ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಲುಬಿಲ್ಲದ ನಾಲಗೆಯ ಚಲುವನಾರಾಯಣಸ್ವಾಮಿ ಅವರೇ ದಿನ ಬೆಳಗಾದರೇ ಹೊಸ ಹೊಸ ಹಗರಣಗಳಿಂದ ಕಾಂಗ್ರೆಸ್ ಸರಕಾರ ಬೆತ್ತಲಾಗುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ.
ಮಂಡ್ಯ ಜಿಲ್ಲೆಯಲ್ಲಿ ನಡೆದ ಅಬಕಾರಿ ಇಲಾಖೆಯ ಭ್ರಷ್ಟಾಚಾರದಲ್ಲಿ ನಿಮ್ಮ ಪಾಲು ಎಷ್ಟು? ಕೇಂದ್ರ ಸಚಿವರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಭೂಮಿ ಪೂಜೆ ಮಾಡಿ ಚಾಲನೆ ನೀಡಿದ ಮೇಲೂ ತಾವೇಕೆ ಮತ್ತೆ ಗುದ್ದಲಿಪೂಜೆ ಮಾಡಿದ್ದು!? ಇದು ದ್ವೇಷ ರಾಜಕಾರಣವಲ್ಲವೇ? ಎಂದು ಜೆಡಿಎಸ್ ಖಾರವಾಗಿ ಪ್ರಶ್ನಿಸಿದೆ.
ರಾಜ್ಯದಲ್ಲಿ 60% ಕಮಿಷನ್ ಕೊಳ್ಳೆ ಹೊಡೆಯುತ್ತಿರುವುದರಿಂದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ವಿಚಾರವನ್ನು ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ. ಕೇಂದ್ರ ಸಚಿವರು ಕೇಳಿದರೆ ಚಲುವರಾಯಸ್ವಾಮಿ ಅವರಿಗೇಕೆ ನೋವು? ಎಂದು ಜೆಡಿಎಸ್ ಪ್ರಶ್ನಿಸಿದೆ.
ಕರ್ನಾಟಕ ಕಾಂಗ್ರೆಸ್ ಸರಕಾರದ ದುರಾಡಳಿತ ಮತ್ತು ಕಾಂಗ್ರೆಸ್ಸಿಗರ ಅಕ್ರಮಗಳು ದಿನ ಮಾಧ್ಯಮಗಳಲ್ಲಿ ಹೊರಬರುತ್ತಲೇ ಇವೆ. ಇದರ ಬಗ್ಗೆ ನಿಮಗೆ ಸಂಕಟವೇ?
ಬಸ್ ಪ್ರಯಾಣ ದರ ಏರಿಕೆ ಬಗ್ಗೆ ಪ್ರಶ್ನಿಸಿದರೆ ಮಟನ್ ರೇಟ್‌ಗೆ ಹೋಲಿಕೆ ಮಾಡುವ ಅಜ್ಞಾನಿ ಮಂತ್ರಿ ನೀವು! ಬೆಲೆ ಏರಿಕೆ ನಿಮಗೆ ಖುಷಿ ತರುವ ವಿಷಯವೇ? ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಸರಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು ಮತ್ತು ನವಜಾತ ಶಿಶುಗಳನ್ನು ಬಲಿ ಪಡೆಯುತ್ತಿರುವ ನಿಮ್ಮ ಸರಕಾರದ ಬೇಜವಾಬ್ದಾರಿಗೆ ದುಃಖ ಆಗುತ್ತಿಲ್ಲವಾ?
ಅಧಿಕಾರಕ್ಕೆ ಬಂದಾಗಿನಿಂದಲೂ ಸದಾ ದ್ವೇಷ ರಾಜಕಾರಣ ಮಾಡುವುದರ ಜೊತೆಗೆ ಅಕ್ರಮಗಳನ್ನು ಬೆಂಬಲಿಸುತ್ತಿರುವ ನಿಮಗೆ ಪ್ರಶ್ನೆ ಮಾಡಿದರೇ ನಿಮಗೆ ಯಾಕೆ ಹೊಟ್ಟೆ ಉರಿ? ಎಂದು ಜೆಡಿಎಸ್ ಖಾರವಾಗಿ ಪ್ರಶ್ನಿಸಿದೆ.