ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕಲಾಲಯ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡ್ಯಾನ್ಸ್ ಸಂಸ್ಥೆ ವತಿಯಿಂದ 2025ರ ಅಕ್ಟೋಬರ್ 22ರಂದು 1 ನಿಮಿಷ 24 ಗಂಟೆಗಳ ಮ್ಯಾರಥಾನ್ ಸ್ಪರ್ಧೆಯನ್ನು ಆಯೋಜಿಸಿತು. ಈ ಸ್ಪರ್ಧೆಯಲ್ಲಿ ಶ್ರೀ ಚೈತನ್ಯ ರಾಮಕೃಷ್ಣ ಫೌಂಡೇಶನ್ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಹಲವು ಕ್ಷೇತ್ರಗಳಲ್ಲಿ ಪದಕ ಮತ್ತು ಪ್ರಮಾಣಪತ್ರಗಳನ್ನು ಪಡೆದು ಗಮನ ಸೆಳೆದರು.
ಟೆಕ್ವಾಂಡೋ ವಿಭಾಗದಲ್ಲಿ ಅರ್ಜುನ್, ಸ್ಮೃತಿ, ಸಂಸ್ಕ್ರಿತ್, ಪುನರ್ವಿ, ಮೋಕ್ಷಿತ್, ಅವಂತಿಕಾ ಮತ್ತು ಕೃತಿ ತಮ್ಮ ಶ್ರೇಷ್ಠ ಪ್ರತಿಭೆಯನ್ನು ಪ್ರದರ್ಶಿಸಿ ಪ್ರಶಂಸೆಗೆ ಪಾತ್ರರಾದರು. ಕಥಾ ವಾಚನ ವಿಭಾಗದಲ್ಲಿ ನಿಖಿಲ್ ವಾಚನ ಗಮನ ಸೆಳೆದರು. ಅಭಿನಯ ವಿಭಾಗದಲ್ಲಿ ಡಾ. ಚೈತನ್ಯ ತಮ್ಮ ಅದ್ಭುತ ಕಲಾ ಸಾಮರ್ಥ್ಯದಿಂದ ಎಲ್ಲರ ಮನಸೂರೆಗೊಂಡಿದ್ದು ವಿಶೇಷವಾಗಿತ್ತು.
ಶ್ರೀ ಚೈತನ್ಯ ರಾಮಕೃಷ್ಣ ಫೌಂಡೇಷನ್ ವಿದ್ಯಾರ್ಥಿಗಳ ಈ ಸಾಧನೆ ಸಂಸ್ಥೆಯ ಹೆಮ್ಮೆ ವೃದ್ಧಿಸಿದ್ದು, ಅವರ ಮುಂದಿನ ಪ್ರಯಾಣಕ್ಕೆ ಸ್ಪೂರ್ತಿ ನೀಡುವಂತಾಗಿದೆ.

