ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರಸಭೆಯ ಸಭಾಂಗಣದಲ್ಲಿ ಹಂದಿ ಹಾವಳಿ ತಡೆಗೆ ಮಹತ್ವದ ಸಭೆ ನಡೆಸಿ ಹಂದಿ ಮಾಲೀಕರಿಗೆ ಸೂಕ್ತ ಎಚ್ಚರಿಕೆ ನೀಡಲಾಯಿತು ಎಂದು ಪೌರಾಯುಕ್ತ ಎ ವಾಸೀಂ ತಿಳಿಸಿದರು.
ನಗರ ವ್ಯಾಪ್ತಿಯಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು ಈಗಾಗಲೇ ಹಲವು ಬಾರಿ ನಗರಸಭೆ ಸಭಾಂಗಣದಲ್ಲಿ ಸಭೆ ನಡೆಸಿ ಎಚ್ಚರಿಕೆ ನೀಡಲಾಗಿತ್ತು.
ಸಹ ಎಚ್ಚೆತ್ತುಕೊಳ್ಳದೆ ಇರುವ ಕಾರಣ ಜನವರಿ 7 ರಂದು ನಗರ ವ್ಯಾಪ್ತಿಯ ವಾರ್ಡ್ ನಂ:02ರ ಅಂಜನೇಯ ದೇವಸ್ಥಾನದ ಹತ್ತಿರ ಹಂದಿಗಳು ಸಂಚಾರಕ್ಕೆ ಅಡ್ಡವಾಗಿ ಬಂದ ಕಾರಣ ಬೈಕ್ ಸವಾರನಿಗೆ ಅಪಘಾತವಾಗಿದ್ದು ತುಮಕೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರ ಸ್ಥಿತಿಯು ಚಿಂತಾಜನಕವಾಗಿರುತ್ತದೆ ಇದನ್ನು ಮನಗೊಂಡು ನಗರಸಭೆಯು ತುರ್ತಾಗಿ ಹಂದಿ ಮಾಲೀಕರ ಸಭೆ ನಡೆಸಬೇಕಾದ ಅನಿವಾರ್ಯವಾಗಿದೆ ಎಂದರು.
ಅಪಘಾತಕ್ಕೆ ಹಂದಿ ಮಾಲೀಕರೆ ಹೊಣೆಗಾರರು ಎಂದು ಸಭೆಯಲ್ಲಿ ಹಂದಿ ಮಾಲೀಕರಿಗೆ ಎಚ್ಚರಿಸಲಾಯಿತು.
ಈ ದಿನದಂದಲೇ ಸಂಪೂರ್ಣವಾಗಿ ಹಂದಿಗಳನ್ನು ನಗರ ಪ್ರದೇಶದಿಂದ ಹೊರಗಡೆ ಸಾಗಣಿಕೆ/ಸಾಕಣಿಕೆ ಮಾಡಲು ಸೂಚಿಸಿದೆ ತಪ್ಪಿದಲ್ಲಿ ನಗರಸಭೆ ವತಿಯಿಂದ ಹಂದಿಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಸಾಗಿಸುವ ವ್ಯವಸ್ಥೆ ಮತ್ತು ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ಕಲಂ 223 ರಂತೆ ಯಾವುದೇ ನಷ್ಠಕ್ಕೆ ನಗರಸಭೆ ಜವಬ್ದಾರಿಯಾಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಸಹಾಯಕ ಕಾರ್ಯಪಾಲಕ ಅಭಿಯಂತರ, ಪರಿಸರ ರವೀಂದ್ರ ನಾಥ್ ಅಂಗಡಿ, ಹಿರಿಯ ಆರೋಗ್ಯ ನಿರೀಕ್ಷಕ ಸುನೀಲ್ ಕುಮಾರ್ ಹೆಚ್.ಟಿ, ಸಂಧ್ಯಾ ವೈ.ಎಸ್ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕ ಅಶೋಕ್ ಕುಮಾರ್.ಎಸ್, ಮಹಾಲಿಂಗರಾಜು, ನಯಾಜ್ ಶರೀಫ್ ನಗರದ ಹಂದಿ ಮಾಲೀಕರು ಇದ್ದರು.
“ನಗರಸಭೆ ವತಿಯಿಂದ ಹಂದಿ ಮಾಲೀಕರಿಗೆ ಹಂದಿಗಳನ್ನು ತಕ್ಷಣವೇ ಹಿಡಿದು ನಗರದೊಳಗೆ ಬಿಡದಂತೆ ಎಚ್ಚರಿಸಿದ ತಕ್ಷಣವೇ ಮರುದಿನ ಬೆಳಿಗ್ಗೆ ಹಂದಿ ಮಾಲೀಕರು ಹಂದಿಗಳನ್ನು ಹಿಡಿದು ಹೊರಗಡೆ ಸಾಗಿಸಲಾಯಿತು ಮತ್ತೆ ಹಂದಿಗಳು ನಗರದೊಳಗೆ ಬಂದರೆ ಜನರಿಗೆ ಅಥವಾ ಸಂಚಾರಕ್ಕೆ ಅಡ್ಡಿ ಬಂದಲ್ಲಿ ಹಂದಿ ಮಾಲೀಕರೇ ಜವಾಬ್ದಾರರಾಗಿರಬೇಕಾಗುತ್ತದೆ ಹಂದಿಗಳನ್ನು ನಗರದೊಳಗೆ ಬಿಡದಂತೆ ನೋಡಿಕೊಳ್ಳಬೇಕು ಹಂದಿ ಮಾಲೀಕರಿಗೆ ಪದೇ ಪದೇ ನಗರದೊಳಗೆ ಹಂದಿಗಳನ್ನು ಬಿಟ್ಟರೆ ಹಂದಿ ಮಾಲೀಕರೇ ನೇರ ಹೊಣೆಗಾರರಾಗಿರುತ್ತಾರೆ ಎಚ್ಚೆತ್ತಿಕೊಂಡರೆ ನಿಮಗೆ ಒಳ್ಳೆಯದು ಮುಂದಾಗುವ ಅನಾಹುತಕ್ಕೆ ನೀವೇ ಹೊಣೆಗಾರರಾಗಬೇಕಾಗುತ್ತದೆ”.
“ಹಂದಿಗಳನ್ನು ಹಿಡಿಯುವಂತೆ ಸಾರ್ವಜನಿಕರು ಕನ್ನಡ ಪರ ಸಂಘಟನೆಗಳು ದಲಿತಪರ ಸಂಘಟನೆಗಳು ಸಾಕಷ್ಟು ನಗರಸಭೆ ಪೌರಾಯುಕ್ತರುಗೆ ಮನವಿ ಸಲ್ಲಿಸಲಾಗಿದೆ ಹಂದಿಗಳು ಸಂಚಾರಕ್ಕೆ ಅಡ್ಡಿ ಮಾಡಿ ಸಾಕಷ್ಟು ಜನ ಕಾಲು ಕೈ ಮುರಿದುಕೊಂಡಿರುವ ದೃಶ್ಯಗಳು ದೂರ ನೀಡಲಾಗಿದೆ ಹಂದಿಗಳ ಕಾಟ ತಪ್ಪಿಸುವಂತೆ ಸಾರ್ವಜನಿಕರು ದಲಿತ ಪರ ಸಂಘಟನೆಗಳು ಸಂಘ ಸಂಸ್ಥೆಗಳು ರೈತ ಪರ ಸಂಘಟನೆಗಳು ಒತ್ತಾಯವಾಗಿದೆ ಸುಮಾರು ವರ್ಷಗಳಿಂದ ಹಂದಿ ಮಾಲೀಕರ ಮೇಲೆ ಸಭೆ ಹಂದಿಗಳನ್ನು ಹಿಡಿಯುವಂತೆ ತಿಳಿಸುತ್ತೀರಾ ಒಂದು ವಾರ ಆದ ನಂತರ ಮತ್ತೆ ಹಂದಿಗಳು ನಗರಕ್ಕೆ ಬಿಡುತ್ತಾರೆ ಈ ಸಲವಾದರೂ ಸೂಕ್ತವಾದ ಕಾನೂನು ಕ್ರಮ ಜರುಗಿಸಿ ಹಿಂದಿ ಮಾಲೀಕರ ವಿರುದ್ಧ ಹಂದಿಗಳನ್ನು ನಗರದೊಳಗೆ ಬಿಟ್ಟರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಘ ಸಂಸ್ಥೆಗಳು ಸಾರ್ವಜನಿಕರು ಒತ್ತಾಯಿಸಿದ್ದಾರೆ”.
“ಹಂದಿಗಳು ಸಂಚಾರಕ್ಕೆ ಸಾಕಷ್ಟು ಅಡ್ಡಿ ಮಾಡಿದ್ದಾವೆ ಸಣ್ಣ ಮಕ್ಕಳಿಗೂ ಹಾಗೂ ನಗರದ ಚರಂಡಿಯಲ್ಲಿ ಬಿದ್ದು ನೀರು ಮುಂದೆ ಹರಿಯುವುದಿಲ್ಲ ಗುಂಡಿ ಬಿದ್ದು ನೀರು ಅಲ್ಲೇ ನಿಂತು ಸೊಳ್ಳೆಗಳ ಕಾಟ ಜಾಸ್ತಿಯಾಗುತ್ತವೆ ಎಂದು ಸಾಕಷ್ಟು ಮನವಿಗಳು ಬಂದಿದ್ದಾವೆ ಆದಕಾರಣ ಸಾಕಷ್ಟು ಬಾರಿ ಹಂದಿ ಮಾಲೀಕರಿಗೆ ಸಭೆ ನಡೆಸಿ ಹಂದಿಗಳನ್ನು ನಗರದೊಳಗೆ ಬಿಡದಂತೆ ತಿಳಿಸಿದ್ದೇವೆ ಆದರೂ ಮುಂದಿನ ದಿನಗಳಲ್ಲಿ ನಗರದೊಳಗೆ ಹಂದಿಗಳನ್ನು ಬಿಟ್ಟರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಹಂದಿ ಮಾಲೀಕರಿಗೆ ತಿಳಿಸಿದ್ದೇವೆ”.
ಎ ವಾಸೀಂ, ಪೌರಾಯುಕ್ತರು, ನಗರಸಭೆ, ಹಿರಿಯೂರು.

