ಗಣಪತಿ ವಿರ್ಜನೆಗೆ ಡೊಳ್ಳು ವಿವಾದ: ಗಲಾಟೆ, 6 ಜನರಿಗೆ ಗಾಯ

khushihost

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಗಲಾಟೆ ನಡೆದು ಪೊಲೀಸರೇ ವಿಸರ್ಜನೆ ನಡೆಸಿದ ಘಟನೆ ಅರೆಬಿಳಚಿ ಕ್ಯಾಂಪಿನಲ್ಲಿ ನಡೆದಿದೆ.

ಈ ವೇಳೆ ನಡೆದ ಗಲಾಟೆಯಲ್ಲಿ ಪೊಲೀಸರಿಗೂ ಸಣ್ಣಪುಟ್ಟ ಗಾಯವಾಗಿದೆ., ಗಲಾಟೆ ತಾರಕಕ್ಕೆ ಏರಿದ ಪರಿಣಾಮ ಪೊಲೀಸರು ಮಧ್ಯಪ್ರವೇಶಿಸಿ ಗಣಪತಿಯನ್ನ ವಿಸರ್ಜನೆ ಮಾಡಿರುವುದಾಗಿ ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಅರಬಿಳಚಿ ಕ್ಯಾಂಪ್‌ನಲ್ಲಿ ತಮಿಳರ ಮತ್ತು ಬೋವಿ ಕಾಲನಿಯ ಗಣಪತಿಯನ್ನು ಪ್ರತ್ಯೇಕ ಕೂಡ್ರಿಸಲಾಗಿದ್ದು, ವಿಸರ್ಜನೆಗೆ ಒಂದೇ ಡೊಳ್ಳಿನ ತಂಡದವರಿಗೆ ಆಮಂತ್ರಿಸಲಾಗಿತ್ತು.

ತಂಡದವರು ಬಂದಾಗ ತಮ್ಮ ಗಣಪತಿ ವಿಸರ್ಜನೆಗೆ ಬರಬೇಕೆಂದು ಇತ್ತಂಡದವರೂ ಹಠ ಹಿಡಿದಾಗ ಗಲಾಟೆ ನಡೆದಿದೆ‌ . ಡೊಳ್ಳು ಬಾರಿಸುವವರ ಜೊತೆ ವಾಗ್ವಾದ ನಡೆದಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಪೊಲೀಸ್ ಸೇರಿದಂತೆ ಆರು ಮಂದಿಗೆ ಗಾಯವಾಗಿದೆ. ಗಾಯಾಳುಗಳು ಭದ್ರಾವತಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -  - Advertisement - 
Share This Article
error: Content is protected !!
";