ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
60% ಕಮಿಷನ್‌ಕರ್ನಾಟಕ ಕಾಂಗ್ರೆಸ್ ಸರ್ಕಾರದ ಹಣ ವಸೂಲಿ ದಂಧೆ ಈಗ ರಾಜ್ಯದ ವಿಶ್ವವಿದ್ಯಾಲಯಗಳಿಗೂ ವ್ಯಾಪಿಸಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.
ಹುದ್ದೆಗಳ ಮಾರಾಟಕ್ಕೆ ರೇಟ್‌ಕಾರ್ಡ್‌ಫಿಕ್ಸ್‌ಮಾಡಿ ದೋಚುತ್ತಿರುವ ಸಿದ್ದರಾಮಯ್ಯ ಸರ್ಕಾರ ಒಂದು ಕಡೆಯಾದರೇ, ದುಡ್ಡು ಕೊಟ್ಟು ಹುದ್ದೆ ಪಡೆದಿರುವ ಭ್ರಷ್ಟ ಅಧಿಕಾರಿಗಳು ರಾಜಾರೋಷವಾಗಿ ವಸೂಲಿಗೆ ಇಳಿದಿದ್ದಾರೆ ಎಂದು ಜೆಡಿಎಸ್ ಆರೋಪ ಮಾಡಿದೆ.
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿಯ ಕುಲಸಚಿವ ಕೆಬಿ ಪ್ರವೀಣ್ ಅವರು, ವಿವಿಯಲ್ಲಿ ಅಕ್ರಮ ನೇಮಕಾತಿ, ವರ್ಗಾವಣೆ ಸೇರಿದಂತೆ ಎಲ್ಲದಕ್ಕೂ ಹಣ ಪಡೆಯುತ್ತಿದ್ದಾರೆ.
ಕುಲಸಚಿವರ ಧನದಾಹಕ್ಕೆ ಆಕ್ರೋಶಗೊಂಡಿರುವ ವಿವಿ ಸಿಬ್ಬಂದಿ ಕುಲಸಚಿವರ ಕೊಠಡಿಗೆ “ನೋಟಿನ ಹಾರ” ಹಾಕಿ ಪ್ರತಿಭಟನೆ ನಡೆಸಿರುವುದು ರಾಜ್ಯದಲ್ಲಿ ಭ್ರಷ್ಟಾಚಾರ ಎಲ್ಲೆ ಮೀರಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.