ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಸೋಮವಾರ ನಡೆದ ಹುಂಡಿ ಎಣಿಕೆಕಾರ್ಯ ಮುಕ್ತಾಯವಾಗಿದ್ದು ಹುಂಡಿಯ ಒಟ್ಟು ಸಂಗ್ರಹ ಮೊತ್ತ 62,63,030 ರೂಪಾಯಿಗಳು ಎಂದು ದೇವಾಲಯದ ಮೂಲಗಳು ತಿಳಿಸಿವೆ.
79,500 ರೂಪಾಯಿ ಮೌಲ್ಯದ 1ಕೆಜಿ 370 ಗ್ರಾಂ ಬೆಳ್ಳಿ, ಮತ್ತು 16800ರೂಪಾಯಿ ಮೌಲ್ಯದ 02ಗ್ರಾಂ ಬಂಗಾರ ವನ್ನು ಭಕ್ತಾದಿಗಳು ದೇವರಿಗೆ ಸಮರ್ಪಿಸುವ ಮೂಲಕ ಹರಕೆ ತೀರಿಸಿದ್ದಾರೆ.
ಹುಂಡಿ ಎಣಿಕೆ ಕಾರ್ಯದಲ್ಲಿ ದೇವಾಲಯದ ಕಾರ್ಯದರ್ಶಿ ಮತ್ತು ಉಪ ಆಯುಕ್ತರು ಪಿ .ದಿನೇಶ್ ರವರು ಉಪ ಕಾರ್ಯದರ್ಶಿ ಎಂ. ನಾರಾಯಣಸ್ವಾಮಿ ಮುಜರಾಯಿ ಇಲಾಖೆ ತಹಶೀಲ್ದಾರ್ ಜಿ .ಜೆ .ಹೇಮ ವತಿ ರವರು ಪ್ರಧಾನ ಅರ್ಚಕರು ಶ್ರೀನಿಧಿ ದೇವಾಲಯದ ನಂಜಪ್ಪ,
ದೇವಾಲಯದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಜೆ.ಎನ್ ರಂಗಪ್ಪ ಎಸ್ .ರವಿ ಲಕ್ಷ್ಮನಾಯಕ್ ಆರ್ .ವಿ .ಮಹೇಶ್ ಕುಮಾರ್ ಶ್ರೀಮತಿ ಹೇಮಲತಾ ರಮೇಶ್ ಪೋಲಿಸ್ ಇಲಾಖೆ ಸಿಬ್ಬಂದಿ ದೇವಾಲಯದ ಸಿಬ್ಬಂದಿ ಕೆನರಾ ಬ್ಯಾಂಕ್ ಸಿಬ್ಬಂದಿ ಹಾಜರಿದ್ದು. ದೇವಾಲಯಕ್ಕೆ ಬಂದ ಭಕ್ತಾದಿಗಳು ಸಮ್ಮುಖದಲ್ಲಿ ಹುಂಡಿ ಎಣಿಕೆ ಮಾಡಲಾಯಿತು.

