ಚಾಲಕರಿಗೆ ವಾಹನದ ತಾಂತ್ರಿಕ ಅಂಶಗಳ ಅರಿವು ಅಗತ್ಯ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲ್ಲೂಕಿನ ಹೆಸರಾಂತ ಇಚರ್
ಟ್ರಕ್ ಮಾರಾಟ ಸಂಸ್ಥೆ ಪಿಎಸ್ಎನ್ ವತಿಯಿಂದ ಚಾಲಕರಿಗೆ ಸುರಕ್ಷತಾ ತರಬೇತಿ ಹಾಗೂ ಇಚರ್ 6048 ಎಕ್ಸ್ ಪಿ 16 ಚಕ್ರದ ವಾಹನ ಹಾಗೂ ಇತರೆ ವಾಹನಗಳ ತಾಂತ್ರಿಕ ವಿಷಯಗಳ ಬಗ್ಗೆ  ಅರಿವು ಮೂಡಿಸುವ ಕಾರ್ಯಕ್ರಮವನ್ನು ಇಲ್ಲಿನ ಬಿರ್ಲಾ ಸೂಪರ್ ಮತ್ತು ಅಲ್ಟ್ರಾಟೆಕ್  ಲಿಮಿಟೆಡ್ ನಲ್ಲಿ  ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಪಿ ಎಸ್ ಎನ್ ದೊಡ್ಡಬಳ್ಳಾಪುರ ಘಟಕದ ವ್ಯವಸ್ಥಾಪಕ ಯುವರಾಜ್ ಭಾಗವಹಿಸಿ ಮಾತನಾಡಿ ಚಾಲಕರಿಗೆ ಕೇವಲ ಚಾಲನೆ ಬಗ್ಗೆ ತಿಳುವಳಿಕೆ ಇದ್ದರೆ ಸಾಲದು ಜೊತೆಗೆ ವಾಹನದ ತಾಂತ್ರಿಕ ಅಂಶಗಳ ಬಗ್ಗೆ  ಸಂಪೂರ್ಣ ಮಾಹಿತಿ ಇದ್ದಾಗಲೇ ಉತ್ತಮ ವಾಹನ ಚಾಲಕರಾಗಿ ಗುರುತಿಸಿಕೊಳ್ಳಲು ಸಾಧ್ಯ ಎಂದರು.

- Advertisement - 

 ಚಾಲಕರ ಸುರಕ್ಷತೆ ಅತ್ಯಂತ ಅವಶ್ಯಕ  ವಾಹನ ಚಲಾಯಿಸುವಾಗ ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯ , ಮಧ್ಯಪಾನ ಸೇವಿಸಿ ವಾಹನ ಚಲಾಯಿಸುವುದು, ವಾಹನ ಚಲಾಯಿಸುವಾಗ ಮೊಬೈಲ್ ನಲ್ಲಿ ಮಾತನಾಡುವುದು , ರಸ್ತೆ ನಿಯಮಗಳನ್ನು ಉಲ್ಲಂಘನೆ  ಮಾಡಬಾರದು. ಸೀಟ್ ಬೆಲ್ಟ್ ಧರಿಸಿ ಚಾಲನೆ ಮಾಡುವಾಗ ನಿಯಮಿತ ವೇಗವನ್ನು ಕಾಪಾಡಿಕೊಳ್ಳುವ ಮೂಲಕ  ಚಾಲಕರು ಸುರಕ್ಷತೆಯಿಂದ ಕರ್ತವ್ಯ ನಿರ್ವಹಿಸುವುದನ್ನು ರೂಡಿಸಿಕೊಳ್ಳಬೇಕು. ನಿಮಗಾಗಿ ನಿಮ್ಮ ಕುಟುಂಬ ಮನೆಯಲ್ಲಿ ಕಾಯುತ್ತಿದೆ ಎಂಬುದು ಎಂದಿಗೂ ಮರೆಯಬಾರದು ಎಂದರು.

ಈ ವೇಳೆ ಇಚರ್ 16-ಚಕ್ರದ ಟ್ರಕ್‌ ವಾಹನದ ಕಾರ್ಯ ವೈಖರಿ ಹಾಗೂ ಸಾಮರ್ಥ್ಯದ ಬಗ್ಗೆ ನೆರೆದಿದ್ದ ಚಾಲಕರಿಗೆ ಮಾಹಿತಿ ನೀಡಲಾಯಿತು.ಈ ಕುರಿತು ಮಾತನಾಡಿದ ಅವರು ಪ್ರಮುಖವಾಗಿ ಇಚರ್ ಪ್ರೋ 6048 ನಂತಹ ಮಾದರಿಗಳು 48-ಟನ್ ಸಾಮರ್ಥ್ಯ, BS-VI ಇಂಜಿನ್, 300hp ಶಕ್ತಿ ಮತ್ತು 1200 Nm ಟಾರ್ಕ್ ಹೊಂದಿದ್ದು, ದೀರ್ಘ-ಪ್ರಯಾಣದ ಸಾರಿಗೆಗೆ ಸೂಕ್ತವಾಗಿವೆ.

- Advertisement - 

ಇವುಗಳು ಇಂಧನ-ಸಮರ್ಥ VEDX8 ಇಂಜಿನ್‌ನೊಂದಿಗೆ ಬಲವಾದ ಕಾರ್ಯಕ್ಷಮತೆ ನೀಡುತ್ತವೆ ಮತ್ತು ವಿವಿಧ ಟಿಪ್ಪರ್, ಹೌಲೇಜ್ ಮಾದರಿಗಳಲ್ಲಿ ಲಭ್ಯವಿದೆ ಎಂದರು.
ಈ ಸಂದರ್ಭದಲ್ಲಿ ಪಿ ಎಸ್ ಎನ್ ಸಂಸ್ಥೆಯ ಮಾರಾಟ ವಿಭಾಗದ ವ್ಯವಸ್ಥಾಪಕ ಅಭಿಜಿತ್
, ಸಿಬ್ಬಂದಿಗಳಾದ ಜೈರಾಜ್  ಕಾರ್ತಿಕ್ ಮತ್ತಿತರರು ಉಪಸ್ಥಿತರಿದ್ದರು.

 

 

Share This Article
error: Content is protected !!
";