ತೆನೆಹೊತ್ತ ಮಹಿಳೆಯ ಜೆಡಿಎಸ್ ಚಿಹ್ನೆಗೆ ಶೀಘ್ರ ಚಕ್ರ ಸೇರಿಸಿ ಹೊಸರೂಪ?

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತೆನೆಹೊತ್ತ ಮಹಿಳೆಯ ಜೆಡಿಎಸ್ ಚಿಹ್ನೆಗೆ‌ಚಕ್ರ ಸೇರಿಸಲು ಜೆಡಿಎಸ್ ಕೋರ್ ಸಮಿತಿ ಸಭೆಯಲ್ಲಿ ನಾಯಕರೆಲ್ಲರೂ ಒಮ್ಮತದಿಂದ ತೀರ್ಮಾನಿಸಿದ್ದಾರೆ.
ಈ ತೀರ್ಮಾನದಿಂದಾಗಿ ತೆನೆ ಹೊತ್ತ ಮಹಿಳೆಯ ಚಿಹ್ನೆಗೆ ಶೀಘ್ರದಲ್ಲೇ ಚಕ್ರ ಸೇರ್ಪಡೆ ಮಾಡಲಾಗುತ್ತದೆ. ಅಲ್ಲದೆ ಮುಂಬರುವ ಎಲ್ಲ ಚುನಾವಣೆಗಳಲ್ಲೂ ತೆನೆಹೊತ್ತ ಮಹಿಳೆಯ ಜೊತೆ ಚಕ್ರ ಇರಲಿದೆ.‌

ಅಧಿಕೃತ ಚಿಹ್ನೆ-
ಕಳೆದ  
2001ರಿಂದ ಅಧಿಕೃತವಾಗಿ ತೆನೆ ಹೊತ್ತ ಮಹಿಳೆ ಜನತಾದಳ (ಜಾತ್ಯತೀತ) ಪಕ್ಷದ ಚುನಾವಣಾ ಚಿಹ್ನೆಯೊಂದಿಗೆ ಕಣಕ್ಕಿಳಿಯುತ್ತಿದೆ.

- Advertisement - 

 ಆದರೆ, ಜೆಡಿಎಸ್ ಪಕ್ಷವು ಈ ಚಿಹ್ನೆಗೆ ಹೊಸ ರೂಪ ನೀಡಲು ತೀರ್ಮಾನಿಸಿದೆ. ಸದ್ಯ ಜೆಡಿಎಸ್ ಪಕ್ಷ ಚುನಾವಣೆ ಸೋಲುಗಳೊಂದಿಗೆ ಸಂಕಷ್ಟ ಸ್ಥಿತಿ ಅನುಭವಿಸುತ್ತಿದೆ. ಈಗಾಗಲೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಇದೀಗ ಚುನಾವಣಾ ಅದೃಷ್ಟ ಬದಲಾಯಿಸಲು ಕಸರತ್ತು ನಡೆಸುತ್ತಿದೆ.

ಚುನಾವಣಾ ಆಯೋಗಕ್ಕೆ ಪ್ರಸ್ತಾಪ ಸಲ್ಲಿಕೆ:
ಕೋರ್ ಕಮಿಟಿಯಲ್ಲಿ ತೀರ್ಮಾನಿಸಿರುವಂತೆ ಜೆಡಿಎಸ್ ಚುನಾವಣಾ ಆಯೋಗಕ್ಕೆ ಚಿಹ್ನೆ ಬದಲಾವಣೆಗೆ ಪ್ರಸ್ತಾಪ ಸಲ್ಲಿಸಲು ನಿರ್ಧರಿಸಿದೆ. ಚಕ್ರ ಸೇರ್ಪಡೆಯಿಂದ ಪಕ್ಷಕ್ಕೆ ಸಕಾರಾತ್ಮಕ ಚೈತನ್ಯ ಸಿಗುತ್ತೆ ಎಂಬ ನಂಬಿಕೆ ಹೆಚ್.ಡಿ.ದೇವೇಗೌಡರದ್ದಾಗಿದೆ.

- Advertisement - 

 ಈ ಹಿಂದೆ ಜನತಾದಳ ಪಕ್ಷ ಚಕ್ರದ ಗುರುತು ಹೊಂದಿತ್ತು.‌ಈಗ ಅದೇ ಚಕ್ರದ ಚಿಹ್ನೆಯನ್ನು ತೆನೆ ಹೊತ್ತ ಮಹಿಳೆಯ ಜೊತೆ ಜೋಡಿಸಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ.

ಕೋರ್ ಕಮಿಟಿ ಸಭೆಯಲ್ಲಿ ದೇವೇಗೌಡರ ಸಲಹೆಯಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಚುನಾವಣಾ ಆಯೋಗಕ್ಕೆ ಶೀಘ್ರ ಅರ್ಜಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಚುನಾವಣಾ ಆಯೋಗದಿಂದ ಚಿಹ್ನೆ ಬದಲಾವಣೆಗೆ ಅನುಮತಿ ಸಿಕ್ಕರೆ ಸ್ಥಳೀಯ ಸಂಸ್ಥೆ ಚುನಾವಣೆ,‌ಬಿಬಿಎಂಪಿ‌ಚುನಾವಣೆಗೆ ರೂಪಾಂತರಗೊಂಡ ಹೊಸ ಚಿಹ್ನೆಯೊಂದಿಗೆ ಚುನಾವಣೆ ಎದುರಿಸಲು ವರಿಷ್ಠರು ತೀರ್ಮಾನಿಸಿದ್ದಾರೆ.

ಅದೃಷ್ಟದ ಲೆಕ್ಕಾಚಾರ:
ತೆನೆಹೊತ್ತ ಮಹಿಳೆಯೊಂದಿಗೆ ಚಕ್ರ ಸೇರ್ಪಡೆ ಮಾಡಿ ಹೊಸ ಚಿಹ್ನೆ ಬದಲಾವಣೆ ಮಾಡುವುದರಿಂದೆ ಭಾವನಾತ್ಮಕ ಲೆಕ್ಕಾಚಾರಗಳಿವೆ. ತೆನೆ ಹೊತ್ತ ಮಹಿಳೆ ಚಿಹ್ನೆಯ ಹಿಂದೆ ಚಕ್ರ ಸೇರಿಸುವುದರಿಂದ ಚಲನೆ ಕಾಣುತ್ತದೆ. ಇದು ಪಕ್ಷಕ್ಕೆ ಸಕಾರಾತ್ಮಕ ಶಕ್ತಿ ಕೊಡುತ್ತದೆ. ಪಕ್ಷದ ಚಿಹ್ನೆಯ ಜೊತೆ ಪೂರ್ಣ ವೃತ್ತ ಹಾಕುವುದರಿಂದ ಪಕ್ಷಕ್ಕೆ ಅಭ್ಯುದಯ
, ಶ್ರೇಯಸ್ಸು ಎಂದು ವಾಸ್ತುಶಾಸ್ತ್ರದ ಅಭಿಮತ ಆಗಿದೆ ಎನ್ನಲಾಗಿದೆ.

ಸಂಕ್ರಾತಿ ಪಥ ಬದಲು ಜೆಡಿಎಸ್​​ನಲ್ಲೂ ಬದಲಾವಣೆ ಕಾಣಲಿದೆ ಎಂಬುದು ದೇವೇಗೌಡರ ನಂಬಿಕೆಯಾಗಿದೆ. ಈ ಸಂಬಂಧ ದೇವೇಗೌಡರ ಅದೃಷ್ಟದ ಲೆಕ್ಕಾಚಾರವೂ ಹೊಂದಲಾಗಿದೆ. ದೇವೇಗೌಡರು ಯಾವುದೇ ತೀರ್ಮಾನ ಕೈಗೊಂಡರು ಜ್ಯೋತಿಷಿಗಳ ಸಲಹೆಯಂತೆ ಮುನ್ನಡೆಯುತ್ತಾರೆ‌.

ಈ ಚಿಹ್ನೆ ಬದಲಾವಣೆಯಲ್ಲೂ ಜ್ಯೋತಿಷಿಗಳ ಸಲಹೆ ಪ್ರಮುಖ ಪಾತ್ರ ವಹಿಸಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಇದೀಗ 24 ವರ್ಷದ ಬಳಿಕ ಜೆಡಿಎಸ್ ಪಕ್ಷ ಮತ್ತೊಮ್ಮೆ ಚಿಹ್ನೆಯಲ್ಲಿ ಬದಲಾವಣೆ ತರಲು ತೀರ್ಮಾನಿಸಿದೆ. 2026ರಲ್ಲಿ ಈಗ ತೆನೆ ಹೊತ್ತ ರೈತ ಮಹಿಳೆಯ ಜೊತೆಗೆ ಚಕ್ರ ಸೇರಿಸಲು ತೀರ್ಮಾನಿಸಲಾಗಿದೆ.

ಜಿಪಂ, ತಾಪಂ ಚುನಾವಣೆ:
ಚಿಹ್ನೆ ಬದಲಾವಣೆಯಿಂದ ಜೆಡಿಎಸ್ ಪಕ್ಷಕ್ಕೆ ಚುನಾವಣೆಯಲ್ಲಿ ಅದೃಷ್ಟ ಖುಲಾಯಿಸುತ್ತೆ ಎಂಬುದು ದೇವೇಗೌಡ ಕುಟುಂಬದ ಬಲವಾದ ನಂಬಿಕೆ. ಪರಿಷ್ಕೃತ ಚುನಾವಣಾ ಚಿಹ್ನೆಗೆ ಕೇಂದ್ರ ಚುನಾವಣಾ ಆಯೋಗದಿಂದ ಅನುಮತಿ ಸಿಕ್ಕರೆ
, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಹೊಸ ಚಿಹ್ನೆಯೊಂದಿಗೆ ಅಖಾಡಕ್ಕಿಳಿಯಲಿದೆ.

ಚುನಾವಣಾ ಚಿಹ್ನೆಗೆ ಅಷ್ಟು ಬೇಗ ಅನುಮತಿ ಸಿಗದೇ ಇದ್ದರೆ, ಮುಂದಿನ 2028ರ ವಿಧಾನಸಭಾ ಚುನಾವಣೆಗೆ ಹೊಸ ಚಿಹ್ನೆ ಪಡೆದು ಸ್ಪರ್ಧಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಪಕ್ಷವನ್ನು ಮತ್ತೆ ಬಲಪಡಿಸಲು ದೇವೇಗೌಡರು ಪಣ ತೊಟ್ಟಿದ್ದು, ಪಕ್ಷ ಸಂಘಟನೆ, ಪುನರಚನೆ ಬಳಿಕ ಇದೀಗ ಚಿಹ್ನೆಗೆ ಹೊಸ ರೂಪ ನೀಡಲು ಮುಂದಾಗಿದ್ದಾರೆ. ಆ ಮೂಲಕ ಚುನಾವಣಾ ಅದೃಷ್ಟದ ನಿರೀಕ್ಷೆಯಲ್ಲಿದ್ದಾರೆ.

 

 

Share This Article
error: Content is protected !!
";