ಚಿತ್ರದುರ್ಗದಲ್ಲಿ 6 ಮಂದಿ ಬಾಂಗ್ಲಾ ದೇಶದ ನುಸುಳುಕೋರ ಬಂಧನ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಾಂಗ್ಲಾದೇಶದ ನುಸುಳುಕೋರರು ಚಿತ್ರದುರ್ಗ ನಗರದಲ್ಲಿ ಪತ್ತೆಯಾಗಿದ್ದು 6 ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ.

ನಗರದ ಹೊಳಲ್ಕೆರೆ ರಸ್ತೆ ಅರವಿಂದ್ ಗಾರ್ಮೆಂಟ್ಸ್ ಮತ್ತು ವೈಟ್ ವಾಷನ್ ಗಾರ್ಮೆಂಟ್ಸ್‌ಗಳ ಬಳಿ ಗಸ್ತು ಮಾಡುತ್ತಿರುವಾಗ ಧವಳಗಿರಿ ಬಡಾವಣೆಯ 2ನೇ ಹಂತದಲ್ಲಿ ಅನುಮಾನಸ್ಪದವಾಗಿ ಸಂಚರಿಸುತ್ತಿದ್ದ ವ್ಯಕ್ತಿಗಳನ್ನು ಹಿಡಿದುಡು ವಿಚಾರಣೆಗೊಳಪಡಿಸಿದಾಗ ನುಸುಳುಕೋರರ ಪತ್ತೆಯಾಗಿದೆ.

ಶೇಕ್ ಸೈಫುರ್ ರೋಹಮಾನ್ S/O ತಾರಾ ಮಿಯಾ, ಮೊಹಮ್ಮದ್ ಸುಮನ್ ಹುಸೇನ್ ಅಲಿ S/O ಮೊಹಮ್ಮದ್ ದುಲಾಲ್ ಹುಸೇನ್, ಮಜರುಲ್ S/O ಮಾರುಫ್, ಸನೋವರ್ ಹೊಸೈನ್ S/O ಅರಬ್ ಮಿಯಾ, ಮುಹಮ್ಮದ್ ಸಾಕಿಬ್ ಸಿಕ್ದರ್ C/O ಮುಹಮ್ಮದ್ ಸೆಲೀಮ್ ಸಿಕ್ದರ್, ಅಜೀಜುಲ್ ಶೇಕ್ S/O ರೆಹಮಾನ್ ಶೇಕ್ ಈ ಎಲ್ಲ ಆರೋಪಿತರನ್ನು ವಿಚಾರಣೆಗೊಳಪಡಿಸಿ ಅವರುಗಳ ಬಳಿ ಇದ್ದ ದಾಖಲಾತಿಗಳನ್ನು ಪರೀಶೀಲಿಸಿದಾಗ ಇವರೆಲ್ಲ ಬಾಂಗ್ಲಾದೇಶಕ್ಕೆ ಸೇರಿದ ಪ್ರಜೆಗಳಾಗಿದ್ದು,

ಭಾರತಕ್ಕೆ ಬಂದು ಇಲ್ಲಿಯೇ ನೆಲೆಸುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಠಿ ಅಕ್ರಮವಾಗಿ ಭಾರತಕ್ಕೆ ನುಸುಳಿ, ಪಶ್ಚಿಮ ಬಂಗಾಳ ರಾಜ್ಯಕ್ಕೆ ಬಂದು, ಕೋಲ್ಕತ್ತ ನಗರದಲ್ಲಿ ನಕಲಿ ಆಧಾರ್ ಕಾರ್ಡ್, ಇತರೆ ದಾಖಲೆಗಳನ್ನು ಮಾಡಿಸಿಕೊಂಡು ಭಾರತದ ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎನ್ನಲಾಗಿದೆ.

ಚಿತ್ರದುರ್ಗ ನಗರದಲ್ಲಿ ಕೆಲಸದ ಉದ್ದೇಶದಿಂದಾಗಿ ಬಂದಿರುವುದಾಗಿ ಪೊಲೀಸ್ ತನಿಖೆ ವೇಳೆ ವಿಷಯ ಲಭ್ಯವಾಗಿದೆ.
6 ಮಂದಿ ಆರೋಪಿಗಳಿಗೆ ಸಂಬಂಧಿಸಿದ ನಕಲಿ ಆಧಾರ್ ಕಾರ್ಡ್‌ಗಳು
, ಮತದಾರರ ಗುರುತಿನ ಚೀಟಿಗಳು, ಲೇಬರ್ ಕಾರ್ಡ್‌ಗಳು, ಬ್ಯಾಂಕ್ ಪಾಸ್ ಬುಕ್‌ಗಳು,

ಪಾನ್ ಕಾರ್ಡ್‌ಗಳು ಹಾಗೂ ಒಂದು ಪಾಸ್‌ಪೋರ್ಟ್‌ನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಳ್ಳಲಾಗಿದೆ. ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾ ದೇಶದ ಪ್ರಜೆಗಳನ್ನು ಪತ್ತೆ ಮಾಡಿದ ಸಿ.ಇ.ಎನ್. ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಎನ್.ವೆಂಕಟೇಶ್, ಜಿಲ್ಲಾ ವಿಶೇಷ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಎನ್.ಗುಡ್ಡಪ್ಪ, ಚಿತ್ರದುರ್ಗ ಕೋಟೆ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ದೊಡ್ಡಣ್ಣ,

ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಮುದ್ದುರಾಜ್ ಹಾಗೂ ಸಿಬ್ಬಂದಿಯವರಾದ ಎಎಸ್‌ಐ ಆರ್.ಈ.ತಿಪ್ಪೇಸ್ವಾಮಿ, ಸಿಹೆಚ್‌ಸಿಗಳಾದ ಆರ್.ಮಧು, ಎನ್.ಕೆಂಚಪ್ಪ, ಸಿದ್ದಲಿಂಗಯ್ಯ ಹಿರೇಮಠ್ ಇವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

 

 

- Advertisement -  - Advertisement - 
Share This Article
error: Content is protected !!
";