ಜಗತ್ತಿನ 8ನೇ ವಿಸ್ಮಯ ಎತ್ತಿನಹೊಳೆ ಯೋಜನೆ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು :
ತಾಂತ್ರಿಕತೆಯ ಅಭಿವೃದ್ಧಿ ವಿಷಯದಲ್ಲಿ ಈ ಸುದ್ದಿ ಮಹತ್ವದಾಗಿದೆ. ಎತ್ತಿನಹೊಳೆ ಯೋಜನೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಎತ್ತಿನಹೊಳೆ ಯೋಜನೆಯ ಪಕ್ಷಿನೋಟ ವಿಶ್ವದ ಗಮನ ಸೆಳೆಯುತ್ತಿದೆ.
ಎತ್ತಿನಹೊಳೆ ನೀರು ಹರಿಸಲು ನಿರ್ಮಿಸಲಾದ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿರುವ ಸೇತುವೆ ಪ್ರಶಂಸೆಗೆ ಪಾತ್ರವಾಗಿದೆ.

 ಈ ಯೋಜನೆ ಕೋಟ್ಯಂತರ ಜನರ ದಶಕಗಳ ಕನಸಿನ ಪ್ರತಿರೂಪವಾಗಿದೆ . ಬರದ ನೆಲದ ದಾಹ ತಣಿಸಲು ಆಕಾಶದಲ್ಲಿ ನಿರ್ಮಿಸಿದ ಒಂದು ಮಹಾನದಿ. ಕೈಗಾರೀಕರಣ, ನಗರೀಕರಣ ಮತ್ತು ಜನಸಂಖ್ಯೆಯ ನಿರಂತರ ಒತ್ತಡದಿಂದಾಗಿ ಜಲ ಸಂಪನ್ಮೂಲದ ನಿರ್ವಹಣೆ ಅತಿ ದೊಡ್ಡ ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಎತ್ತಿನ ಹೊಳೆ ಎಂಬ ಮಹಾ ಯೋಜನೆ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನೇ ಬರೆದಿದೆ.

- Advertisement - 

ಈ ಯೋಜನೆ ನಿರ್ಮಿಸಲಾಗಿರುವ ಕಾಲುವೆಯ ಎತ್ತರ, ಉದ್ದ, ತಾಂತ್ರಿಕತೆಯ ಕೌಶಲ್ಯದ ವೈಶಿಷ್ಟ್ಯ ಬಹಳಷ್ಟು ಅದ್ಭುತವಾಗಿದೆ. ಈ ಯೋಜನೆಯ ಕಾಮಗಾರಿ ವಿಶ್ವದ ಗಮನ ಸೆಳೆಯುತ್ತಿದೆ.

ಈ ಯೋಜನೆಯಿಂದ ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗಳ ರೈತರ ಬದುಕಿಗೆ ಆಸರೆಯಾಗಲಿದೆ.

- Advertisement - 

ಈ ಯೋಜನೆಯ ಕಾಮಗಾರಿ ಗುಬ್ಬಿ ತಾಲೂಕಿನಲ್ಲಿ ವಿಶ್ವದಲ್ಲಿಯೇ ಅತಿ ಎತ್ತರದ ಹಾಗೂ 11 ಕಿಲೋಮೀಟರ್ ಉದ್ದನೆಯ ಸೇತುವೆಯ ಕಾಲುವೆಯ ಮೂಲಕ ನೀರು ಹರಿಯುತ್ತದೆ. ಈ ಕಾಲುವೆ ಪಕ್ಕದಲ್ಲಿ ವಾಹನಗಳು ಸಂಚರಿಸಬಹುದು. ತಾಂತ್ರಿಕತೆಯ ಅಭಿವೃದ್ಧಿ ಹಾಗೂ ಪ್ರಕೃತಿಯ ವಿಸ್ಮಯ ಈ  ಸೂಕ್ಷ್ಮತೆಯ ವಿಚಾರದ ಜ್ಞಾನವನ್ನು ಹಾಗೂ ಪ್ರಕೃತಿಯ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಉತ್ತಮ ಪ್ರವಾಸಿ ತಾಣವಾಗವ ಸಾಧ್ಯತೆ ಇದೆ.

ತುಮಕೂರು ಜಿಲ್ಲೆಯಲ್ಲಿ ವಿಶ್ವದ ಮೆಚ್ಚುಗೆಗೆ ಪಾತ್ರವಾಗಿರುವ ಮಾನವ ನಿರ್ಮಿತ   2  ವಿಸ್ಮಯಗಳ ಅದ್ಭುತ ಕೊಡುಗೆ ಕಂಡುಬಂದಿದೆ. ಪಾವಗಡ ತಾಲ್ಲೂಕಿನ ಸೋಲಾರ್ ಪಾರ್ಕ್ ನಿರ್ಮಾಣ. ಗುಬ್ಬಿ ತಾಲೂಕಿನಲ್ಲಿ ನಿರ್ಮಿಸಿರುವ ಜಗತ್ತಿನ ಅತಿ ಎತ್ತರದ ಹಾಗೂ ಉದ್ದವಾದ ಎತ್ತಿನಹೊಳೆ ಯೋಜನೆಯ ನೀರು ಹರಿಸುವ ಕಾಲುವೆ ನಿರ್ಮಾಣ.

ಈ 2 ಯೋಜನೆಯನ್ನು ಜಲಸಂಪನ್ಮೂಲ ಇಲಾಖೆ ಸಚಿವರು ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಕಾರ್ಯವ್ಯಾಪ್ತಿಯಲ್ಲಿ ಪೂರೈಸಿರುವ ತಾಂತ್ರಿಕತೆ ಮೆಚ್ಚುವಂಥದ್ದು ಎಂದು ರಘು ಗೌಡ ತಿಳಿಸಿದ್ದಾರೆ.

Share This Article
error: Content is protected !!
";