ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ಒಕ್ಕಲಿಗರ ಸಂಘದ ನೂತನ ಸಮುದಾಯದ ಭವನದಲ್ಲಿ ಭಾನುವಾರ ಜಿಲ್ಲಾ ಒಕ್ಕಲಿಗ ಸಂಘದ ಕಾರ್ಯಕಾರಿ ಸಮಿತಿಯ ಸಭೆಯ ಆಯೋಜನೆ ಮಾಡಲಾಗಿತ್ತು.
ಕಾರ್ಯಕಾರಿ ಸಭೆಯ ನಂತರ ರಾಜ್ಯ ಒಕ್ಕಲಿಗರ ಸಂಘದ 2026ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬೇತೂರು ಪಾಳ್ಯ ಡಾ.ಜೆ.ರಾಜು, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಚೇತನ್ ಬಾಬು, ಮಾಜಿ ಅಧ್ಯಕ್ಷ ಹನುಮಂತಪ್ಪ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಜಿಲ್ಲಾ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ, ವಕೀಲ ಜಗನ್ನಾಥ್, ಹಿರಿಯ ಮುಖಂಡ ಕೆ.ಟಿ ರುದ್ರಮುನಿ, ಓಂಕಾರಪ್ಪ, ಹನುಮಂತರಾಯ, ಶಿವಣ್ಣ, ಚಿದಾನಂದಪ್ಪ, ಲೋಕಮಾತೆ, ಏಕಾಂತಪ್ಪ, ಜಗದೀಶ್, ಪರಮೇಶ್ವರ್, ಚೇತನ ಬಾಬು, ಭೈರೇಶ್ ಪಟೇಲ್, ರಘುಗೌಡ, ಸೇರಿದಂತೆ ಜಿಲ್ಲಾ ಒಕ್ಕಲಿಗ ನಿರ್ದೇಶಕರು, ಸಮಾಜದ ಮುಖಂಡರು ಹಾಗೂ ಮಹಿಳಾ ಮುಖಂಡರು ಭಾಗವಹಿಸಿದ್ದರು.

