್ಯುತ್‌ಎಂದು ನೀಡತೊಡಗಿತು, ಅಲ್ಲದೆ ಸರಾಸರಿಗಿಂತ ಹೆಚ್ಚುವರಿ ವಿದ್ಯುತ್‌ಬಳಕೆಗೆ ದುಪ್ಪಟ್ಟು ದರ ವಿಧಿಸಿ ಜನರನ್ನು ಕೊಳ್ಳೆ ಹೊಡೆಯ ತೊಡಗಿತು ಎಂದು ಬಿಜೆಪಿ ದೂರಿದೆ.
ಇದೀಗ ಹೊಸ ಸಂಪರ್ಕಗಳಿಗೆ ಕೇವಲ 58 ಯೂನಿಟ್‌ಉಚಿತ ಎಂದು ಘೊಷಿಸುವ ಮೂಲಕ ಜನರನ್ನು ಸುಲಿಗೆ ಮಾಡತೊಡಗಿದೆ. ವಾಸ್ತವದಲ್ಲಿ ಕಾಂಗ್ರೆಸ್‌ಸರ್ಕಾರದ ಉಚಿತ ಯೂನಿಟ್ ಮೀರಿ ಬಳಸುವ ವಿದ್ಯುತ್ತಿಗೆ ದುಪ್ಪಟ್ಟು ದರ ವಿಧಿಸುವುದರಿಂದ ಗೃಹ ಜ್ಯೋತಿ ಇಲ್ಲದೇ ಇರುತ್ತಿದ್ದರೂ ದುಬಾರಿ ಬಿಲ್‌ಬರುತ್ತಿರಲಿಲ್ಲ.
ಒಂದು ಕಡೆ ಉಚಿತ ಎನ್ನುತ್ತಲೇ ಜನಸಾಮಾನ್ಯರ ಕಿಸೆಗೆ ಕಾಂಗ್ರೆಸ್‌ಸರ್ಕಾರ ಕನ್ನ ಹಾಕುತ್ತಿದೆ ಎಂದು ಬಿಜೆಪಿ ಟೀಕಾಪ್ರಹಾರ ಮಾಡಿದೆ. ಎಲ್ಲರಿಗೂ ಉಚಿತ ವಿದ್ಯುತ್‌ನೀಡುತ್ತೇವೆ ಎಂದು ಕಾಂಗ್ರೆಸ್‌ಪಕ್ಷ ಭರವಸೆ ನೀಡಿಲ್ಲ ಎಂಬ ಇಂಧನ ಸಚಿವರ ಹೇಳಿಕೆಯಂತೂ ಕಾಂಗ್ರೆಸ್‌ಸರ್ಕಾರದ ದುಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿಜೆಪಿ ತಿಳಿಸಿದೆ.