ಆಂಧ್ರದ ಡಿಸಿಎಂ ಹಾಗೂ ಅರಣ್ಯ ಸಚಿವ ಪವನ್ ಕಲ್ಯಾಣ್ ಗೆ 6 ಆನೆಗಳ ಹಸ್ತಾಂತರ-ಡಿಕೆಶಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಳೆದ ವರ್ಷ ಆಗಸ್ಟ್ ನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಆನೆ- ಮಾನವ ಸಂಘರ್ಷ ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಆನೆ- ಮಾನವ ಸಂಘರ್ಷ ತಡೆ ಸಂಬಂಧ ಉತ್ತಮ ರೂಢಿಗಳ ವಿನಿಮಯಕ್ಕೆ ನಮ್ಮ ರಾಜ್ಯದ ಜೊತೆಗೆ ಆಂಧ್ರ
, ಕೇರಳ, ತೆಲಂಗಾಣ ಸರ್ಕಾರಗಳು ಒಪ್ಪಂದಕ್ಕೆ ಸಹಿ ಹಾಕಿದ್ದವು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸ್ಮರಿಸಿದ್ದಾರೆ.

- Advertisement - 

ಅದರ ಭಾಗವಾಗಿ, ಆನೆ- ಮಾನವ ಸಂಘರ್ಷ ತಡೆಗೆ ಹಾಗೂ ಪುಂಡಾನೆಗಳ ಸೆರೆ ಕಾರ್ಯಾಚರಣೆಗೆ ಬಳಸಲು ಕುಮ್ಕಿ ಆನೆಗಳನ್ನು ಒದಗಿಸಿ, ಮಾವುತರಿಗೆ ತರಬೇತಿಯನ್ನೂ ನೀಡಲು ಆಂಧ್ರ ಉಪಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವ ಪವನ್ ಕಲ್ಯಾಣ್ ಅವರು ಪತ್ರ ಬರೆದು ನಮ್ಮ ಸರ್ಕಾರಕ್ಕೆ ಕೋರಿದ್ದರು.

- Advertisement - 

ಅದರಂತೆ 6 ಆನೆಗಳನ್ನು ಇಂದು ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೂಡಿ ಪವನ್ ಕಲ್ಯಾಣ್ ಅವರಿಗೆ ಹಸ್ತಾಂತರಿಸಲಾಯಿತು ಎಂದು ಡಿಸಿಎಂ ತಿಳಿಸಿದರು.

ನೆರೆ ರಾಜ್ಯಗಳಲ್ಲಿ ಮಾನವ- ಪ್ರಾಣಿ ಸಂಘರ್ಷ ಕಡಿಮೆಯಾದಲ್ಲಿ ಅದು ನಮ್ಮ ರಾಜ್ಯಕ್ಕೂ ಅನುಕೂಲವಾಗಲಿದೆ. ಅಲ್ಲದೆ, ನೆರೆ ರಾಜ್ಯಗಳಲ್ಲಿ ಈ ನಿಟ್ಟಿನಲ್ಲಿ ಅಳವಡಿಸಿಕೊಂಡಿರುವ ಕ್ರಮಗಳನ್ನು ನಮ್ಮ ರಾಜ್ಯದಲ್ಲೂ ಅಳವಡಿಸಿಕೊಳ್ಳಲು ಇಂಥ ಬಾಂಧವ್ಯ ಕಾರ್ಯಕ್ರಮಗಳು ಅನುಕೂಲವಾಗಲಿದೆ ಎಂದು ಡಿ.ಕೆ ಶಿವಕುಮಾರ್ ಅಭಿಪ್ರಾಯಪಟ್ಟರು.

- Advertisement - 

Share This Article
error: Content is protected !!
";