ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದ ಆವರಣದಲ್ಲಿ ಮಾಜಿ ಶಾಸಕರು ಹಾಗೂ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಹೆಚ್ಎಂ ರಮೇಶ್ ಗೌಡರವರ ಅಧ್ಯಕ್ಷತೆಯಲ್ಲಿ ಜರುಗಿದ 77ನೇ ಗಣರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾದ ಎಂ ಕೃಷ್ಣಾರೆಡ್ಡಿ ರವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರುಗಳಾದ ಬಂಡೆಪ್ಪ ಕಾಶಂಪುರ್, ಲೀಲಾದೇವಿ ಆರ್ ಪ್ರಸಾದ್, ಶಾಸಕರುಗಳಾದ ಟಿ ಎನ್ ಜವರಾಯಿಗೌಡ, ಟಿಎ ಶರವಣ, ಮಾಜಿ ಶಾಸಕ ಎಂ ಎಸ್ ನಾರಾಯಣರಾವ್, ಮುಖಂಡರಾದ ಟಿ ಪ್ರಭಾಕರ್, ಪಕ್ಷದ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಾ ಸಂತೋಜಿ ರಾವ್,
ರಾಜ್ಯ ಸೇವಾದಳ ವಿಭಾಗದ ಅಧ್ಯಕ್ಷ ಬಸವರಾಜ ಪಾದಯಾತ್ರಿ, ಬೆಂಗಳೂರು ನಗರ ಸೇವಾದಳ ಅಧ್ಯಕ್ಷ ಪಿ. ಮಹೇಶ್, ಮುಖಂಡರುಗಳಾದ ಕೆ ವಿ ನಾರಾಯಣ ಸ್ವಾಮಿ, ಎಸ್ ರಮೇಶ್, ಲಕ್ಷ್ಮೀನಾರಾಯಣ್ ಸೇರಿದಂತೆ ಹಲವು ಮುಖಂಡರು, ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು, ವಿವಿಧ ವಿಭಾಗಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

