8ನೇ ತರಗತಿ ವಿದ್ಯಾರ್ಥಿ ಕರಣ್ ಸಾಗರ್ ಕಣ್ಮರೆ, ಪತ್ತೆಗೆ ಮನವಿ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕರಣ್ ಸಾಗರ್ ತಂದೆ ಚಿದಾನಂದಪ್ಪ ಎಲ್, 14 ವರ್ಷ, 8ನೇ ತರಗತಿ ವಿದ್ಯಾರ್ಥಿ, ವಿಳಾಸ :ಅವಧಾನಿ ನಗರ ಹಿರಿಯೂರು ಟೌನ್, ಸ್ವಂತ ಊರು : ಚಿಲ್ಲಹಳ್ಳಿ ಗ್ರಾಮ, ಹಿರಿಯೂರು ತಾಲೂಕ್, ಈ ಬಾಲಕನು ಈ ದಿನ ದಿನಾಂಕ –21/04/2025 ರಂದು ಬೆಳಿಗ್ಗೆ 10 ಗಂಟೆಗೆ ಹಿರಿಯೂರು ಟೌನ್ ಅವಧಾನಿ ನಗರದ ತಮ್ಮ ಮನೆಯಿಂದ ಹೊರಗೆ ಹೋದವನು ವಾಪಸ್ಸು ಬಂದಿರುವುದಿಲ್ಲ.

 ಬಾಲಕ ಕನ್ನಡ ಇಂಗ್ಲಿಷ್ ಭಾಷೆ ಮಾತನಾಡುತ್ತಾನೆ. ದುಂಡುಮುಖ, ಗೋಧಿ ಮೈಬಣ್ಣ ಹೊಂದಿದ್ದು ಮನೆಯಿಂದ ಹೋಗುವ ಸಮಯದಲ್ಲಿ brown ಕಲರ್ ಟೀ ಶರ್ಟ್, ಪಾಚಿ ಕಲರ್ ನೈಟ್ ಪ್ಯಾಂಟ್ ಧರಿಸಿರುತ್ತಾನೆ.

ಬಾಲಕನ ಬಗ್ಗೆ ಮಾಹಿತಿ ಗೊತ್ತಾದಲ್ಲಿ ಬಾಲಕನ ತಂದೆ (ಪೋಷಕ): ಚಿದಾನಂದಪ್ಪ ರವರ 9880224852ನೇ ಮೊಬೈಲ್ ನಂಬರ್ ಗೆ ಮತ್ತು ಹಿರಿಯೂರು ನಗರ ಪೊಲೀಸ್ ಠಾಣೆಯ ಪಿಎಸ್ಐ ರವರ 9480803177 ನೇ ಮೊಬೈಲ್ ನಂಬರ್ ಗೆ ಕರೆ ಮಾಡಿ ತಿಳಿಸಲು ಮನವಿ ಮಾಡಿದ್ದಾರೆ.

 

 

Share This Article
error: Content is protected !!
";