ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೋರಮಂಗಲದ ನಾಗರೀಕ ಕ್ಷೇಮಾಭಿವೃದ್ಧಿ ಸಂಘಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ “ಸಂಕ್ರಾಂತಿ ಸುಗ್ಗಿ 2026 – ಕಬ್ಬು ಎಳ್ಳು ಬೆಲ್ಲ – ಅವರೇ ಬೇಳೆ ಮೇಳ” ದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ “ಮಿಲೆಟ್ ವಾಕಾಥಾನ್” (ಸಿರಿಧಾನ್ಯ ನಡಿಗೆ) ಗೆ ಚಾಲನೆ ನೀಡಿ, ಸಾರ್ವಜನಿಕರೊಂದಿಗೆ ಹೆಜ್ಜೆ ಹಾಕಿದೆ ಎಂದು ಸಾರಿಗೆ ಸಚಿವ ಆರ್.ರಾಮಲಿಂಗಾರೆಡ್ಡಿ ತಿಳಿಸಿದರು.
ನಮ್ಮ ಆರೋಗ್ಯ ವೃದ್ಧಿಸುವಲ್ಲಿ ಸಿರಿಧಾನ್ಯಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ಮೇಳದಲ್ಲಿ ರೈತರು ನೇರವಾಗಿ ಮಾರಾಟ ಮಾಡುತ್ತಿದ್ದ ಕಬ್ಬು, ಎಳ್ಳು-ಬೆಲ್ಲ ಹಾಗೂ ಮಹಿಳಾ ಉದ್ಯಮಿಗಳ ಮಳಿಗೆಗಳನ್ನು ವೀಕ್ಷಿಸಿದೆ.
ಅವರೇ ಬೇಳೆಯ ಘಮಲು ಮತ್ತು ಇಲ್ಲಿನ ಸಂಭ್ರಮದ ವಾತಾವರಣ ಮುಂಬರುವ ಸಂಕ್ರಾಂತಿ ಹಬ್ಬಕ್ಕೆ ಮೆರುಗು ತಂದಿದೆ.
ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಆಯೋಜಕರಿಗೆ ಹಾಗೂ ಉತ್ಸಾಹದಿಂದ ಭಾಗವಹಿಸಿದ ಸಮಸ್ತ ನಾಗರೀಕರಿಗೆ ಧನ್ಯವಾದಗಳು.
ಅನೇಕ ಸ್ಥಳೀಯ ಮುಖಂಡರು ಮತ್ತು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

