ವಿಧಾನಸೌಧದಲ್ಲೇ ಶೇ.60ರಷ್ಟು ಕಮಿಷನ್‌ ವಸೂಲಿ ದಂಧೆ ಎಗ್ಗಿಲ್ಲದೆ ನಡೆದಿದೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
CM 30% + DCM 30% = 60% ಕಾಂಗ್ರೆಸ್‌ ಸರ್ಕಾರ ಎಂದು ಜೆಡಿಎಸ್ ಮತ್ತೆ ಟೀಕಿಸಿದೆ.

ಸರ್ಕಾರಿ ಇಲಾಖೆಗಳಲ್ಲಿ 60% ಕಮಿಷನ್‌ಗೆ “ಕೈ” ಜೋಡಿಸಿದ ಕಾಂಗ್ರೆಸ್‌” ಸರ್ಕಾರ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.

ಕರ್ನಾಟಕದಲ್ಲಿ ದುಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಪರ್ಸಂಟೇಜ್‌ ವ್ಯವಹಾರದ ಮೇಲೆ ಕೆಲಸ ಕಾರ್ಯಗಳು ನಡೆಯುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ.  

ಸಿದ್ದರಾಮಯ್ಯ ಸರ್ಕಾರದ ದುರಾಡಳಿತ ಯಂತ್ರಕ್ಕೆ “ಲಂಚವೇ ಇಂಧನ”ವಾಗಿ ಬಿಟ್ಟಿದೆ. ಭ್ರಷ್ಟ ಮುಖ್ಯಮಂತ್ರಿ, ಭ್ರಷ್ಟ ಸಚಿವರುಗಳು ವಿಧಾನಸೌಧದಲ್ಲೇ “ಲಂಚದ ಕೊಠಡಿ ತೆರೆದಿದ್ದು, ಅಲ್ಲಿಂದಲೇ 60% ಕಮಿಷನ್‌ ವಸೂಲಿ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ.

- Advertisement -  - Advertisement - 
Share This Article
error: Content is protected !!
";