ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜೆಡಿಎಸ್ಎಲ್ಲಿದೆ? ಎಂದು ಕೊಂಕು ಮಾತನಾಡುವ ಟ್ರೋಲ್ಮೆಟೀರಿಯಲ್ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮಪ್ಪ (ಮಲ್ಲಿಕಾರ್ಜುನ ಖರ್ಗೆ) 8 ಬಾರಿ ಗೆದ್ದಿದ್ದ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದಲ್ಲೇ ಜೆಡಿಎಸ್ ಗೆದ್ದಿದೆ. ನಮ್ಮ ಶಾಸಕರು ವಿಧಾನಸಭೆಯನ್ನೂ ಪ್ರವೇಶಿಸಿದ್ದಾರೆ ಎಂದು ಜೆಡಿಎಸ್ ಟಾಂಗ್ ನೀಡಿದೆ.
ನಿಮ್ಮ ಇಲಾಖೆಯ ವಿಷಯಗಳನ್ನು ಬಿಟ್ಟು, ಇಲ್ಲ ಸಲ್ಲದ ವಿಚಾರಗಳ ಬಗ್ಗೆ ಮೂಗು ತೂರಿಸುವ ಅಧಿಕ ಪ್ರಸಂಗ ಬಿಡಿ.
ಜೆಡಿಎಸ್ಈಗಲೂ ಇದೆ, ಎನ್ ಡಿಎ ಮೈತ್ರಿಕೂಟದ ಸರ್ಕಾರ ರಾಜ್ಯದಲ್ಲಿ 2028ಕ್ಕೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಜೆಡಿಎಸ್ ತಿಳಿಸಿ ಟಾಂಗ್ ನೀಡಿದೆ.

